Breaking News

ವಿದ್ಯುತ್‌ಗೆ ಆಗ್ರಹಿಸಿ ಕೆಇಬಿ ಕಚೇರಿಗೆ ರೈತರ ಮುತ್ತಿಗೆ

Farmers besieged KEB office demanding electricity

ಜಾಹೀರಾತು

ಸಾವಳಗಿ: ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಸುವಂತೆ ಒತ್ತಾಯಿಸಿ ರೈತ ಸಮುದಾಯ ಕೆಇಬಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದಲ್ಲಿ ಕೆಇಬಿ ಕಛೇರಿಗೆ ಸಾವಳಗಿ, ಟಕ್ಕಳಕಿ, ಶೂರಪಾಲಿ ಟಕ್ಕೋಡ, ಕುರಗೋಡ, ಸೇರಿದಂತೆ ಅನೇಕ ವಿವಿಧ ಗ್ರಾಮಕ್ಕೆ ಸರಿಯಾಗಿ ವಿದ್ಯುತ್ ಸಂಪರ್ಕ ನೀಡುತ್ತಿಲ್ಲವೆಂದು ಸೋಮವಾರ ಸಾವಳಗಿ ಹಾಗೂ ಸುತ್ತಮುತ್ತಲಿನ ರೈತರು ಕೂಡಿಕೊಂಡು ಕೆಇಬಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಮಳೆ ಕೊರತೆಯಿಂದಾಗಿ ಬರಗಾಲ ಸೃಷ್ಟಿಯಾಗಿದ್ದು, ರೈತರನ್ನು ಹೈರಾಣಾಗಿಸಿದೆ. ವಿದ್ಯುತ್ ಕೊರತೆಯಿಂದ ಬೆಳೆಗಳು ಹಾಗೂ ತರಕಾರಿ ಬೆಳೆಗಳನ್ನು ಉಳಿಸಿಕೊಳ್ಳಲು ಪರದಾಡುವಂತಾಗಿದೆ. ನಿರೀಕ್ಷಿತ ಉತ್ಪಾದನೆ ಕೊರತೆಯಿಂದ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಕೃಷಿ ಪಂಪ್‌ಸೆಟ್‌ಗಳಿಗೆ ಸರಿಯಾಗಿ ವಿದ್ಯುತ್ ಪೂರೈಕೆ ಮಾಡಬೇಕು ಎಂದು ರೈತರು ಆಗ್ರಹಿಸಿದರು.

About Mallikarjun

Check Also

ಗುರುಪೌರ್ಣಮಿ ನಿಮಿತ್ತ ವಿಶೇಷ ಧಾರ್ಮಿಕ ಕಾರ್ಯಕ್ರಮ: ಟಿ.ರಾಮಕೃಷ್ಣ

Special religious program on the occasion of Gurupournami: T. Ramakrishna ಗಂಗಾವತಿ, ಜು.08: ಹೊರವಲಯದ ಆನೆಗೊಂದಿ ರಸ್ತೆಯಲ್ಲಿರುವ …

Leave a Reply

Your email address will not be published. Required fields are marked *