Breaking News

ಕುಡಿಯುವ ನೀರಿಗಾಗಿ ಅಸ್ತೂರು ಗ್ರಾಮದಲ್ಲಿ ಮತದಾನ ಬಹಿಸ್ಕಾರದ ಎಚ್ಚರಿಕೆ :ಅಸ್ತೂರು ರವಿಕುಮಾರ್ ಪ್ರತಿಕ್ರಿಯೆ

Boycott warning in Astur village for drinking water: Astur Ravikumar’s response

ಜಾಹೀರಾತು


ವರದಿ : ಬಂಗಾರಪ್ಪ ಸಿ ಹನೂರು .
ಹನೂರು :ಮೂಲಭೂತ ಸೌಲಭ್ಯಗಳಲ್ಲೊಂದಾದ‌ ಕುಡಿಯುವ ನೀರನ್ನು ಪ್ರಧಾನ ಮಂತ್ರಿಯವರು ಪ್ರತಿ ಮನೆಗೂ ತಲುಪಿಸುವ ಉದ್ದೇಶದಿಂದ ಸಾವಿರಾರು ಕೋಟಿ ಹಣ ವ್ಯಯಿಸಿ ಪ್ರತಿ ಮನೆಗೂ ತಲುಪಿಸುವ ಯೋಜನೆ ಕೈಗೊಂಡಿರುವುದು ಸ್ವಾಗತ ಆದರೆ ನಮ್ಮ ಗ್ರಾಮದಲ್ಲಿ ಶೀತಿಲಾವಸ್ಥೆಗೆ ತಲುಪಿರುವ ನೀರಿನ ಹಳೆಯ ಟ್ಯಾಂಕ್ ಗೆ ತೇಪೆಯಾಕಿ ಕೈತೊಳೆದುಕೊಂಡಿದ್ದಾರೆ ಅದ್ದರಿಂದ ನಮಗೆ ನಮ್ಮ ಬೇಡಿಕೆ ಈಡೆರುಸುವರೆಗೂ ಮತದಾನ ಮಾಡದಿರಲು ತಿರ್ಮಾನಿಸಿದ್ದೆವೆ ಎಂದು ಯುವ ಮುಖಂಡ ರವಿಕುಮಾರ್ ತಿಳಿಸಿದರು.
ಹನೂರು ತಾಲ್ಲೂಕು ಅಸ್ತೂರು ಗ್ರಾಮದಲ್ಲಿ ಕುಡಿಯುವ ನೀರಿನ ವಿಷಯವಾಗಿ ಸಂಭಂದಿಸಿದ ಹಾಗೆ ಕಳೆದ ಆರು ತಿಂಗಳಿಂದ ಮನೆಮನೆಗೆ ನೀಡುವ ಯೋಜನೆಯಲ್ಲಿ ಸಾಕಷ್ಟು ಹಣ ವ್ಯಯಿಸಿದ್ದು ಅದರಲ್ಲಿ ಭಾರಿ ಪ್ರಮಾಣದ ಅಕ್ರಮದ ವಾಸನೆ ಕಾಣುತ್ತಿದ್ದು ,ಸ್ಥಳಿಯ ಜನಪ್ರತಿಗಳಿಂದಿಡಿದು ಅಧಿಕಾರಿವರ್ಗದವರೆಗೂ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎನ್ನುವ ಅನುಮಾನ ಮೂಡುತ್ತಿದೆ ,ನಮಗೆ ಗ್ರಾಮದಲ್ಲಿ ಕುಡಿಯುವ ನೀರಿನ ತೊಂಬೆಯು ಶೀತಿಲಾವಸ್ಥೆ ತಲುಪಿದ್ದು ಗ್ರಾಮಕ್ಕೆ ನೂತನ ನೀರಿನ ಟ್ಯಾಂಕ್ ನ ಅವಶ್ಯಕತೆಯಿದೆ ,ಅಲ್ಲದೆ ಬೊರ್ ವೆಲ್ ಗಳ ಅವಶ್ಯಕತೆಯಿದೆ ಈಗಾಗಲೇ ಸಾಕಷ್ಟು ಬಾರಿ ಅಧಿಕಾರಿಗಳಿಗೆ ದೂರು ನೀಡಿದರು ಯಾವುದೇ ಪ್ರಯೋಜನವಿಲ್ಲ ಅದ್ದರಿಂದ ಮುಂದಿನ ದಿನಗಳಲ್ಲಿ ಲೋಕಸಭಾ ಚುನಾವಣಾ ಸಮಯದಲ್ಲಿ ಮತದಾನ ಬಹಿಸ್ಕಾರ ಮಾಡಲು ತಿರ್ಮಾನಿಸಲಾಗುವುದು ಎಂದು ಗ್ರಾಮದ ಯುವ ಮುಖಂಡರಾದ ರವಿಕುಮಾರ್ ತಿಳಿಸಿದರು .
ಚಾಮರಾಜನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಹನೂರು ತಾಲೋಕಿನ ಅಸ್ತೂರು ಗ್ರಾಮದಲ್ಲಿ ಈ ಹಿಂದೆಯೆ ಗ್ರಾಮಸ್ಥರುಗಳ ಸಮ್ಮುಖದಲ್ಲಿ ಕುಡಿಯುವ ನೀರಿನ ಅವಶ್ಯಕತೆಯನ್ನು ಮನಗಂಡು ನೂತನ ಟ್ಯಾಂಕ್ ನಿರ್ಮಾಣ ಹಾಗೂ ಎರಡು ಬೊರ್ ವಲ್ ಕೊರೆಸಲು ನಾವು ಅಧಿಕಾರಿಗಳಿಗೆ ಮನವಿ ನೀಡಿದ್ದೇವು ಆದರೆ ಮುಂದಿನ ದಿನಗಳಲ್ಲಿ ಹಬ್ಬಹರಿದಿನ ಬರುವುದರಿಂದ ನಮಗೆ ನೀರಿನ ಅವಶ್ಯಕತೆಯಿದೆ ಆದರೆ ಇದುವರೆಗೂ ಗ್ರಾಮದಲ್ಲಿ ಸಮಸ್ಯೆ ಇತ್ಯರ್ಥ ಮಾಡಲು ಅಧಿಕಾರಿಗಳು ಕಾರ್ಯನ್ಮೂಕರಾಗದ ಕಾರಣ ನಾವು ಮುಂದಿನ ಲೋಕಸಭಾ ಚುನಾವಣಾ ಮತದಾನ ನಡೆಯುವ ದಿನ ಮತದಾನವನ್ನು ಬಹಿಸ್ಕಾರ ಮಾಡಲು ಗ್ರಾಮದಲ್ಲಿನ ಕೆಲವರು ತಿರ್ಮನಿಸಿದ್ದೆವೆ ಎಂದು ಗ್ರಾಮದ ಮುಖಂಡರಾದ ಉದ್ಯಮಿ ಬೆಂಗಳೂರು ನಾಗೇಶ್ ತಿಳಿಸಿದರು .
ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷರಾದ ಎಸ್ ಕೋಟೇಬಸಪ್ಪ ಮಾತನಾಡಿ ನಮ್ಮ ಗ್ರಾಮದಲ್ಲಿ ಸರಿಯಾದ ಚರಂಡಿಗಳಿಲ್ಲದೆ ರಸ್ತೆಗಳಲ್ಲೆ ನೀರು ಹರಿಯುತ್ತಿದ್ದು ಹಬ್ಬ ಗಳನ್ನು ಮಾಡುವಾಗ ಹೆಚ್ವು ಜನಸಂಖ್ಯೆ ಸೇರುತ್ತವೆ ಇದೇ ವಿಷಯವಾಗಿ ಸಂಭಂದಿಸಿದ ಅಧಿಕಾರಿಗಳಿಗೆ ತಿಳಿಸಿದರೆ ಯಾವುದೇ ಪ್ರಯೋಜನವಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡರು.
ಇದೇ ವಿಷಯವಾಗಿ ಮಾತನಾಡಿದ ಮತ್ತೋರ್ವ ಮುಖಂಡ ದಾಸಪ್ಪ ನಮ್ಮ ಗ್ರಾಮದಲ್ಲಿ ಇದುವರಿಗೂ ಹಲವಾರು ಸಮಸ್ಯೆಗಳಿದ್ದವು ನಮ್ಮ ಗ್ರಾಮದ ಯುವಕರ ಜೊತೆಗೂಡಿ ನಾವೆಲ್ಲ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಿದ್ದೆವೆ ಅದಾಗಿಯು ಅದಿಕಾರಿಗಳು ನಮ್ಮ ಗ್ರಾಮದ ಮೂಲಭೂತ ಸೌಕರ್ಯಗಳ ಬಗ್ಗೆ ಹೆಚ್ಚಿನ ಒತ್ತು ನೀಡದೆ ಕಾಲಹರಣ ಮಾಡುತ್ತಿದ್ದಾರೆ ಇದರಿಂದ ಬೆಸತ್ತು ನಾವು ಮತದಾನದಿಂದ ಹೊರಗೂಳಿಯಲು ನಿರ್ಧರಿಸಿದ್ದೆವೆ ಎಂದು ತಿಳಿಸಿದರು .
ಇದೇ ಸಮಯದಲ್ಲಿ ಪೊನ್ನಾಚಿ ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷರಾದ ಎಸ್ ಕೋಟೆಬಸಪ್ಪ . ಪುರೋಹಿತರಾದ ಕೆಂಪರಾಜು ಸೇರಿದಂತೆ ಇನ್ನಿತರರು ಹಾಜರಿದ್ದರು .

About Mallikarjun

Check Also

ಬಸವ ಜಯಂತಿ ನಮ್ಮ ಹೃದಯದಲ್ಲಿ ಭಕ್ತಿ ಮತ್ತು ಪ್ರೀತಿಯ ಕಂಪನಗಳನ್ನು ಹುಟ್ಟಿಸಲಿ

May Basava Jayanti instill vibrations of devotion and love in our hearts. ಗುರು ಬಸವಣ್ಣನವರ ೮೯೨ನೆಯ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.