Kannada-loving social worker Ramakrishna was honored at the Kanakagiri festival

ಗಂಗಾವತಿ: ತಾಲೂಕಿನ ಶ್ರೀರಾಮನಗರದ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಯ ಅಧ್ಯಕ್ಷರಾದ ಜಿ. ರಾಮಕೃಷ್ಣರವರಿಗೆ ಇತ್ತೀಚೆಗೆ ಕನಕಗಿರಿಯಲ್ಲಿ ನಡೆದ ಕನಕಗಿರಿ ಉತ್ಸವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಸನ್ಮಾನ್ಯ ಶ್ರೀ ಶಿವರಾಜ ತಂಗಡಗಿಯವರು ಉಡುಚಪ್ಪ ನಾಯಕ ವೇದಿಕೆಯಲ್ಲಿ ಗೌರವಯುತವಾಗಿ ಸನ್ಮಾನಿಸಿ ಗೌರವಿಸಿದ್ದಾರೆ.
ಕನ್ನಡಪ್ರೇಮಿ ಲಯನ್ ಜಿ. ರಾಮಕೃಷ್ಣರವರು ಸುಮಾರು ೪೦ ವರ್ಷಗಳಿಂದ ಸಮಾಜಸೇವೆ, ಶೈಕ್ಷಣಿಕ, ಸಾಹಿತ್ಯ, ಸಾಂಸ್ಕೃತಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು, ಬಡವರಿಗೆ, ದೀನರಿಗೆ, ನಿರಾಶ್ರಿತರಿಗೆ, ವಿದ್ಯಾರ್ಥಿಗಳಿಗೆ ತಮಗೆ ಕೈಲಾದಷ್ಟು ಸಹಾಯ, ಸಹಕಾರಗಳನ್ನು ಮಾಡುತ್ತಾ ಬಂದಿದ್ದು, ಈಗಾಗಲೇ ತಮ್ಮ ದೇಹವನ್ನು ಮರಣಾನಂತರ ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ದಾನ ನೀಡಿದ್ದು, ಅಲ್ಲದೇ ಕೊಪ್ಪಳದ ಎಂ.ಎA. ಜೋಷಿ ಆಸ್ಪತ್ರೆಗೆ ತಮ್ಮ ಮರಣಾನಂತರ ನೇತ್ರಗಳನ್ನೂ ಕೂಡಾ ದಾನ ಮಾಡಿರುತ್ತಾರೆ. ಇವರ ಸೇವೆಯನ್ನು ಗುರುತಿಸಿ ಕನಕಗಿರಿಯಲ್ಲಿ ಉತ್ಸವದಲ್ಲಿ ಸನ್ಮಾನಿಸಲಾಗಿದೆ