Breaking News

ತಡಸ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಾಯಕತ್ವ ತರಬೇತಿ ಕಾರ್ಯಗಾರ.

Leadership Training Worker at Government Primary School, Tadasa Village.

ಜಾಹೀರಾತು

ಇಂದು ಬ್ಯಾಡಗಿ ತಾಲೂಕಿನ ತಡಸ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ರೋಟರಿ ಕ್ಲಬ್ ಬ್ಯಾಡಗಿ, ಇನ್ನರ್ವಿಲ್ ಕ್ಲಬ್ ಬ್ಯಾಡಗಿ ಹಾಗೂ ಸ್ನೇಹ ಸದನ ಬ್ಯಾಡಗಿ ಇವರ ಸಹಭಾಗಿತ್ವದಲ್ಲಿ ನಾಯಕತ್ವ ತರಬೇತಿ ಕಾರ್ಯಗಾರ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಶಿಕ್ಷಕ ಹಾಗೂ ಸಾಹಿತಿಗಳಾದ ಶ್ರೀ ಜೀವರಾಜ ಛತ್ರದ ಅವರು ಮಕ್ಕಳಲ್ಲಿ ನಾಯಕತ್ವ ಬೆಳೆಸಿಕೊಳ್ಳುವ ಬಗೆ, ಮಾಹಿತಿ ಮತ್ತು ತರಬೇತಿ ನೀಡಿದರು.
ಮುಖ್ಯ ಅತಿಥಿಗಳಾಗಿ ರೋಟರಿ ಕ್ಲಬ್ಬಿನ ಮಾಜಿ ಅಧ್ಯಕ್ಷ ಶ್ರೀ ಮಂಜುನಾಥ ಉಪ್ಪಾರ, ಇನ್ನರ್ವಿಲ್ ಕ್ಲಬ್ಬಿನ ಅಧ್ಯಕ್ಷೆ ಶ್ರೀಮತಿ ಮಹೇಶ್ವರಿ ಪಸಾರದ, ಕ್ಲಬ್ ಎಡಿಟರ್ ಶ್ರೀಮತಿ ಲಕ್ಷ್ಮೀ ಉಪ್ಪಾರ, ಸ್ನೇಹ ಸದನದ ನಿರ್ದೇಶಕರಾದ ಸಿಸ್ಟರ್ ಗ್ಲೋರಿಯಾ ವೇದಿಕೆ ಮೇಲೆ ಉಪಸ್ಥಿತರಿದ್ದರು.
ನಾಯಕತ್ವ ತರಬೇತಿ ಕಾರ್ಯಗಾರದ ಉದ್ಘಾಟನೆ ನಡೆಸಿ ಮಾತನಾಡಿದ ರೋಟರಿ ಮಾಜಿ ಅಧ್ಯಕ್ಷ ಶ್ರೀ ಮಂಜುನಾಥ ಉಪ್ಪಾರ ಮಾತನಾಡಿ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಯಬೇಕೆಂದರೆ ಮೊದಲು ಮನೆಯಲ್ಲಿ ಹಿರಿಯರು ಹೇಳಿದ ಎಲ್ಲ ಕೆಲಸಗಳನ್ನು ಸರಿಯಾದ ಸಮಯಕ್ಕೆ ಮುಂದೆ ಬಂದು ಮಾಡಬೇಕು ಇದರಿಂದ ಮನೆಯ ಎಲ್ಲಾ ಜವಾಬ್ದಾರಿಗಳನ್ನು ನಿರ್ವಹಿಸಲು ಅವಕಾಶಗಳು ಹಾಗೂ ಕಾರ್ಯಕ್ಷಮತೆ ಮತ್ತು ಅನುಭವ ದೊರೆಯುತ್ತದೆ ಹಾಗೂ ಶಾಲೆಯಲ್ಲಿ ಸ್ವಯಂ ಪ್ರೇರಿತರಾಗಿ ವಾರಕ್ಕೊಮ್ಮೆ ಗಿಡ ನೀಡುವುದು ಶಾಲೆಯ ಆವರಣ ಮತ್ತು ಮನೆಯ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿ ನೋಡಿಕೊಳ್ಳುವ ಕೆಲಸದಲ್ಲಿ ಸಹಪಾಠಿಗಳೊಂದಿಗೆ ತೊಡಗುವುದು ಹೀಗೆ ಸ್ವಯಂ ಪ್ರೇರಿತವಾಗಿ ನಿರಂತರವಾಗಿ ತೊಡಗಿಸಿಕೊಳ್ಳುವುದರಿಂದ ಮುಂದಿನ ದಿನಗಳಲ್ಲಿ ನಾಯಕತ್ವದ ಗುಣ ತಾನಾಗಿಯೇ ಬರುತ್ತದೆ ಎಂದು ವಿವರಿಸಿದರು.
ಸಿಸ್ಟರ್ ಗ್ಲೋರಿಯಾ ಮಾತನಾಡಿ ಜಗತ್ತಿನಲ್ಲಿ ಹಲವು ಸಾವಿರ ವರ್ಷಗಳಿಂದ ಅನೇಕ ನಾಯಕರ ಹೆಸರು ಕೇಳಿದ್ದೇವೆ. ಅವರ ನಾಯಕತ್ವ ಗುಣಗಳಿಂದಲೇ ಅವರ ಹೆಸರನ್ನು ಇಲ್ಲಿಯವರೆಗೂ ನಾವು ನೆನೆಸುತ್ತಿರುವುದು. ಹಾಗೆಯೇ ಇಂದು ನಿಜವಾಗಿಯೂ ನಿಮ್ಮ ಮುಂದೆ ಈ ವೇದಿಕೆ ಮೇಲೆ ಉದಾರ ಮನಸುಳ್ಳ ನಾಯಕರು ಕುಂತಿದ್ದಾರೆ. ರೋಟರಿ ಅಧ್ಯಕ್ಷ ಮಂಜುನಾಥ ಉಪ್ಪಾರ ಅವರಿಗೆ ನಾವು ಫೋನ್ ಮಾಡಿ ಯಾವುದೇ ಕಾರ್ಯಕ್ರಮದ ಬಗ್ಗೆ ಕೇಳಿದಾಗ ಒಂದು ಕ್ಷಣ ಯೋಚಿಸದೆ ಇಲ್ಲಿಯವರೆಗೂ ಸಹಾಯ ಸಹಕಾರ ನೀಡುತ್ತಾ ತಾಲೂಕಿನಲ್ಲಿ ಅನೇಕರ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಆರೋಗ್ಯ ಮತ್ತು ಶಿಕ್ಷಣಕ್ಕೆ ಬಹಳ ಸಹಾಯ ನೀಡುವ ನಾಯಕರಾಗಿದ್ದಾರೆ. ಇಂತಹ ಕೆಲಸಗಳಿಗೆ ಅವರು ತಪ್ಪದೇ ಸಹಾಯ ಸಹಕಾರ ನೀಡುತ್ತಾ ಬಂದಿದ್ದು ಬ್ಯಾಡಗಿ ರೋಟರಿ ಕ್ಲಬ್ಬಿನ ಹೆಸರು ಬೆಳೆಸುವಲ್ಲಿ ಹಾಗೂ ನಡೆಸುವಲ್ಲಿ ಅವರ ಪಾತ್ರ ತುಂಬಾ ದೊಡ್ಡದು ಹಾಗೂ ನಿಜವಾದ ನಾಯಕತ್ವ ಏನೆಂದರೆ ಮಹಿಳೆಯರ ಇಂಟರ್ನೇಷನಲ್ ಇನ್ನರ್ ವ್ಹೀಲ್ ಕ್ಲಬ್ ಬೆಳಕಿಗೆ ಬರುವಲ್ಲಿ ಅದರ ಅಭಿವೃದ್ಧಿಗೆ ಬೆನ್ನೆಲುಬಾಗಿ ಸಹಕಾರ ನೀಡುತ್ತಿದ್ದಾರೆ. ಈ ಮೂಲಕ ಅವರ ಮಹಿಳಾ ಸಬಲೀಕರಣಕ್ಕೆ ಮಹತ್ವ ನೀಡುವುದು ಕಂಡು ಬರುತ್ತದೆ. ಇದೇ ನಿಜವಾದ ನಾಯಕತ್ವ ಗುಣ ಎಂದು ವಿವರಿಸಿದರು.
ನಂತರ ರೋಟರಿ ಕ್ಲಬ್ ವತಿಯಿಂದ ತರಬೇತಿ ಪಡೆದ ಎಲ್ಲ ಮಕ್ಕಳಿಗೆ ಶ್ರೀಮತಿ ಲಕ್ಷ್ಮಿ ಉಪ್ಪಾರ, ಶ್ರೀಮತಿ ಮಹೇಶ್ವರಿ ಪಸಾರದ ಶ್ರೀ ಜೀವರಾಜ ಛತ್ರದ, ಸಿಸ್ಟರ್ ಗ್ಲೋರಿಯಾ, ಶ್ರೀ ಮಂಜುನಾಥ ಉಪ್ಪಾರ ಎಲ್ಲರೂ ಪ್ರಶಸ್ತಿ ಪತ್ರಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ಸಿಬ್ಬಂದಿ ಮತ್ತು ಮಕ್ಕಳು ಉಪಸ್ಥಿತರಿದ್ದರು.

About Mallikarjun

Check Also

ಜ್ಞಾನಾಕ್ಷಿರಾಜರಾಜೇಶ್ವರಿ ಮ್ಯೂಸಿಕ್ ವಿಡಿಯೋ ಆಲ್ಬಮ್ ಶೀರ್ಷಿಕೆ ಅನಾವರಣ

Gnanakshi Rajarajeshwari Music Video Album Title Unveiled ಬೆಂಗಳೂರಿನ ಸುಪ್ರಸಿದ್ದ ಐತಿಹಾಸಿಕ ಶ್ರೀ ಜ್ಞಾನಾಕ್ಷಿ ರಾಜರಾಜೇಶ್ವರಿ ದೇವಸ್ಥಾನ, ಶ್ರೀ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.