Breaking News

ಅಭಿನಂದನೆಗೆ ಅರ್ಹ ಸಿದ್ಧರಾಮಯ್ಯನವರು

Siddaramaiah deserves congratulations

ಜಾಹೀರಾತು

ಬಸವಾದಿ ಶರಣರ ಚಿಂತನೆಗಳನ್ನು ಸದಾ ಮೆಲುಕು ಹಾಕುವ, ಆಗಾಗ ಬಸವಣ್ಣನವರ ವಚನಗಳನ್ನು ವಿಧಾನಸೌಧದಲ್ಲಿ ಉಲ್ಲೇಖಿಸುವ ಸಿದ್ಧರಾಮಯ್ಯ ನಮ್ಮ ನಡುವಿನ ಅಪರೂಪದ ರಾಜಕಾರಣಿ. ಇದರೊಂದಿಗೆ ಸಾಂದರ್ಭಿಕವಾಗಿ ಮೌಢ್ಯ, ಕಂದಾಚಾರಗಳನ್ನು ಮೆಟ್ಟಿ ತುಳಿಯುವ ಧೀಮಂತ ವ್ಯಕ್ತಿ.

ಜನ್ಮತಃ ಲಿಂಗಾಯತನಾಗಿರುವ ಯಾವ ರಾಜಕಾರಣಿಯೂ ಸಹ ನಾನು ಬಸವಣ್ಣನವರ ಅನುಯಾಯಿ ಎಂದು ಹೇಳಿಲ್ಲ. ಆದರೆ ಸಿದ್ಧರಾಮಯ್ಯನವರು ಮಾತ್ರ ಸಾವಿರಾರು ಸಲ ಈ ಮಾತನ್ನು ಹೇಳಿದ್ದಾರೆ. ಬರೀ ಹೇಳುವುದು ಅಷ್ಟೆ ಅಲ್ಲ, ಬಸವ ಜಯಂತಿಯಂದು ಮುಖ್ಯ ಮಂತ್ರಿಯ ಪದ ಗ್ರಹಣ ಮಾಡುವ ಮೂಲಕ ಅದನ್ನು ಆಗು ಮಾಡಿದ್ದಾರೆ.

ಬಿಜಾಪುರದ ಮಹಿಳಾ ವಿಶ್ವ ವಿದ್ಯಾಲಯಕ್ಕೆ ಶಿವ ಶರಣೆ ಅಕ್ಕಮಹಾದೇವಿಯ ಹೆಸರನ್ನು ನಾಮಕರಣ ಮಾಡಿದ್ದಾರೆ. ಬಸವ ಕಲ್ಯಾಣದಲ್ಲಿ ಅನುಭವ ಮಂಟಪದ ಕಟ್ಟಡಕ್ಕೆ ಅನುದಾನ ನೀಡಿ ಕಾಮಗಾರಿ ಆರಂಭಿಸಿದ್ದಾರೆ. ಶಿವಮೊಗ್ಗದ ಪಾರ್ಕಗೆ ಅಲ್ಲಮಪ್ರಭುವಿನ ಹೆಸರಿನಿಂದ ನಾಮಕರಣ ಮಾಡಿದ್ದಾರೆ. ವಿಶ್ವಗುರು ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿ ತಮ್ಮ ದೃಷ್ಠಿಕೋನ ಎಂಥದ್ದು ಎಂದು ಸ್ಪಷ್ಟ ಪಡಿಸಿದ್ದಾರೆ.

ಇದೆಲ್ಲಕ್ಕಿಂತ ಮುಖ್ಯವಾಗಿ ಬಸವ ಪ್ರಣೀತ ಲಿಂಗಾಯತ ಸ್ವತಂತ್ರ ಧರ್ಮವೆಂದು ಸರಕಾರ ನ್ಯಾಯ ಮೂರ್ತಿ ನಾಗಮೋಹನದಾಸ ವರದಿಯನ್ನು ಒಪ್ಪಿಕೊಂಡಿದೆ. ಈ ವರದಿಯನ್ನು ಕೇಂದ್ರ ಸರಕಾರಕ್ಕೆ ಕಳುಹಿಸಿ ತನ್ನ ದಿಟ್ಟತನ ಮೆರೆದಿದೆ. ಇದಕ್ಕೆಲ್ಲ ಕಾರಣ ಸಿದ್ಧರಾಮಯ್ಯನವರು ಎಂಬುದು ಸ್ಪಷ್ಟ.

ಬಸವ ತತ್ವ ಪ್ರೀತಿಸುವ,ಗೌರವಿಸುವ, ಆ ತತ್ವಗಳ ಚಿಂತನೆಗಳನ್ನು ಜಾರಿಗೆ ಮಾಡಲು ಯತ್ನಿಸುವ ಸಿದ್ಧರಾಮಯ್ಯನೇ ನಿಜ ಲಿಂಗಾಯತ. ಸಿದ್ಧರಾಮಯ್ಯನವರ ಈ ಅಸೀಮ ಪ್ರೇಮವನ್ನು ಗುರುತಿಸಿ ನಿನ್ನೆ ಬಸವ ಕಲ್ಯಾಣದಲ್ಲಿ ಅವರನ್ನು ಗುಲಾಬಿ ಹೂವಿನ ಪಕಳೆಗಳಿಂದ ಅವರನ್ನು ಹೃದಯಾರೆ ಸನ್ಮಾನಿಸಲಾಯಿತು.

ಸಚಿವ ಈಶ್ವರ ಖಂಡ್ರೆ, ಭಾಲ್ಕಿಯ ಡಾ.ಬಸವಲಿಂಗ ಪಟ್ಟದ್ದೇವರು, ಬಸವಪರ ಸಂಘಟನೆಗಳು ಅಭಿನಂದನಾರ್ಹ ಕೆಲಸ ಮಾಡಿವೆ. ಎಲ್ಲರಿಗೂ ಅಭಿನಂದನೆಗಳು.

೦ ವಿಶ್ವಾರಾಧ್ಯ ಸತ್ಯಂಪೇಟೆ

Siddaramaiah #bhalkihiremath #SatishJarkiholi #priyankakarge

About Mallikarjun

Check Also

ಆನೆಗುಂದಿ ಗ್ರಾಮ ಪಂಚಾಯತಿಯಲ್ಲಿ ಗ್ಯಾರಂಟಿ ಯೋಜನೆಗಳ ಪ್ರಗತಿಪರಿಶೀಲನೆ

Progress review of guarantee schemes in Anegundi Gram Panchayat ಗಂಗಾವತಿ: ಸರ್ಕಾರದ ಆದೇಶದಂತೆ ಗ್ಯಾರಂಟಿ ಸಮಿತಿಗಳ ನಡೆ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.