Breaking News

ಎಳ್ಳು ಅಮವಾಸಿ ಉತ್ತರ‌ ಕರ್ನಾಟಕದ ರೈತರ ಹಬ್ಬ ಎಳ್ಳ ಅಮವಾಸಿ

Greetings on Ellu Amavasi Elu Amavasi, the farmers festival of North Karnataka

ಎಳ್ಳು ಅಮಾವಾಸ್ಯೆ ದಕ್ಷಿಣಾಯನದ. ಮಾರ್ಗಶಿರ ಮಾಸದ ಅಮಾವಾಸ್ಯೆಯ ದಿನವಾಗಿದ್ದು, ಎಳ್ಳು ಬೆಳೆ ಬರುವ ದಿನವನ್ನು ಎಳ್ಳಮಾವಾಸ್ಯೆ ಎಂದು ಆಚರಿಸುತ್ತಾರೆ. ಭಾರತದಲ್ಲಿ ಕರ್ನಾಟಕ, ಮತ್ತು ಆಂಧ್ರಪ್ರದೇಶದಲ್ಲಿ ರೈತರು ಈ ದಿನವನ್ನು ಆಚರಿಸುತ್ತಾರೆ. ಈ ದಿನ ರ‍್ನಾಟಕದಲ್ಲಿ ಮಲೆನಾಡು, ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕನ್ನಡ ಪ್ರದೇಶದಲ್ಲಿ ವಿಭಿನ್ನ ರೀತಿಯಲ್ಲಿ ಆಚರಿಸುತ್ತಾರೆ. ಎಳ್ಳು ಅಮಾವಾಸ್ಯೆ ದಿನವು ಆಹಾರ ಸಂಸ್ಕೃತಿಯ ಪ್ರತೀಕವಾಗಿದೆ.

ಕರ್ದ ಕರ್ಚಿಕಾಯಿ ಎಣ್ಣೆ ಬದನಿಕಾಯಿ
ಎಳ್ಳ ಹಚ್ಚಿದ ಸಜ್ಜಿರೊಟ್ಟಿ ಕೆನೆ ಮೊಸರು ಕಾರೆಳ್ಳ ಹಿಂಡಿಅಗಸಿ ಹಿಂಡಿ ಹುಳಿ ಬಾನಹಕ್ಕರಕಿ ಪಲ್ಲೆ ಗಜ್ಜರಿ ಮೆಂತೆ ಪಲ್ಲೆತಪ್ಪಲ ಸಹಿತ ಉಳ್ಳಾಗಡ್ಡಿ
ಪುಂಡಿ ಪಲ್ಯ ಹಿಂಡಿ ಪಲ್ಯಸೇಂಗಾ ಹೋಳಿಗೆ ಹೆತ್ತುಪ್ಪ ಕರಿಗಡಬುಹಪ್ಪಳ ಸಂಡಿಗೆ ಬುತ್ತಿ ಕಟಗೊಂಡು ಸಂಭ್ರಮಸಡಗರದಿಂದ ಸುಮಂಗಲೆಯರು ಹೊಲಕ್ಕೆಹೋಗುವಾಗಓಣಿಯ ಓರಗೆಯವರನ್ನುಕರೆಯುವುದುಎಷ್ಟೊಂದುಸಂತಸ, ಕಲ್ಲವ್ವ ಬಾರೆ ಮಲ್ಲವ್ವ ನೀ ಬಾರೆ ನಿಂಗಕ್ಕ ನೀನು ಬಾರೆಸಿಂಗರಿಸಿದ ಚಕ್ಕಡಿ ತಯಾರಿದೆ ಬೇಗ ಬೇಗನೆ ಬನ್ನರೆಲ್ಲರೂಎಂದು ಕರೆಯೋದಿದೆಯಲ್ಲ ಇದು ನಮ್ಮ ಉತ್ತರ ಕರ್ನಾಟಕದ ಹೆಮ್ಮೆಯ ಮಾತಲ್ಲವೇ?

ಇದೊಂದು ದಿನ ರೈತರ ಹಬ್ಬ. ರೈತರು ಅವರ ಜಮೀನಿನಲ್ಲಿ ಎಳ್ಳು ಹಾಗೂ ಬೆಲ್ಲವನ್ನು ಚಿಮ್ಮುತ್ತಾರೆ. ಇವುಗಳು ಭೂಮಿಯ ಫಲವತ್ತತೆಯನ್ನು ಕಾಪಾಡುವ ಎರೆಹುಳಗಳಿಗೆ ಆಹಾರವಾಗುತ್ತದೆಯೆಂಬ ಉದ್ದೇಶದಿಂದ ಚಿಮ್ಮಲಾಗುತ್ತದೆ. ಅವರ ಹೊಲದಲ್ಲಿ ಬೆಳೆದ ಹಿಂಗಾರು ಪೈರುಗಳ ನಡುವೆ ಬನ್ನಿಮರವನ್ನು ಹುಡುಕಿ ಅದಕ್ಕೆ ಪೂಜೆ ಮಾಡಿ ಭೂಮಿತಾಯಿಗೆ ಚರಗ ಚೆಲ್ಲುವುದು ಈ ಹಬ್ಬದ ವಿಶೇಷವಾಗಿದೆ. ಕೆಲವರು ಪಾಂಡವರ ಸ್ವರೂಪವಾಗಿ ಐದು ಕಲ್ಲುಗಳಿಗೆ ಪೂಜೆ ಸಲ್ಲಿಸುತ್ತಾರೆ. ಈ ದಿನಕ್ಕೆ ಮೂರು ನಾಲ್ಕು ದಿನವಿರುವಾಗಲೇ ರೈತರ ಮನೆಗಳಲ್ಲಿ ನಾನಾ ರೀತಿಯ ಚಟ್ನಿ, ಕಾಳು, ಎಣ್ಣೆಗಾಯಿ, ಎಳ್ಳು ಹಾಗೂ ಸೇಂಗಾ ಹೋಳಿಗೆ, ಎಳ್ಳು ಹಚ್ಚಿದ ಸಜ್ಜೆ, ಜೋಳದ ರೊಟ್ಟಿ, ಚಿಕ್ಕಿ, ರ‍್ತಾ, ಪಾಲಕ್ ಮೆಂತ್ಯೆ ಉಪಯೋಗಿಸಿ ತಯಾರಿಸುವ ತಿಂಡಿ, ಭಜ್ಜಿ ಸೇರಿದಂತೆ ನಾನಾ ಬಗೆಯ ಖಾದ್ಯವನ್ನು ತಯಾರಿಸಿ ನಂತರ ರೈತಾಪಿ ರ‍್ಗದವರು ಕುಟುಂಬ ಸಮೇತರಾಗಿ ಸಹಭೋಜನ ಮಾಡಿಸಂಭ್ರಮಿಸುತ್ತಾರೆ.


ಶರಣು ಶರಣಾರ್ಥಿಗಳು

About Mallikarjun

Check Also

ವೈದ್ಯರ ಭಾರವನ್ನು ಕಡಿಮೆ ಮಾಡುವವರು ಶುಶ್ರೂಷಕಿಯರು : ಡಾ.ಲಿಂಗರಾಜ್‌ಸರ್ಕಾರಿ ಉಪವಿಭಾಗಆಸ್ಪತ್ರೆಯಲ್ಲಿ ವಿಶ್ವ ದಾದಿಯರ ದಿನಾಚರಣೆ

ಗಂಗಾವತಿ,14:ವೈದ್ಯರ ಭಾರವನ್ನು ಕಡಿಮೆ ಮಾಡುವವರು ಶುಶ್ರೂಷಕಿಯರು, ಅವರಿಗೆ ಗೌರವ ಸಲ್ಲಿಸಲೆಂದೇ ಪ್ರತಿ ವರ್ಷ ಮೇ.12 ರಂದು ಅಂತಾರಾಷ್ಟ್ರೀಯ ಶುಶ್ರೂಷಕಿಯರ ದಿನವನ್ನು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.