Permission is mandatory for Koppal Lok Sabha election campaigning

ಯಲಬುರ್ಗಾ.ಮಾ.20.: ಕೊಪ್ಪಳ ಲೋಕ ಸಭಾ ಚುನಾವಣೆ ಮಾದರಿ ನೀತಿ ಸಂಹಿತೆ ಮಾರ್ಚ್ 16ರಿಂದ ಜಾರಿಯಲ್ಲಿದ್ದು ಮೇ 7ರಂದು ಮತದಾನ ನಡೆಯಲಿದ್ದು ಚುನಾವಣೆ ಪ್ರಚಾರವನ್ನು ಆಯಾ ಪಕ್ಷಗಳು ಕೈಗೊಳ್ಳುವಲ್ಲಿ ನೀತಿ ಸಂಹಿತೆ ಅಡಿಯ ನಿಯಮಳ ಅನುಸಾರ ಪ್ರಚಾರ ಸಭೆಗಳನ್ನು ಮತ್ತು ಆಯಾ ರಾಜಕೀಯ ಪಕ್ಷಗಳ ಬಹಿರಂಗ ಸಭೆಗಳ ನಡೆಸಲು ಚುನಾವಣಾಧಿಕಾರಿಗಳ ಕಚೇರಿಯಿಂದ ಅನುಮತಿ ಪಡೆಯಬೇಕು ಎಂದು ಸಹಾಯಕ ಚುನಾವಣಾಧಿಕಾರಿ ಟಿ.ಎಸ್ ರುದ್ರೇಶಪ್ಪ ಹೇಳಿದರು.
ಪಟ್ಟಣದ ಕಂದಾಯ ಭವನದಲ್ಲಿ ಮಂಗಳವಾರ ಕೊಪ್ಪಳ ಲೋಕ ಸಭಾ ಚುನಾವಣೆ ನೀತಿ ಸಂಹಿತೆ ಕುರಿತಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಸಭೆ ನಡೆಸಿ ಮಾತನಾಡಿದರು. ಲೋಕ ಸಭಾ ಚುನಾವಣೆ ಅಧಿಸೂಚನೆ ಏಪ್ರಿಲ್ 12ರಂದು ಹೊರಡಿಸಲಾಗುವದು, ನಾಮ ಪತ್ರ ಸಲ್ಲಿಸುವದು, ನಾಮ ಪತ್ರಗಳ ಪರಿಶೀಲನೆ, ನಾಮ ಪತ್ರ ಹಿಂಪಡೆಯುವದು, ಮೇ 7ರಂದು ಮತದಾನ, ಜೂನ 4ರಂದು ಮತಎಣಿಕೆ ಹೀಗೆ ಚುನಾವಣೆ ಪ್ರಕ್ರಿಯೆ ನಡೆಯಲಿದೆ ಇನ್ನೂ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಬಗ್ಗೆ ನಿಗಾವಹಿಸಲು ಸಿ.ವಿಜಿಲ್ ಮೊಬೈಲ್ ಆಪ್ ನ್ನು ರಚಿಸಲಾಗಿದೆ ಈ ಆಪನ್ನು ಮತದಾರರು ತಮ್ಮ ಮೊಬೈಲ್ ನಲ್ಲಿ ದೌನ್ಲೋಡ್ ಮಾಡಿಕೊಂಡು ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಕಂಡು ಬಂದರೆ ದೂರುಗಳನ್ನು ದಾಖಲಿಸಬಹುದು ಮತ್ತು ಈ ದೂರುಗಳ ಕುರಿತು ಕೊಪ್ಪಳ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸ್ಥಾಪಿಸಲಾದ 1950 ಟೋಲ್ ಪ್ರೀ ಸಹಾಯವಾಣಿ ಮೂಲಕ ದೂರು ಸಲ್ಲಿಸಬಹುದು ಎಂದರು. ತಹಸೀಲ್ದಾರ ಬಸವರಾಜ ತೆನ್ನಳ್ಳಿ ಮಾತನಾಡಿ ಪಟ್ಟಣದ ಕಂದಾಯ ಭವನದಲ್ಲಿ ಚುನಾವಣಾಧಿಕಾರಿಗಳ ಕಚೇರಿ ತೆರೆಯಲಾಗಿದೆ ಎಂದ ಅವರು ಯಲಬುರ್ಗಾ ವಿಧಾನ ಸಭಾ ಕ್ಷೇತ್ರದಲ್ಲಿ 2ಲಕ್ಷ 27ಸಾವಿರ ಎಂಟುನೂರಾ ಎಂಬತಮುರು ಮತದಾರರಿದ್ದು 256ಮತಗಟ್ಟೆಗಳು ಇರಲಿವೆ ಇನ್ನೂ ಚುನಾವಣೆ ಪ್ರಚಾರ ಕೈಗೊಳ್ಳುವ ಪಕ್ಷಗಳ ಮುಖಂಡರು ನೀತಿ ಸಂಹಿತೆ ಒಳಪಟ್ಟ ಅನುಮತಿ ಪಡೆದು ಪೊಲೀಸ್ ಇಲಾಖೆಯಿಂದ ಮೈಕ್, ಸ್ಪೀಕರ್, ಡಿಜೆ ಬಳಸಲು ಅನುಮತಿ ಪಡೆಯಬೇಕು ಎಂದರು. ಈ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಯಲಬುರ್ಗಾ ತಾಲೂಕ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ ಅವರು ಮತ್ತು ಬಿಜೆಪಿ ಪಕ್ಷದ ಯಲಬುರ್ಗಾ ತಾಲೂಕ ಅಧ್ಯಕ್ಷ ಮಾರುತಿ ಗಾವರಾಳ ಸೇರಿ ವಿವಿಧ ಪಕ್ಷಗಳ ಅಧ್ಯಕ್ಷರು ಮುಖಂಡರು ಉಪಸ್ಥಿತರಿದ್ದು ಚುನಾವಣೆ ಪ್ರಕ್ರಿಯೆಗಳ ಕುರಿತು ಚುನಾವಣೆ ಅಧಿಕಾರಿಗಳ ಜೊತೆ ಚರ್ಚಿಸಿದರು.
ವರದಿ: ಖಾಜಾವಲಿ ಎಫ್ ಜರಕುಂಟಿ.
Kalyanasiri Kannada News Live 24×7 | News Karnataka
