School Empowerment by Upkriti Institute, Bangalore
ಗಂಗಾವತಿ ತಾಲ್ಲೂಕಿನ ಶ್ರೀರಾಮನಗರದ ಸರ್ಕಾರಿ ಶಾಲೆಯಲ್ಲಿ ಬೆಂಗಳೂರಿನ ಉಪ್ಕೃತಿ ಸಂಸ್ಥೆಯು ಕಲಾ ಕುಂಚ ಸೇವೆಯನ್ನು ಮಾಡಿದರು. ಇಡೀ ದಿನ ಸಂಸ್ಥೆಯ ೨೫ ಜನರು ಸೇವಾ ಮನೋಭಾವದಿಂದ ಬಣ್ಣ ಹಚ್ಚುವುದು ಚಿತ್ರ ಬರೆಯುವುದರ ಮೂಲಕ ಸರ್ಕಾರಿ ಶಾಲೆಯ ಸೌಂದರ್ಯ ಹೆಚ್ಚಾಗಲು ಬೆಂಬಲ ನೀಡಿದರು. 50 ಸಾವಿರಕ್ಕೂ ಹೆಚ್ಚು ಮೌಲ್ಯದ ಕಲಾ ಸೇವೆ ಇದಾಗಿದ್ದು ಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವೆಂಕಟೇಶ್ ರಾಮಚಂದ್ರಪ್ಪ ಅವರು ಭೇಟಿ ನೀಡಿ ಸಂಸ್ಥೆಯ ಸದಸ್ಯರನ್ನು ಅಭಿನಂದಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ವೆಂಕಟೇಶ್ ರಾಮಚಂದ್ರಪ್ಪ ಅವರು ‘ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ನಿಮ್ಮಂತ ತಂಡಗಳು ಶ್ರಮಿಸುತ್ತಿರುವುದು ಶ್ಲಾಘನೀಯ. ಶಿಕ್ಷಣ ಇಲಾಖೆಯ ವತಿಯಿಂದ ಅಭಿನಂದಿಸುತ್ತೇವೆ. ನಿಮ್ಮ ಕೊಡುಗೆಯನ್ನು ಸದಾ ಸ್ಮರಿಸುತ್ತೇವೆ. ಮಕ್ಕಳ ಸಂತೋಷಕ್ಕೆ ಜ್ಞಾನ ವಿಕಾಸಕ್ಕೆ ಚಿತ್ರಗಳು ಸಹಾಯಕವಾಗುತ್ತವೆ’ ಎಂದು ಹೇಳಿದರು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ಶೌಕತ್ ಅಲಿ ಲಕ್ಷ್ಮೀಕ್ಯಾಂಪ್ ಶಾಲೆಯ ಸೋಮು ಕುದರಿಹಾಳ ತಾ ಪಂ ಮಾಜಿ ಅಧ್ಯಕ್ಷರಾದ ಮಹ್ಮದ್ ರಫಿ ಸ್ಥಳೀಯ ಯುವ ಮುಖಂಡರಾದ ಮನ್ನೆ ಫಣಿರಾಜ್ ಅನ್ವಿತ್ ಅವರು ಉಪಸ್ಥಿತರಿದ್ದರು.
ಉಪ್ಕೃತಿ ಸಂಸ್ಥೆಯು ಸರ್ಕಾರಿ ಶಾಲೆಗಳ ಅಂದ ಚಂದ ಚಿತ್ರಗಳ ಕಲಾ ಸೇವೆ ಮಾಡುತ್ತಿದೆ. ಈಗಾಗಲೇ ರಾಜ್ಯದ ನೂರಕ್ಕೂ ಹೆಚ್ಚು ಶಾಲೆಗಳಲ್ಲಿ ಈ ಸಂಸ್ಥೆಯು ಸೇವೆಯನ್ನು ಒದಗಿಸುವ ಮೂಲಕ ಶಾಲೆಗಳ ಬಲವರ್ಧನೆಗೆ ಕಾರಣವಾಗಿದೆ. ಈ ಸಂಸ್ಥೆ ಬುಡಕಟ್ಟು ಸಮುದಾಯಗಳ ಹಿಂದುಳಿದ ವರ್ಗಗಳಿಗೆ ಕೆಲಸ ಮಾಡುತ್ತಿದ್ದು ಹಸಿರು ಸೇವೆ ಪ್ಲಾಸ್ಟಿಕ್ ಮುಕ್ತ ವಾತಾವರಣಕ್ಕಾಗಿ ಶ್ರಮಿಸುತ್ತಿದ್ದಾರೆ.
ಈ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾಗಿ ಚಂದನ್ ಇದ್ದು ಶಶಾಂಕ್ ಶಿವಂ ಅಭಿಷೇಕ್ ಈ ತಂಡದಲ್ಲಿ ಲಕ್ಷ್ಮೀನಾರಾಯಣ ಪವನ್ ಮೇಧಾ ಸುಸ್ಮಿತಾ ಅಕ್ಷತಾ ಅನುಪ್ರಿಯ ಅಪರ್ಣಾ ಭೂಮಿಕಾ ಚೈತನ್ಯ ಚಿನ್ಮಯಿ ಕಲಾ ಕೀರ್ತಿ ಖುಷಿ ಸಂಜನಾ ಶ್ರೀಲಕ್ಷ್ಮೀ ಯುಕ್ತಿ ಚೇತನ್ ವಿನೋದ್ ಈ ತಂಡದ ಸದಸ್ಯರು ಇಂಜಿನಿಯರ್ಸ್ ವಕೀಲರು ಕೆಲಸ ಮಾಡುತ್ತಿದ್ದು ಫಾರ್ಮಸಿ ಇಂಜಿನಿಯರಿಂಗ್ ಓದುತ್ತಿರುವವರು ಇದ್ದಾರೆ.