Breaking News

ವಿದ್ಯಾರ್ಥಿದೆಸೆಯಿಂದಲೇ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿಕೊಳ್ಳುವುದು ಇಂದಿನದಿನಮಾನಗಳಲ್ಲಿ ಅತ್ಯಂತ ಅಗತ್ಯ -ಡಾ. ಅಮರೇಶ್ ಪಾಟೀಲ್

Dr. Amarēś pāṭīlIt is very necessary to develop a scientific attitude from the students themselves -Dr. Amaresh Patil

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಗಂಗಾವತಿ, ೧೩:ಇಂದಿನ ಮಕ್ಕಳೇ ಮುಂದಿನ ನಾಗರಿಕರು ವಿದ್ಯಾರ್ಥಿ ದೆಸೆಯಿಂದಲೇ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿಕೊಳ್ಳುವುದು ಇಂದಿನ ದಿನಮಾನಗಳಲ್ಲಿ ಅತ್ಯಂತ ಅಗತ್ಯ ಎಂದು ಗಂಗಾವತಿಯ ಖ್ಯಾತ ಮಕ್ಕಳ ತಜ್ಞರು ಹಾಗೂ ಡಾ. ಹೆಚ್ ನರಸಿಂಹಯ್ಯ ಪ್ರಶಸ್ತಿ ಪುರಸ್ಕೃತ ಡಾ. ಅಮರೇಶ್ ಪಾಟೀಲ್ ಅಭಿಪ್ರಾಯಪಟ್ಟರು . ಅವರು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಜಿಲ್ಲಾ ಘಟಕ ಕೊಪ್ಪಳ ವತಿಯಿಂದ, ಸ್ವಾಮಿ ವಿವೇಕಾನಂದರ ದಿನಾಚರಣೆ ಪ್ರಯುಕ್ತ ಸರ್ಕಾರಿ ಪ್ರೌಢಶಾಲೆ ಇಸ್ಲಾಂಪುರ್ ಸಿಬಿಎಸ್ ಗಂಜ್ ನಲ್ಲಿ ಹಮ್ಮಿಕೊಳ್ಳಲಾದ ಯುವ ವೈಜ್ಞಾನಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು. ವಿಜ್ಞಾನ ಹಾಗೂ ಆಧ್ಯಾತ್ಮ ಜೊತೆಗೂಡಿ ಸಾಗಬೇಕು. ನಿಮ್ಮೊಳಗೆ ನೀವು ಇಣುಕಿ ನೋಡಿದಾಗ ಆ ಸತ್ಯದ ಅರಿವಾಗಲು ಸಾಧ್ಯ ಎಂದರು ಸ್ವಾಮಿ ವಿವೇಕಾನಂದರು ಯಾವುದೇ ಜಾತಿ ಧರ್ಮಕ್ಕೆ ಸೀಮಿತ ರಾಗಿರಲಿಲ್ಲ ಅವರೊಬ್ಬ ದೃಢ ಮನಸ್ಸಿನ ಸಂತರಾಗಿದ್ದು ಭಾರತದ ಯೋಗ ಪದ್ಧತಿಯನ್ನು ಪ್ರಪಂಚಕ್ಕೆ ಪರಿಚಯಿಸಿದವರು ಎಂದರು.
ಇನ್ನೋರ್ವ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಕೊಪ್ಪಳ ಜಿಲ್ಲಾ ಆರ್ ಟಿ ಓ ಕಚೇರಿಯ ನಿವೃತ್ತ ಸೂಪರಿಟೆಂಡೆ ಡೆಂಟ್ ಆಗಿರುವ ಸನ್ಮಾನ ಶ್ರೀ ಲಕ್ಷ್ಮಣ್ ಗೌಡ್ರು ಮಾತನಾಡಿ ಪ್ರಾಮಾಣಿಕತೆ ಶ್ರದ್ಧೆ ಗುರಿ ಮುಟ್ಟಲೇಬೇಕೆಂಬ ಛಲವಿದ್ದರೆ ಏನನ್ನಾದರೂ ಸಾಧಿಸಬಹುದು ಇದಕ್ಕೆ ಸಾಕ್ಷಾತ್ ನನ್ನ ಸುಪುತ್ರರು ನೈಜ ಉದಾಹರಣೆ ಎಂದು ತಮ್ಮ ಸ್ವಂತ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.
ಪರಿಷತ್ತಿನ ಕೊಪ್ಪಳ ಜಿಲ್ಲಾ ಅಧ್ಯಕ್ಷರಾದ ಸಿದ್ದಲಿಂಗೇಶ್ವರ ಪೂಲ ಬಾವಿ ಮಾತನಾಡಿ ಪರಿಷತ್ತು ಅತ್ಯಂತ ವೇಗವಾಗಿ ಇಡೀ ರಾಜ್ಯದಲ್ಲಿ ಬೆಳೆಯುತ್ತಿದ್ದು ಈಗಾಗಲೇ 40,000ಕ್ಕೂ ಹೆಚ್ಚು ಜನ ಸದಸ್ಯರನ್ನು ಹೊಂದಿದೆ. ಅಜ್ಞಾನ ಅಳಿಯಬೇಕೆನ್ನುವ ವಿಜ್ಞಾನ ಬೆಳೆಯಬೇಕೆನ್ನುವ ಎಲ್ಲರೂ ಸಹ ಇದರ ಸದಸ್ಯರಾಗಬಹುದು ಎಂದರು.
ಶಾಲೆ ಪ್ರಭಾರಿ ಮುಖ್ಯಗುರು ಎಸ್ ಕೆ ಜಡ್ ಮೋಹಿದೀನ್ ಕರ್ನಾಟಕ ರಾಜ್ಯ ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾ ಖಜಾಂಚಿ ಈರಣ್ಣ ಹೆಬ್ಬಾಳ್ ಗಂಗಾವತಿ ತಾಲೂಕ ಪ್ರೌಢಶಾಲಾ ನೌಕರರ ಪತ್ತಿನ ಸಹಕಾರ ಸಂಘದ ನಿರ್ದೇಶಕಿಯಾದ ಶ್ರೀಮತಿ ಜಯಶ್ರೀ ಹಕ್ಕಂಡಿ ಕಾರ್ಯಕ್ರಮ ನಿರೂಪಿಸಿದರು . ಶಾಲೆಯ ವಿಜ್ಞಾನ ಶಿಕ್ಷಕ ಅಮೃತ್ ಕುಮಾರ್ ಸ್ವಾಗತಿಸಿ ದರು. ಶಾಲೆ ವಿದ್ಯಾರ್ಥಿನಿ ಕುಮಾರಿ ಮೀನಾಕ್ಷಿ ಪ್ರಾರ್ಥಿಸಿದರು. ಶಾಲೆಯ ಹಿರಿಯ ಶಿಕ್ಷಕರಾದ ಶ್ರೀ ಅಬ್ದುಲ್ ನಬಿ, ಶ್ರೀಮತಿ ಸೋಫಿಯಾ ಬೇಗಂ, ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಭೀಮಪ್ಪ ಕೋಳೂರು, ಶಾಮಲಮ್ಮ ಶಾಲೆಯ ಅಡುಗೆ ಸಿಬ್ಬಂದಿ ಸೇರಿದಂತೆ ಶಾಲೆ ವಿದ್ಯಾರ್ಥಿಗಳು ಹಾಜರಿದ್ದರು.

About Mallikarjun

Check Also

ಜಿಲ್ಲಾ ಕಾಂಗ್ರೆಸ್‌ಗೆ ಕಾರ್ಯದರ್ಶಿಯಾಗಿ ವಿಶಾಲಾಕ್ಷಿ ನೇಮಕ

Vishalakshi appointed as secretary of District Congress ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದ ವಿಶಾಲಾಕ್ಷಿ ವಿರೇಶ ತಾವರಗೇರಿ ಅವರನ್ನು …

Leave a Reply

Your email address will not be published. Required fields are marked *