Breaking News

ವಿರುಪಾಪುರ ಸರ್ಕಾರಿ ಶಾಲೆಯಲ್ಲಿ ಹೆಣ್ಣು ಮಕ್ಕಳ ದಿನಾಚರಣೆ

Girl’s Day Celebration at Virupapura Government School

ಜಾಹೀರಾತು

ಗಂಗಾವತಿ,ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ಅಂಗವಾಗಿ ವಿರುಪಾಪುರ ತಾಂಡಾದ ಸರ್ಕಾರಿ ಶಾಲೆಯಲ್ಲಿ ಆರೋಗ್ಯ ಮತ್ತು ಕ್ಷಯ ರೋಗ ಜಾಗೃತಿ
ಹೆಣ್ಣು ಬಾಳಿನ ಕಣ್ಣು ಎನ್ನುವಂತೆ ಸಮಾಜದ ಸದೃಢವಾಗಿ ನಿಲ್ಲಬೇಕಾದರೆ ತಾಯಿಯ ಅವಶ್ಯಕತೆ ತುಂಬಾ ಮುಖ್ಯ ಆದ್ದರಿಂದ ಇಂದು ವಿರುಪಾಪುರ ಸರ್ಕಾರಿ ಶಾಲೆಯಲ್ಲಿ ಹೆಣ್ಣು ಮಕ್ಕಳ ದಿನಾಚರಣೆಯ ಸಂದರ್ಭದಲ್ಲಿ ಮಕ್ಕಳಿಗೆ ಸಿಹಿ ತಿನಿಸುವ ಮುಖಾಂತರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕ್ಷಯರೋಗ ವಿಭಾಗ ಕೊಪ್ಪಳ ಉಪ ವಿಭಾಗ ಆಸ್ಪತ್ರೆ ಮತ್ತು ತಾಲೂಕ ಆರೋಗ್ಯ ಅಧಿಕಾರಿಗಳ ಕಚೇರಿ ಗಂಗಾವತಿ ಸಾರ್ವಜನಿಕ ಶಿಕ್ಷಣ ಇಲಾಖೆ ಕರ್ನಾಟಕ ಆರೋಗ್ಯ ಸಮರ್ಧನ ಸಂಸ್ಥೆ ಇವರ ಸಯುಕ್ತ ಆಶ್ರಯದಲ್ಲಿ ಆಚರಿಸಲಾಯಿತು, ಕಾರ್ಯಕ್ರಮದಲ್ಲಿ ಕ್ಷಯ ರೋಗ ಆರೋಗ್ಯ ಪರಿವೀಕ್ಷಕ ಎಚ್ ಮಲ್ಲಿಕಾರ್ಜುನಗೌಡ ಇವರು ಮಾತನಾಡುತ್ತಾ ಆರೋಗ್ಯವೇ ಭಾಗ್ಯ ವಿಶೇಷವಾಗಿ ಮಹಿಳೆಯರಲ್ಲಿ ಆರೋಗ್ಯ ರಕ್ಷಿಸಿಕೊಳ್ಳುವುದು ತುಂಬಾ ಮುಖ್ಯ ಅದರಲ್ಲೂ ಸಾಂಕ್ರಾಮಿಕ ರೋಗಗಳಿಂದ ರಕ್ಷಣೆಯನ್ನು ಪಡೆದು ಆರೋಗ್ಯವಾಗಿರುವುದು ಬಹು ಮುಖ್ಯವಾಗಿರುತ್ತದೆ ಮಕ್ಕಳು ಶಿಶು ಅವಧಿಯಿಂದ, ಬಾಲ್ಯ, ಕಿಶೋರಿ , ಅಂತಂತವಾಗಿ ಆರೋಗ್ಯವನ್ನು ರಕ್ಷಿಸಿಕೊಳ್ಳುವುದು ಪ್ರಾಮುಖ್ಯವಾಗಿರುತ್ತದೆ ಪ್ರತಿ ಅವಧಿಯಲ್ಲಿ ದೇಹದಲಾಗುವ ಬದಲಾವಣೆ ಮತ್ತು ಸಾಮಾಜಿಕ ಬದಲಾವಣೆಗೆ ಮಹಿಳೆಯು ಒಳಪಡುತ್ತಾಳೆ ಸಾಂಕ್ರಾಮಿಕ ರೋಗಕ್ಕೆ ಬಂದರೆ ವಿಶೇಷವಾಗಿ ಕ್ಷಯ ರೋಗಕ್ಕೆ ಪ್ರತಿ ವರ್ಷ ತುಂಬಾ ಮಹಿಳೆಯರು ತುತ್ತಾಗುತ್ತಿದ್ದು ಈ ಶೇರೋಗದ ತೀವ್ರತೆ ಮತ್ತು ಸಮಾಜಮುಖಿ ಆರ್ಥಿಕ ಮುಗ್ಗಟ್ಟಿಗೆ ಒಳಗಾಗಿ ಸುಮಾರು ಹತ್ತು ಸಾವಿರಕ್ಕಿಂತ ಹೆಚ್ಚು ಮಹಿಳೆಯರು ಮನೆಯಿಂದ ಹೊರಡುಲ್ಪಡುತ್ತಾರೆ ಕಾರಣ ಸಮಾಜದಿಂದ ಈ ದುಷ್ಟ ಕ್ಷಯ ರೋಗವನ್ನು ದೂರ ಮಾಡಬೇಕಾದ ಜವಾಬ್ದಾರಿ ಪ್ರತಿಯೊಬ್ಬ ತಾಯಿ ಮತ್ತು ನಮ್ಮೆಲ್ಲರ ಮೇಲೆ ಇದೆ ಎಂದು ತಿಳಿಸಿದರು ಕಾರ್ಯಕ್ರಮದಲ್ಲಿ ರಾಮಪ್ಪ, ಮಂಜುನಾಥ,ಶ್ರೀ ದೇವಿ, ಅಶ್ವಿನಿ, ಕುಮಾರಿ ಕಾಶೀಂಬಿ ಹನುಮಂತಪ್ಪ ಇವರು ಭಾಗವಹಿಸಿದ್ದರು

About Mallikarjun

Check Also

ಎಸ್ಸಿ ಎಸ್ಟಿ ಮೀನುಗಾರರಿಗೆ ವಾಹನ ಖರೀದಿಸಲು ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

Applications invited for subsidy for SC/ST fishermen to purchase vehicles ಕೊಪ್ಪಳ ಆಗಸ್ಟ್ 30 (ಕರ್ನಾಟಕ ವಾರ್ತೆ): …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.