Gas distribution program for women in Madabavi village

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮದಬಾವಿ ಗ್ರಾಮದಲ್ಲಿ ಪಂಚಮಸಾಲಿ ಸಮಾಜದ ಮುಖಂಡರಾದ ಪ್ರವೀಣ ನಾಯಿಕ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ಉಜ್ವಲ ಯೋಜನೆ ಅಡಿಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಗ್ಯಾಸ್ ವಿತರಣೆ ಕಾರ್ಯಕ್ರಮ ನಡೆಯಿತು.
ಮದಭಾವಿ ಗ್ರಾಮಪಂಚಾಯತ ಅಧ್ಯಕ್ಷರಾದ ಮಹಾದೇವ ಮೇತ್ರಿ (ಕೋರೆ ),ಅರಳಿಹಟ್ಟಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಬಸನಗೌಡ ಪಾಟೀಲ,ಶ್ರೀ ಜೈ ಹನುಮಾನ ಸೊಸೈಟಿ ನಿರ್ದೇಶಕ ಉಮೇಶ ಪಾಟೀಲ,ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ಆರ್ ಎಂ ಪಾಟೀಲ, ಎ ಪಿ ಎಂ ಸಿ ಮಾಜಿ ಅಧ್ಯಕ್ಷ ಮುರಗೆಪ್ಪಾ ಮಗದುಮ್ಮ,ಗ್ರಾಮ ಪಂಚಾಯತ ಸದಸ್ಯರಾದ ಬಾಳು ಮಗದುಮ್ಮ, ಮಹೇಶ ಕೇಸ್ತಿ,ಪಿ ಕೆ ಪಿ ಎಸ್ ನಿರ್ದೇಶಕ ಭೀಮಗೌಡ ನಾಯಿಕ, ತೆವರಟ್ಟಿ ಗ್ರಾಮದ ಮುಖಂಡರಾದ ಬಸಗೌಡ ಪಾಟೀಲ,ಮಲಗೌಡ ಪಾಟೀಲ, ಈಶ್ವರ ಕುಂಬಾರೆ ಅವರು ಗ್ಯಾಸ್ ವಿತರಿಸಿದರು.
ಸುರೇಶ ನಾಯಿಕ, ಸಂತೋಷ ನಾಯಿಕ,ಭರಮು ಖಟಾವಿ, ಬೀರಬಲ ಹಿರೇಕುರಬರ, ಮಹಾದೇವ ಕಾಂಬಳೆ,ಬಬನ ಜಾದವ, ಕಲ್ಲಪ್ಪಾ ಅವಟಿ, ಅಣ್ಣಪ್ಪಾ ಮುದೋಳ, ಮಹಾದೇವ ಹಡಪದ, ಸುಭಾಸ ನಿವಲಗಿ, ಶಿವಾನಂದ ಮಗದುಮ್ಮ, ಬಾಹುಸಾಬ ಪೂಜಾರಿ, ಸೂರಜ ಖೋತ ಹಾಗೂ ಫಲನುಭವಿಗಳಾದ ಮಹಿಳೆಯರು ಉಪಸ್ಥಿತರಿದ್ದರು.