The contribution of Sattur Math to our nation is unique: Ex-MLA Parimana Nagappa.

ವರದಿ : ಬಂಗಾರಪ್ಪ ಸಿ ಹನೂರು .
ಹನೂರು: ನಾಡಿನ ಸಂಸ್ಕೃತಿ ಪರಂಪರೆಯನ್ನು ಬಿಂಬಿಸುವ ಸುತ್ತೂರು ಶ್ರೀ ಶಿವರಾತ್ರೀಶ್ವರ ಜಾತ್ರೆಯು ಫೆ. 6 ರಿಂದ 11 ರವರೆಗೆ ಐದು ದಿನಗಳ ವಿಜೃಂಭಣೆಯಿಂದ ನಡೆಯಲಿದ್ದು, ಹಲವು ವೈಶಿಷ್ಟ್ಯ ಒಳಗೊಂಡ ಜಾತ್ರೆಯಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು ಎಂದು ಮಾಜಿ ಶಾಸಕರು ಹಾಗೂ
ವೀರಶೈವ ಮಹಾಸಭಾ ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷರು ಪರಿಮಳ ನಾಗಪ್ಪ ತಿಳಿಸಿದರು.
ಸುತ್ತುರು ಜಾತ್ರೆಯ ಅಂಗವಾಗಿ ಕಾಮಗೆರೆ ಗ್ರಾಮಕ್ಕೆ ಆಗಮಿಸಿದ ಸುತ್ತೂರು ಜಾತ್ರಾ ಮಹೋತ್ಸವದ ಪ್ರಚಾರ ರಥವನ್ನು ಸ್ವಾಗತಿಸಿ ಪೂಜೆ ಸಲ್ಲಿಸಿ ನಂತರ ಮಾತನಾಡಿದ ಅವರು ಸುತ್ತೂರಿನ ಜಾತ್ರೆ ರಾಜ್ಯದ ನಾನಾ ಭಾಗಗಳ ಜನರು ಒಂದೆಡೆ ಸೇರುವ ಭಕ್ತಿ ಸಂಗಮದ ಭಾಗ. ಧಾರ್ಮಿಕ ಕಾರ್ಯ, ಸಾಂಸ್ಕೃತಿಕ ಮತ್ತು ಜನಪದದ ಮೂಲಕ ಜನರನ್ನು ತನ್ನತ್ತ ಸೆಳೆಯುತ್ತ ಪ್ರಸಿದ್ಧಿ ಪಡೆಯುತ್ತಿದೆ. ನಮ್ಮ ರಾಜ್ಯ ಅಲ್ಲದೇ ಹೊರ ರಾಜ್ಯ ಹಾಗೂ ವಿದೇಶಗಳಿಂದಲು ಜಾತ್ರೆ ನೋಡಲು ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದಾರೆ.
ಕಪಿಲಾ ನದಿ ತೀರದಲ್ಲಿರುವ ಶ್ರೀ ಸುತ್ತೂರು ಕ್ಷೇತ್ರವನ್ನು ತಮ್ಮ ತಪಸ್ಸಿದ್ಧಿಯಿಂದ ಜಾಗೃತ ಧರ್ಮ ಕ್ಷೇತ್ರವನ್ನಾಗಿ ನೆಲೆಗೊಳಿಸಿದ ಮಹಾಮಹಿಮರು ಆದಿ ಜಗದ್ಗುರು ಶ್ರೀ ಶಿವರಾತ್ರಿಶ್ವರ ಶಿವಯೋಗಿಗಳವರು ಪೂಜ್ಯರು ಸಂಸ್ಥಾಪಿಸಿದ ಜಗದ್ಗುರು ಶ್ರೀ ವೀರ ಸಿಂಹಾಸನ ಮಹಾಸಂಸ್ಥಾನ ಮಠವು ಮಠವು ಸಹಸ್ತ್ರಾರು ವರ್ಷಗಳಿಂದ ಜನತೆಯ ಸರ್ವತೋಮುಖ ಅಭಿವೃದ್ಧಿಗಾಗಿ ಜ್ಞಾನನ್ನದಾಸೋಹಗಳ ಕೈಂಕರ್ಯಗಳನ್ನು ನಡೆಸುತ್ತಾ ಬಂದಿದೆ.
ಇಂಥ ಭವ್ಯ ಇತಿಹಾಸವುಳ್ಳ ಶ್ರೀಮಠದ ಬಹುಮುಖ ಚಟುವಕೆಗಳ ನಿರ್ವಹಣೆಗಾಗಿ ಶ್ರೀಮನ್ಮಹಾರಾಜ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರಿಂದ ಸ್ಥಾಪಿತವಾದ ಜೆ.ಎಸ್.ಎಸ್ ಮಹಾವಿದ್ಯಾಪೀಠ ಹಾಗೂ ಇದರ ಸಂಘ ಸಂಸ್ಥೆಗಳ ಮೂಲಕ ದೇಶ ವಿದೇಶಗಳಲ್ಲಿ ಧರ್ಮ ಸಂಸ್ಕೃತಿ ಶಿಕ್ಷಣ ಆರೋಗ್ಯ ಕೃಷಿ ಗ್ರಾಮೀಣಾಭಿವೃದ್ಧಿ ಸಮಾಜ ಸುಧಾರಣೆ ಉಂಟಾದ ಕ್ಷೇತ್ರಗಳಲ್ಲಿ ನಿರಂತರವಾಗಿ ಸೇವೆ ಕಾರ್ಯಗಳು ನಡೆಯುತ್ತಿದೆ.
ಆದಿ ಜಗದ್ಗುರುಗಳವರ ಜಾತ್ರಾ ಮಹೋತ್ಸವವೂ ಪ್ರತಿವರ್ಷ ನಡೆಯಲಿರುವ ಜಾತ್ರಾ ಮಹೋತ್ಸವವು ಜನತೆಯ ಸರ್ವಾಂಗಿನ ಪ್ರಗತಿಗೆ ಪೂರಕವಾದ ಹಲವಾರು ವೈವಿಧ್ಯಪೂರ್ಣ ಕಾರ್ಯಕ್ರಮಗಳು ನಡೆಯುತ್ತವೆ. ಐದು ದಿನಗಳ ಕಾಲ ಸುತ್ತೂರಿನ ಜಾತ್ರಾ ಸಂಸ್ಕೃತಿ ವೈಭವವನ್ನು ಕಣ್ಮುಂಬಿಕೊಳ್ಳಬೇಕು ಹಾಗಾಗಿ ಎಲ್ಲರು ಜಾತ್ರೆಯಲ್ಲಿ ಭಾಗವಹಿಸಿ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂ. ಅಧ್ಯಕ್ಷ ಚಿಕ್ಕಸ್ವಾಮಿ, ವೀರಶೈವ ಮಹಾಸಭಾ ಘಟಕ ಅಧ್ಯಕ್ಷ ಪ್ರಭು, ಯುವ ಘಟಕ ಪ್ರಧಾನ ಕಾರ್ಯದರ್ಶಿ ಕೆಬಿ ಮಧು, ಗ್ರಾಮ ಪಂಚಾಯತ್ ಸದಸ್ಯರಾದ ಶಿವಕುಮಾರ್, ಕೆ.ಕುಮಾರ್, ಶಿವಪ್ರಕಾಶ್, ಮಹೇಶ, ಸುಂದರಪ್ಪ, ನಾಗರಾಜು, ಮಾಜಿ ಸದಸ್ಯ ಮಂಜುನಾಥ ಸ್ವಾಮಿ, ಕೊಂಗ್ರಹಳ್ಳಿ ರಾಜೇಶ್, ಪಾನಿಪುರಿ ಪ್ರಮೋದ್ ಸೇರಿದಂತೆ ಜೆಎಸ್ಎಸ್ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳು ಹಾಜರಿದ್ದರು.