Breaking News

ದೇಶಕ್ಕೆ ಮತ್ತೋಮ್ಮೆ ಮೋದಿಪ್ರಧಾನಿಯಾಗಲು ಚಾಮರಾಜನಗರಕ್ಕೆ ನನ್ನ ಗೆಲುವು ಅವಶ್ಯಕ – ಎಸ್ ಬಾಲರಾಜ್

My victory in Chamarajanagar is necessary for Modi to become the Prime Minister of the country again. S Balraj.

ಜಾಹೀರಾತು
Screenshot 2024 03 22 20 15 59 25 6012fa4d4ddec268fc5c7112cbb265e7 1024x735


ವರದಿ :ಬಂಗಾರಪ್ಪ ಸಿ
ಹನೂರು ;ನಮ್ಮ ದೇಶಕ್ಕೆ ಮತ್ತೋಮ್ಮೆ ನರೇಂದ್ರ
ಮೋದಿಯವರು ಫ್ರಧಾನಿಯಾಗುವುದು ದೇಶಕ್ಕೆ ಅನಿವಾರ್ಯವಾಗಿದೆ ಎಂದು ಚಾಮರಾಜನಗರ ಲೋಕ ಸಭಾ ಕ್ಷೇತ್ರದ ಎನ್ ಡಿ ಎ ಅಭ್ಯರ್ಥಿಯಾದ ಎಸ್.ಬಾಲರಾಜ್ ತಿಳಿಸಿದರು .
ಹನೂರು ಪಟ್ಟಣದ ಹೊರವಲಯದಲ್ಲಿರುವ ಶ್ರೀ ಗೌರಿ ಶಂಕರ ಕಲ್ಯಾಣ ಮಂಟಪದಲ್ಲಿ ಭಾರತೀಯ ಜನತಾ ಪಾರ್ಟಿ ಹನೂರು ವಿಧಾನಸಭಾ ಕ್ಷೇತ್ರದ ವತಿಯಿಂದ ಆಯೋಜಿಸಿದ್ದ ಚಾಮರಾಜನಗರ ಲೋಕಾಸಭಾ ಚುನಾವಣೆ 2024 ರ ಕಾರ್ಯಕ ‘ರ್ತರ ಸಭೆಯನ್ನೂದ್ದೇಶಿಸಿ ಮಾತನಾಡಿದ ಅವರು ನರೇಂದ್ರ ಮೋದಿಯವರು ಗುಜರಾತ್ ರಾಜ್ಯದಲ್ಲಿ ಮೂರು ಭಾರಿ ಸಿ ಎಮ್ ಆದರು ಮತ್ತು ದೇಶದಲ್ಲಿ ಎರಡುಬಾರಿ ಪ್ರಧಾನಿಯಾಗಿ ಮತ್ತೋಮ್ಮೆ ಮೂರನೆ ಬಾರಿಗೆ ಪ್ರಧಾನಿ ಆಗಲು ದೇಶದ ಜನತೆ ಕಾತರರಾಗಿದ್ದಾರೆ, ಭಾರತಕ್ಕೆ ಕಿರೀಟ ಪ್ರಾಯವಾದ ಜಮ್ಮು ಕಾಶ್ಮೀರಕ್ಕೆ 370 ಕಾಯ್ದೆ ಜಾರಿಗೆ ತಂದವರು. ಹಿಂದೆ ಬರಿ ಗುಂಡಿನ ಸದ್ದು ಕೆಳುತ್ತಿತ್ತು ಈಗ ಅಲ್ಲಿ ನಮ್ಮ ಹಿಂದು ದೇವಾಲಯದ ಘಂಟೆಗಳ ಸದ್ದು ಆಗುತ್ತಿದೆ. ಅಭ್ಯರ್ಥಿ ಆಯ್ಕೆ ಸಂದರ್ಭದಲ್ಲಿ ಚಾಮರಾ ಜನಗರ ಕ್ಷೇತ್ರ ಎಲ್ಲಾ ಮುಖಂಡರುಗಳು ಒಪ್ಪಿಗೆ ಸೂಚಿಸಿದ್ದಾರೆ. ಮುಖ್ಯವಾಗಿ ಯಡಿಯೂರಪ್ಪ ಅವರನ್ನು ಸ್ಮರಿಸುತ್ತೇನೆ ಎಂದರು.ನಮ್ಮ ತಂದೆ ತಾಯಿಗಳು ತಮ್ಮ ಜೀವನವನ್ನು ಸಮಾಜ ಸೇವೆಗೆ ಮುಡಿಪಾಗಿಟ್ಟಿದ್ದರು. ಅದೇ ರೀತಿಯಲ್ಲಿ ನಾನು ಸಹ ಸಾರ್ವಜನಿಕ ಜೀವನದಲ್ಲಿದ್ದೆನೆ .
ನನಗೆ ಕಾಂಗ್ರೇಸ್‌ನಿಂದ ಅನ್ಯಾಯವಾಗಿದೆ. ಅಲ್ಲಿ ಜೀತ ಮಾಡಿದ್ದು ಸಾಕಾಗಿತ್ತು . ನಮ್ಮ ಗುರುಗಳಾದ ರಾಜಶೇಖರ್ ಮೂರ್ತಿ ಮತ್ತು ನಮ್ಮ ನಾಯಕರಾದ ಯಡಿಯೂರಪ್ಪರವರ ಆರ್ಶಿವಾದದಿಂದ ಬಿಜೆಪಿ ಪಕ್ಷವು ನನ್ನ ಕೈ ಹಿಡಿಯುವ ವಿಶ್ವಾಸದಿಂದ ಬಿಜೆಪಿಗೆ ಬಂದೆ.ಅದ್ದರಿಂದ ಕ್ಷೇತ್ರದ ಜನತೆ ನನನ್ನು ಆಶೀರ್ವದಿಸಬೇಕು ,ನಾನು ಯಾವುದೇ ಜಾತಿಗೆ ಸಿಮೀತವಾದವನಲ್ಲ ನಮ್ಮ ಪಕ್ಷವೆ ನಮ್ಮ ಜಾತಿ ನನಗೆ ಮತ ನೀಡಿ ಎಂದು ಮನವಿ ಮಾಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ನಿರಂಜನ್ ಕುಮಾರ್ ಮಾತನಾಡಿ, ಬಾಲರಾಜ್ ಉತ್ತಮ ಅಭ್ಯರ್ಥಿಯಾಗಿದ್ದಾರೆ ಒಳ್ಳೆಯ ಕೆಲಸಗಾರರು. ಸಿದ್ದರಾಮಯ್ಯ ನವರ ಹಲವಾರು ಯೋಜನೆಗಳು ಚುನಾವಣಾ ನಂತರ ವಿಫಲವಾಗಲಿವೆ. ದಲಿತರಿಗೆ ಮಿಸಲಿರಿಸಿದ ಹಣವನ್ನು ಬೇರೆಯ ಕಾರ್ಯಕ್ರಮಗಳಿಗೆ ವಿನಿಯೋಗಿಸಿದ ಅವರು ನೀಜವಾದ ದಲಿತ ವಿರೋಧಿ ಸರ್ಕಾರ, ಯುವಕರಿಗೆ ವಂಚಿಸಿದ ಸರ್ಕಾರ ಎಂದರು .
ಡಾಕ್ಟರ್
ದತ್ತೇಶ್ ಕುಮಾರ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯಲ್ಲಿನ ಪತ್ರಿಕೆಗಳಲ್ಲಿ ಪ್ರಕಟವಾದ ಪ್ರಕಾರ ಮನ್ ಕಿ ಭಾಥ್ ಕಾರ್ಯಕ್ರಮದಲ್ಲಿ ನಡೆದ ಹಲವಾರು ಕಾರ್ಯಕ್ರಮಗಳು ಕೆಳುಗರಿಗೆ ಪ್ರಪಂಚದಲ್ಲಿ ಮಾದರಿ ಯಾಗುವಂತೆ ಮಾಡಿದ್ದಾರೆ .ನಮಗೆ ಮೊದಲು ಬೂತ್ ನಂತರ ಬಾಲರಾಜ್ ಅದಾದ ಮೇಲೆ ಮೋದಿಯವರು ಗೆದ್ದರೆ ಪ್ರಪಂಚವೆ ಗೆದ್ದಂತೆ ಅದ್ದರಿಂದ ಅತ್ಯಂತ ಹೆಚ್ವು ಅಂತರದಲ್ಲಿ ಗೆಲ್ಲಿಸೋಣ ಎಂದರು . ಮಾಜಿ ಶಾಸಕಿ ಪರಿಮಳ ನಾಗಪ್ಪರ ಪುತ್ರರಾದ
ಡಾಕ್ಟರ್ ಪ್ರೀತನ್ ನಾಗಪ್ಪ ಮಾತನಾಡಿ ದೇಶ ಸೇವೆಯಲ್ಲಿ ಮೋದಿಯವರ ಹತ್ತು ವರ್ಷದ ಸಾದನೆಯನ್ನು ಪ್ರತಿ ಮನೆ ಮನೆಗೆ ಪ್ರಚಾರ ಮಾಡಿ ಮತಯಾಚನೆ ಮಾಡಿ ನಾವೆಲ್ಲರೂ ನಿಮ್ಮ ಜೊತೆಯಲ್ಲಿ ಇರುತ್ತೆವೆ ,ಕಾರ್ಯಕರ್ತರಿಗೆ ಒಬ್ಬ ಉತ್ತಮ ಅಭ್ಯರ್ಥಿ ಸಿಕ್ಕಿದ್ದಾರೆ ಅವರಿಗೆ ನಮ್ಮ ಹನೂರು ಕ್ಷೇತ್ರದಲ್ಲಿ ಮಾತ್ರವಲ್ಲದೆ ಇಡೀ ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರ ಮಾಡಿ ಅತ್ಯಧಿಕ ಮತಗಳ ಅಂತರದಲ್ಲಿ ಗೆಲ್ಲಿಸಲು ಪ್ರಯತ್ನ ಮಾಡೋಣವೆಂದರು .
ಇದೇ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್, ಚುನಾವಣೆ ಉಸ್ತು ಜಿಲ್ಲಾ ಸಂಚಾಲಕ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ, ರಾಷ್ಟ್ರೀಯ ಪರಿಷತ್ ಸದಸ್ಯ ವೆಂಕಟಸ್ವಾಮಿ, ವೆಂಕಟೆಗೌಡ ,ಜನದ್ವನಿ ವೆಂಕಟೇಶ್ . ನಿಶಾಂತ್, ಹನೂರು ಮಂಡಲ ಅಧ್ಯಕ್ಷರಾದ ವೃಷಬೇಂದ್ರ ಮಲೆ ಮಹದೇಶ್ವರಬೆಟ್ಟ ಮಂಡಲದ ಅಧ್ಯಕ್ಷ ವಿರಭದ್ರ , ಸೇರಿದಂತೆ ಇನ್ನಿತರರು ಹಾಜರಿದ್ದರು .

About Mallikarjun

Check Also

screenshot 2025 11 11 19 38 54 04 e307a3f9df9f380ebaf106e1dc980bb6.jpg

ಜಿಲ್ಲೆಯ ಯಾವುದೇ ಧಾರ್ಮಿಕ ಮಂದಿರಗಳಲ್ಲಿ ಬಾಲ್ಯ ವಿವಾಹ ಜರುಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ : ಡಾ. ಸುರೇಶ ಇಟ್ನಾಳ

It is our duty to ensure that child marriage does not take place in any …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.