Breaking News

ಕೈವಾರತಾತಯ್ಯಜಯಂತಿಯನ್ನುಅದ್ದೂರಿಯಾಗಿಆಚರಿಸಲು:ಗೋಪಾಲ್ ಮನವಿ

Kaiwara Tataya Jayanti to be celebrated lavishly: Gopal appeals.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು


ವರದಿ :ಬಂಗಾರಪ್ಪ ಸಿ .
ಹನೂರು :ರಾಜ್ಯ ಸರ್ಕಾರದ ಆದೇಶದಂತೆ ಇದೇ ತಿಂಗಳು ಮಾರ್ಚ್ 25 /2024 ರ ಸೋಮವಾರದಂದು ಹೋಳಿ ಹುಣ್ಣಿಮೆಯ ಪ್ರಯುಕ್ತ ಶ್ರೀ ಯೋಗಿನಾರೇಯಣ ಕೈವಾರ ತಾತಯ್ಯ ರವರ ಜಯಂತಿ ಆಚರಿಸಲು ಚಾಮರಾಜನಗರ ಜಿಲ್ಲೆಯಾದ್ಯಂತ ಬಲಿಜ ಸಮುದಾಯವರಿಗೆ ಕರ್ನಾಟಕ ರಾಜ್ಯ ಸಮಗ್ರ ಬಲಿಜ ವೇದಿಕೆಯ ಚಾಮರಾಜನಗರ ಜಿಲ್ಲೆಯ ಅಧ್ಯಕ್ಷರು ಹಾಗೂ ಹನೂರು ತಾಲ್ಲೂಕಿನ ಗೌರವ ಅಧ್ಯಕ್ಷರಾದ ಕುರಟ್ಟಿ ಹೊಸೂರಿನ ಗೋಪಾಲ್ ಬಲಿಜ ಸಮಾಜದವರಲ್ಲಿ ಮನವಿ ಮಾಡಿದರು .
ನಂತರ ಮಾತನಾಡಿದ ಅವರು
ನಮ್ಮ ಸಮುದಾಯದಲ್ಲಿ ಅತಿ ಹೆಚ್ಚು ಜನ ಗ್ರಾಮಂತರ ಪ್ರದೇಶಗಳಲ್ಲಿ ವಾಸಿಸುತ್ತಿದ್ದು ರಾಜ್ಯ ಸರ್ಕಾರದಿಂದ ಕೈವಾರ ತಾತಯ್ಯ ರವರ ಜಯಂತಿ ಆಚರಿಸಲು ತಿರ್ಮಾನಿಸಲಾಗಿದೆ ಅದರಂತೆ ಎಲ್ಲಾರು ತಾಲೂಕು ಕೇಂದ್ರದಲ್ಲಿ ಭಾಗವಹಿಸಲು ಹಾಗು ಎಲ್ಲ ಗ್ರಾಮಗಳಲ್ಲಿ ಜಯಂತಿ ಆಚರಿಸಬೇಕು, ರಾಜ್ಯಾಧ್ಯಕ್ಷರಾದ ಮುನಿಕೃಷ್ಣರವರು ಸೂಚನೆ ಮೇರೆಗೆ ಹನೂರು ತಾಲೂಕು ಕುರಟ್ಟಿ ಹೊಸೂರು, ಎಲ್ಲೇಮಾಳ, ಶೆಟ್ಟಳ್ಳಿ, ರಾಮಾಪುರ, ಬದ್ರಯ್ಯ ನಳ್ಳಿ, ಹೀಗೆ ಹಲವಾರು ಊರುಗಳ, ಬಲಿಜ ಜನಾಂಗದ ಮುಖಂಡರುಗಳನ್ನು ಮತ್ತು ಗ್ರಾಮಸ್ಥರನ್ನು ಭೇಟಿ ಮಾಡಿ ಶ್ರೀ ಕೈವಾರ ತಾತಯ್ಯನವರ , ಭಾವಚಿತ್ರವನ್ನು ವಿತರಿಸಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ. ಕರ್ನಾಟಕ ರಾಜ್ಯ ಸಮಗ್ರ ಬಲಜ ವೇದಿಕೆರಾಜ್ಯ ಗೌರವಾಧ್ಯಕ್ಷ ಡಾ. ಎಸ್ ಕೃಷ್ಣಪ್ಪ, ಮಾದೇಶ್, ಬಾಲಾಜಿ, ಟಿ . ಮಹದೇವು, ಕೃಷ್ಣಣ್ಣ, ನಾಗೇಶ್, ಮುದ್ದು, ಮುನಿಶೆಟ್ಟಿ, ರಾಜಣ್ಣ, ದೀಲೀಪ್, ಮುನಿಸ್ವಾಮಿ, ಗುಡ್ಡಣ್ಣ, ಮುತುರಾಜು, ವಿಜಿ, ಶ್ರೀರಂಗಶೆಟ್ಟಿ, ಪಳ್ಳಯ್ಯ ಶೆಟ್ಟಿ, ವೆಂಕಟರಾಜು, ಬಸವರಾಜು, ಮಾಳಶೆಟ್ಟಿ, ನಾಗಮಾದು, ಸೇರಿದಂತೆ ಇತರರು ಹಾಜರಿದ್ದರು .

About Mallikarjun

Check Also

ಜಿಲ್ಲಾ ಕಾಂಗ್ರೆಸ್‌ಗೆ ಕಾರ್ಯದರ್ಶಿಯಾಗಿ ವಿಶಾಲಾಕ್ಷಿ ನೇಮಕ

Vishalakshi appointed as secretary of District Congress ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದ ವಿಶಾಲಾಕ್ಷಿ ವಿರೇಶ ತಾವರಗೇರಿ ಅವರನ್ನು …

Leave a Reply

Your email address will not be published. Required fields are marked *