Memorial of Shekhannacharya in Sahasranjaneya Temple
ಕೊಪ್ಪಳ, ೧೩: ನಗರದ ಶ್ರೀ ಸಹಸ್ರಾಂಜನೇಯ ದೇವಸ್ಥಾನದ ಆವರಣದಲ್ಲಿ ಆಂಜನೇಯನ ಆರಾಧಕರಾದ ಅನ್ನಪೂರ್ಣೇಶ್ವರಿ ಕೃಪಾಕಟಾಕ್ಷವಿದ್ದ ಶ್ರೀ ಶೇಖಣ್ಣಾಚಾರ್ ಶಿಲ್ಪಿ ಅವರ ೧೭ನೇ ಪುಣ್ಯ ಸ್ಮರಣೋತ್ಸವದ ಅಂಗವಾಗಿ ವಿಶೇಷ ಪೂಜೆ ಜರುಗಿತು.
ಗವಿಶ್ರೀನಗರದ ಶ್ರೀ ಕೇತೇಶ್ವರ ಕಲ್ಯಾಣ ಮಂಟಪದ ಹತ್ತಿರವಿರುವ ಶ್ರೀ ಸಹಸ್ರಾಂಜನೇಯ ದೇವಸ್ಥಾನದಲ್ಲಿ ಪಂಚಾಮೃತ ಅಭಿಷೇಕ ಮತ್ತು ಕಾರ್ತಿಕ ಇಳಿಸುವ ಕಾರ್ಯಕ್ರಮ ನಿಮಿತ್ಯ ಸಂಕ್ಷಿಪ್ತ ಮದ್ದು ಸುಡುವ ಕಾರ್ಯಕ್ರಮ ಸಹ ನಡೆಯಿತು.
ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಮಂಜುನಾಥ ಜಿ. ಗೊಂಡಬಾಳ ಮಾತನಾಡಿ, ವಿಶ್ವದಲ್ಲಿಯೇ ಇಂಥಹ ದೇವಸ್ಥಾನ ಸಿಗುವದಿಲ್ಲ, ಒಂದೇ ಕಡೆಗೆ ೬೧೪೪ ಆಂಜನೇಯನ ಮೂರ್ತಿಗಳು ನೋಡಲು ಸಿಗುತ್ತವೆ, ಟ್ರಸ್ಟ್ ಅಧ್ಯಕ್ಷ ಮತ್ತು ಆಂಜನೇಯನ ಆರಾಧಕರಾದ ಪ್ರಕಾಶ ಶಿಲ್ಪಿ ಅವರು ಒಬ್ಬರೇ ಮಡಿಯಲ್ಲಿ ಆರು ಸಾವಿರ ಆಂಜನೇಯನ ಮೂರ್ತಿಗಳನ್ನು ಕೆತ್ತಿದ್ದಾರೆ. ಪ್ರತಿ ಮಂಡಲಕ್ಕೆ ವಿಶೇಷವಾಗಿ ಪೂಜೆ ಮಾಡಲಾಗುತ್ತಿದೆ, ಇಂತಹ ಸ್ಥಳದ ಮಹಿಮೆ ಇರುವ ದೇವಸ್ಥಾನದ ನಂಟು ಈಗ ರಾಮನ ಅಯೋಧ್ಯೆಗೆ ಬೆಸೆದುಕೊಂಡಿದೆ ಎಂದರು.
ಒAದು ದಶಕದ ಕಾಲ ದೇವಸ್ಥಾನದ ಸ್ಥಳಕ್ಕೆ ಖ್ಯಾತನಾಮರು ಆಗಮಿಸಿ ಸ್ಥಳಪಾವನ ಮಾಡಿದ್ದಾರೆ, ಅತೀ ಶೀಘ್ರದಲ್ಲಿ ಅಲ್ಲಿ ಶಿಲಾ ದೇವಸ್ಥಾನ ನಿರ್ಮಾಣ ಕಾರ್ಯ ಆರಂಭವಾಗಲಿದೆ, ಜನೇವರಿ ೨೨ ರಂದು ಅಯೋಧ್ಯೆ ರಾಮನ ಮೂರ್ತಿ ಪ್ರತಿಷ್ಠಾನಗೊಳ್ಳಲಿದೆ ಅಂದು ಅದೇ ಕಲ್ಲಿನ ಉಳಿದ ಬಾಗದಲ್ಲಿ ಹನುಮನ ವಿಶೇಷ ಮೂರ್ತಿ ಸಿದ್ದಗೊಂಡ ಪೂಜೆಗೊಳ್ಳಲಿದೆ ಎಂದರು.
ಈ ಸಂದರ್ಭದಲ್ಲಿ ಆಂಜನೇಯನ ಆರಾಧಕರಾದ ಪ್ರಕಾಶ ಶಿಲ್ಪಿ, ಮಹಿಳಾ ಮುಖಂಡರಾದ ಜ್ಯೋತಿ ಎಂ. ಗೊಂಡಬಾಳ, ಪ್ರಹಲ್ಹಾದಪ್ಪ, ವಿರೇಶ ಚೋಳಪ್ಪನವರ, ಸೌಭಾಗ್ಯ ಗೊರವರ, ಪ್ರಸನ್ನ, ಪವನ, ಪುನೀತ ಅನೇಕರಿದ್ದರು.