Amareshwar Rathotsava was held in grand style.
ಕುಷ್ಟಗಿ/ತಾವರಗೇರಾ: ಸಮೀಪದ ಎಸ್ ಅಡವಿಭಾವಿ ಗ್ರಾಮದ ಕೊಳ್ಳದ ಅಮರೇಶ್ವರ ಮಹಾರಥೋತ್ಸವವು ಪ್ರತಿ ವರ್ಷದಂತೆ ಹೋಳಿ ಹುಣ್ಣಿಮೆ ದಿನದಂದು ಸೋಮವಾರ ಸಾಯಂಕಾಲ ಸುತ್ತ ಮುತ್ತ ಹತ್ತಾರು ಹಳ್ಳಿಗಳ ಸಾವಿರಾರು ಜನಸಂದಣಿಯಲ್ಲಿ ಬಹು ವಿಜೃಂಭಣೆಯಿಂದ ಅದ್ದೂರಿಯಾಗಿ ಜರುಗಿತು.
ಬೆಳಿಗ್ಗೆ ಐದು ಗಂಟೆಯಿಂದ ಮಹಾರುದ್ರಾಭಿಷಕ ನಂದಿಧ್ವಜ ಮೆರವಣಿಗೆ ಪಲ್ಲಕ್ಕಿ ಉತ್ಸವ ಧೀರ್ಘ ದಂಡ ನಮಸ್ಕಾರ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಬಳಿಕ ಅಂಕಲಗಿ ಶ್ರೀ ಗಳು ಆಶಿರ್ವಚನ ನೀಡುವ ಮೂಲಕ ರಥಕ್ಕೆ ಪೂಜೆ ಸಲ್ಲಿಸಿದರು.
ತದನಂತರ ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪುರ ಹಾಗೂ ಕರ್ನಾಟಕ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಶಾಸಕ ದೊಡ್ಡನಗೌಡ ಹೆಚ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಕೆ ಮಹೇಶ, ಬಿಜೆಪಿ ಮುಖಂಡ ಪ್ರಕಾಶ್ ಗೌಡ ಬೆದವಟಿಗೆ ಸೇರಿದಂತೆ ಇತರರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಅಮರೇಶ್ವರ ದರ್ಶನ ಪಡೆದರು.
ಸಾಯಂಕಾಲ ೬ಘಂಟೆಗೆ ಸುತ್ತ ಮುತ್ತಲಿನ ಗ್ರಾಮಗಳ ಸಾವಿರಾರು ಜನ ಅಮರೇಶ್ವರ ಭಕ್ತರು ಸೇರಿ ಮಹಾರಥೋತ್ಸವ ಎಳೆದರು ಅದಕ್ಕೂ ಮೊದಲು ರಥಕ್ಕೆ ಹಾರ ತೂರಾಯಿಗಳನ್ನು ವಿವಿಧ ಹಳ್ಳಿಗಳ ಭಕ್ತರು ಸಕಲ ವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ತರುವ ಮೂಲಕ ತೇರನ್ನು ಹೂಗಳ ಮಾಲೆಯಲ್ಲಿ ಶೃಂಗಾರಗೊಳಿಸಲಾಗಿತ್ತು.
ವಿವಿಧ ಜಿಲ್ಲೆಗಳ ಭಕ್ತರು ಬಂದು ಮಹಾರಥೋತ್ಸವವನ್ನು ಕಣ್ತುಂಬಿಕೊಂಡು ಅಮರೇಶ್ವರನ ಕೃಪೆಗೆ ಪಾತ್ರರಾದರು.
ಗ್ರಾಮ ಚಿಕ್ಕದಾಗಿದ್ದರೂ ಯುವಕರು ಹಿರಿಯರು ಒಗ್ಗಟ್ಟಾಗಿ ಜಾತ್ರಾ ಮಹೋತ್ಸವವನ್ನು ಅತ್ಯಂತ ವೈಭವದಿಂದ ನಡೆಸುವ ಪರಿಯನ್ನು ಪರ ಸ್ಥಳದಿಂದ ಬಂದ ಭಕ್ತರು ಕೊಂಡಾಡಿದರು.
ನಾಳೆ ಕಡುಬಿನ ಕಾಳಗ ಧಾರ್ಮಿಕ ಕಾರ್ಯಕ್ರಮಗಳು ನಡೆಯುವ ಕಾರಣ ಪ್ರಸಾದ ಸೇವೆ ಇಡೀ ದಿನ ಇರುತ್ತದೆ ಎಂದು ಗ್ರಾಮಸ್ಥರು ಪತ್ರಿಕೆಗೆ ಮಾಹಿತಿ ನೀಡಿದರು.
ಫೋಟೋ 1) ಬೆಳಿಗ್ಗೆ ನಂದಿಧ್ವಜ ಮೆರವಣಿಗೆ ಹಾಗೂ ಪಲ್ಲಕ್ಕಿ ಉತ್ಸವ ಧೀರ್ಘ ದಂಡ ನಮಸ್ಕಾರ ಗಳ ಚಿತ್ರ.
2) ಮಹಾರಥೋತ್ಸವದ ಚಿತ್ರ