Breaking News

ಮೌಲ್ಯಯುತ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಗವಿಸಿದ್ದಪ್ಪ ಹಾವರಗಿ ಕರೆ

Gavisiddappa Havaragi calls for giving priority to valuable education

ಗಂಗಾವತಿ 06; ಮಕ್ಕಳು ಕೇವಲ ಪಠ್ಯ ಚಟುವಟಿಕೆಯಿಂದ ಇದ್ದರೆ ಸಾಕಾಗುವುದಿಲ್ಲ, ಪಠೇತರ ಚಟುವಟಿಕೆಯಲ್ಲಿ ತೊಡಗಿಕೊಂಡಾಗ ಮಾತ್ರ ವ್ಯಕ್ತಿತ್ವ ವಿಕಸನವಾಗಲಿದೆ ಎಂದು ಗ್ರಾಮ ಪಂಚಾಯತಿ ಸದಸ್ಯ ಗವಿಸಿದ್ದಪ್ಪ ಹಾವರಗಿ ಅಭಿಪ್ರಾಯಪಟ್ಟರು.

ಇಂದರಗಿ ಗ್ರಾಮ ಶ್ರೀ ಇಂದ್ರೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.ಶಿಕ್ಷಣ ಎನ್ನುವುದು ಶಿಸ್ತನ್ನು ಕಲಿಸುವ, ಉತ್ತಮ ವ್ಯಕ್ತಿಯನ್ನಾಗಿಸುವ ಮಾಧ್ಯಮವಾಗಿದ್ದು, ಕೇವಲ ಪುಸ್ತಕದ ವಿದ್ಯೆ ಮಸ್ತಕಕ್ಕೆ ಹೋಗುವುದು ಮಾತ್ರವಲ್ಲ, ಸರ್ವಾಂಗೀಣ ಚಟುವಟಿಕೆಗಳನ್ನು ಮಾಡುವಂತಾಗಬೇಕು ಎಂದ ಅವರು ಶಿಕ್ಷಕರ ಪಾಠಕ್ಕೆ, ಪೋಷಕರ ಸಹಕಾರ ಅಗತ್ಯ ಈ ಮೂಲಕ ವಿದ್ಯಾರ್ಥಿಗಳು ದೇಶ, ರಾಜ್ಯಕ್ಕೆ ಕೀರ್ತಿ ತರುವಂತವರಾಗಬೇಕು ಎಂದು ಹೇಳಿದರು.

 ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ಕೊಡುವ ಮೂಲಕ ಉತ್ತಮ ಮೌಲ್ಯಗಳನ್ನು ಸಹ ಕಲಿಸುವುದು ಅಗತ್ಯವಿದೆ ಎಂದರು.ಜನ್ಮ ಕೊಟ್ಟವರು ಪೋಷಕರು ಆದರೆ, ಶಿಕ್ಷಕರು ಉತ್ತಮ ಪ್ರಜೆಯನ್ನಾಗಿ ಮಾಡುವ ಹೊಣೆಗಾರಿಕೆ ಇರುತ್ತದೆ. ಪೋಷಕರು ಮತ್ತು ಶಿಕ್ಷಕರ ನಡುವೆ ವಿದ್ಯಾರ್ಥಿಗಳು ಉತ್ತಮ ಮೌಲ್ಯಗಳನ್ನು ಕಲಿಯುವುದು ಅಗತ್ಯವಿದ್ದು, ಯಾವುದೇ ಒತ್ತಡದ ಶಿಕ್ಷಣ ಮಕ್ಕಳಿಗೆ ಬೇಡ, ಇತರೆ ಮಕ್ಕಳೊಂದಿಗೆ ತಮ್ಮ ಮಕ್ಕಳನ್ನು ಹೊಲಿಕೆ ಮಾಡಬೇಡಿ ಅವರು ಯಾವುದಾದರೂ ಆಸಕ್ತಿ ಕ್ಷೇತ್ರದಲ್ಲಿ ಉನ್ನತ ಸಾಧನೆಗೆ ತಮ್ಮ ಪ್ರೋತ್ಸಾಹ ನೀಡಿ ಎಂದು ಕಿವಿಮಾತು ಹೇಳಿದರು.

ಶಾಲಾ ಆಡಳಿತ ಮಂಡಳಿಯ ಸದಸ್ಯ ಡಾ.ಅಮರೇಶ ಕುಂಬಾರ ಮಾತನಾಡಿದರು. ಶಾಲಾ ಮುಖ್ಯೋಪಾಧ್ಯಾಯ  ಪ್ರಾಸ್ತಾವಿಕವಾಗಿ ಮಾತನಾಡಿದರು.ಶಾಲಾ ವಾರ್ಷಿಕೋತ್ಸವ ವರದಿ ವಾಚನ ನಂತರ ಶಾಲೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಮತ್ತು ವಿವಿಧ ಚಟುವಟಿಕೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.ನಂತರ ಒಂದರಿಂದ ಏಳನೇ ತರಗತಿಯ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಪೋಷಕರನ್ನು ರಂಜಿಸಿದರು.

ಈ ಸಂದರ್ಭದಲ್ಲಿ ದಿವ್ಯ ಸಾನಿದ್ಯ ಕರಿಬಸಯ್ಯ ಹಿರೇಮಠ, ಇಂದ್ರೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಕ್ಷ ಇಂದ್ರೇಶ ಕೊಳ್ಳಿ, ಗ್ರಾ.ಪಂ.ಅಧ್ಯಕ್ಷ ವರದಮ್ಮ ಎಮ್ಮಿ,ಗ್ರಾ.ಪಂ.ಸದಸ್ಯರಾದ ಡಾ.ನಾಗರಾಜ ಕಂಬಳಿ,ಹನುಮಂತಪ್ಪ ಬೋವಿ,ಇಂದ್ರೇಶ ಕೇರಳಿ,ಕೆ.ಆರ್.ಪಿ.ಪಿ.ಮುಖಂಡ  ರಮೇಶ ರೆಡ್ಡಿ,

ಗ್ರಾಮದ ಮುಖಂಡರಾದ ದೇವಪ್ಪ ಬೋವಿ,ಮಂಜುನಾಥ ದೋಟಿಹಾಳ,ಪರಶುರಾಮ ವಣಗೇರಿ,ಆದೇಪ್ಪ ಬೆಟಗೇರಿ,ಎಂ.ಕೆ.ಸಾಹೇಬ, ಶಿವನಂದ ಕುಂಬಾರ,ಬೇಡದಪ್ಪ ಬಿಳೇಬಾಯಿ,ಹನುಮಂತಪ್ಪ ಬೋವಿ,ಮಾರುತಿ ಬೇಟಗೇರಿ,ಹುಸೇನಬಾಸ,ಬಸವರಾಜ ಹ್ಯಾಟಿ,ಶಿಕ್ಷಕರು ಹಾಗೂ ಮುದ್ದು ಮಕ್ಕಳು ಸೇರಿದಂತೆ ಇತರರು ಇದ್ದರು

About Mallikarjun

Check Also

ಕರ್ನಾಟಕ ಗ್ರಾಮೀಣ ಬ್ಯಾಂಕ್ ಸಿಬ್ಬಂದಿ ಕಿರುಕುಳ ತಪ್ಪಿಸಿ..!

12೦೦ ಗ್ರಾಹಕರಿಗೆ ಜೀವ ಭದ್ರತೆ ಒದಗಿಸಬೇಕೆಂದು ರಕ್ಷಣಾ ವೇದಿಕೆ ಮನವಿ: ಗಂಗಾವತಿ: 2018ನೇ ಸಾಲಿನಲ್ಲಿ lಗಂಗಾವತಿ ತಾಲೂಕು ಕರ್ನಾಟಕ ಗ್ರಾಮೀಣ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.