PKPS: President Basavaraja elected vice president

ವರದಿ ಸಚೀನ ಜಾಧವ
ಸಾವಳಗಿ: ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ ಮಂಗಳವಾರ ನಡೆಯಿತು.
ಅಧ್ಯಕ್ಷರಾಗಿ ಬಸವರಾಜ ಭೀಮರಾಯ ಪರಮಗೊಂಡ, ಉಪಾಧ್ಯಕ್ಷರಾಗಿ ಶ್ರೀಮತಿ ಅಂಬವ್ವ ಗಣಪತಿ ಬಾಪಕರ ಆಯ್ಕೆಯಾಗಿದ್ದಾರೆ.
ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ನೂತನ ಸದಸ್ಯರಾಗಿ ಬಸವರಾಜ ಗಂಟಿವಾಳಪ್ಪ ಶೇಗುಣಿಸಿ, ಶ್ರೀಕಾಂತ್ ವಿಠ್ಠಲ್ ಗೌಳಿ, ಭರತೇಶ ಭೀಮಪ್ಪ ಕವಟೇಕರ್, ಸಂಗಪ್ಪ ಅಣ್ಣಪ್ಪ ಆಲಗೂರು/ಜಾಧವ, ಲವಾ ಕಲಪ್ಪ ಮಾಳಿ, ಶಿವರಾಯ ರಾಮಪ್ಪ ಯಕ್ಸಂಬೆ, ಶೋಭಾ ನಿಂಗಪ್ಪ ವಜ್ರವಾಡ, ಅಶೋಕ್ ಕಾಸಪ್ಪ ಮಾಂಗ್, ರಾಜಕುಮಾರ್ ಭೀಮಪ್ಪ ತಳವಾರ್, ಚೇತನ್ ಗಣಪತಿ ಗೌಳಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎಂ. ಎಸ್. ಘೋಲಪ ತಿಳಿಸಿದ್ದಾರೆ.
ಆಯ್ಕೆಯಾದ ಪಿಕೆಪಿಎಸ ಅಧ್ಯಕ್ಷ, ಉಪಾಧ್ಯಕ್ಷರ, ಸದಸ್ಯರನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಾದೇವ ಜಾಧವ ಅವರು ಸನ್ಮಾನಿಸಿದರು.
ಸಂಭ್ರಮಾಚರಣೆ: ನೂತನವಾಗಿ ಆಯ್ಕೆಯಾದ ಪಿಕೆಪಿಎಸ ಸದಸ್ಯರು ಹಾಗೂ ಕಾರ್ಯಕರ್ತರು ಸೇರಿ ಪರಸ್ಪರ ಬಣ್ಣಗಳನ್ನು ಎರಚಿ ಸಂಭ್ರಮಾಚರಣೆ ಮಾಡಿದರು.