Hanumanthappa Andagi was awarded Ph.D
ಕೊಪ್ಪಳ : ಕೊಪ್ಪಳ ತಾಲೂಕಿನ ಹಿರೇಸಿಂದೋಗಿ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರು ಹಾಗೂ ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ಅವರು ಗದಗ ಜಿಲ್ಲೆಯ ಹೊಳೆಆಲೂರು ಎಸ್. ಕೆ. ವಿ.ಪಿ. ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯ ಹಾಗೂ ಕನ್ನಡ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಹಪ್ರಾಧ್ಯಾಪಕರಾದ ಡಾ. ಪ್ರಭುದೇವ ಅಂದಾನೆಪ್ಪ ಗಂಜಿಹಾಳ ಅವರ ಮಾರ್ಗದರ್ಶನದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗಕ್ಕೆ ಸಲ್ಲಿಸಿದ `ಸ್ವಾತಂತ್ರೊ÷್ಯÃತ್ತರ ಕಾಲದ ಕನ್ನಡ ಲಲಿತ ಪ್ರಬಂಧಗಳಲ್ಲಿ ಸಾಮಾಜಿಕ ವಾಸ್ತವ ( ಆಯ್ದ ಲಲಿತ ಪ್ರಬಂಧಕಾರರನ್ನು ಅನುಲಕ್ಷಿಸಿ) ಎಂಬ ವಿಷಯ ಕುರಿತು ಮಂಡಿಸಿದ ಸಂಶೋಧನಾ ಮಹಾಪ್ರಬಂದಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿದ್ಯಾರಣ್ಯದ ನವರಂಗ ಬಯಲು ರಂಗಮAದಿರದಲ್ಲಿ ಹಮ್ಮಿಕೊಂಡ ನುಡಿಹಬ್ಬ ೩೨ನೇ ಘಟಿಕೋತ್ಸವದಲ್ಲಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಪರಮಶಿವಮೂರ್ತಿ, ಕರ್ನಾಟಕ ಸರ್ಕಾರದ ಗೌರವಾನ್ವಿತ ಉನ್ನತ ಶಿಕ್ಷಣ ಸಚಿವರೂ ಸಮಕುಲಾಧಿಪತಿಗಳು ಆಗಿರುವ ಡಾ. ಎಂ. ಸಿ. ಸುಧಾಕರ್ ಅವರು ಪಿಎಚ್.ಡಿ ಪದವಿ ಪ್ರಧಾನ ಮಾಡಿದರು. ನಾಡೋಜ ಪುರಸ್ಕöÈತರಾದ ಡಾ.ಬಸವಲಿಂಗ ಪಟ್ಟ ದೇವರು, ಪ್ರೊ. ತೇಜಸ್ವಿ ವಿ. ಕಟ್ಟಿಮನಿ, ಡಾ. ಎಸ್. ವಿ .ಶರ್ಮ, ಅನಂತಪುರAನ ಆಂಧ್ರಪ್ರದೇಶ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಎಸ್. ವಿ.ಕೋರಿ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ವಿಜಯ ಪೂಣಚ್ಚ, ಅಧ್ಯಯನಾಂಗದ ನಿರ್ದೇಶಕರಾದ ಡಾ.ಪಿ. ಮಹದೇವಯ್ಯ, ಪ್ರಸಾರಾಂಗದ ನಿರ್ದೇಶಕರಾದ ಡಾ. ಶೈಲಜ ಇಂ. ಹಿರೇಮಠ, ಭಾಷಾ ನಿಕಾಯದ ಡೀನರಾದ ಡಾ. ಎಫ್ .ಟಿ.ಹಳ್ಳಿಕೇರಿ, ಸಮಾಜ ವಿಜ್ಞಾನಗಳ ನಿಕಾಯದ ಡೀನರಾದ ಡಾ. ಚೆಲುವರಾಜ, ಲಲಿತ ಕಲೆಗಳ ನಿಕಾಯದ ಡೀನರಾದ ಡಾ. ಶಿವಾನಂದ ವಿರಕ್ತಮಠ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.