Savitribai Pule Award for teacher Gayatri

ಗಂಗಾವತಿ:ಧಾರವಾಡದ ಕರ್ನಾಟಕ ರಾಜ್ಯ ಸರ್ಕಾರಿ ಹಾಗೂ ಅರೆ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ
ನಗರದ ಹಿರೇಜಂತಗಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಗಾಯಿತ್ರಿಬಾಯಿ ಅವರಿಗೆ ರಾಜ್ಯ ಮಟ್ಟದ ಸಾವಿತ್ರಿಬಾಯಿ ಪುಲೆ ಪ್ರಶಸ್ತಿ . ಅದೇ ರೀತಿಯಾಗಿ ಸಾವಿತ್ರಿಬಾಯಿ ರಾಷ್ಟ್ರ ಮಟ್ಟದ ಪ್ರಶಸ್ತಿಯನ್ನು ಶಿಕ್ಷಕಿ ತಿಪ್ಪವ್ವ ಉಳ್ಳಟ್ಟಿ ಅವರಿಗೆ
ನೀಡಲಾಗಿದೆ. ತಾಲ್ಲೂಕಿನ
ಸಂಗಾಪುರ ಗ್ರಾಮದ ಬಿ ಆರ್ ಸಿ ಕೇಂದ್ರದ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ರಮೇಶ ಕಂಬಳಿ ಅವರ ಪುತ್ರ ಆಯುಷ್ ಕಂಬಳಿ ಅವರ ಹಾರ್ಮೋನಿಯಂ ಕ್ಷೇತ್ರದ ಸಾಧನೆ ಗುರುತಿಸಿ ಜ್ಯೋತಿ ಬಾ ಪುಲೆ ಬಾಲ ಪ್ರತಿಭೆ ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಧಾರವಾಡದ ಆಲೂರು ವೆಂಕಟರಾವ್ ಅವರ ಸಭಾ ಭವನದಲ್ಲಿ ಭಾನುವಾರ ನಡೆದ ಸಾವಿತ್ರಿಬಾಯಿ ಪುಲೆ ಜಯಂತಿ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಎ.ಸರಿಕಾರ ತಿಳಿಸಿದ್ದಾರೆ.
ಸಂಘದ ರಾಜ್ಯ ಅಧ್ಯಕ್ಷ ಡಾ.ಡಿ.ವಿಶ್ವನಾಥ, ಪ್ರಧಾನ ಕಾರ್ಯದರ್ಶಿ ಎನ್.ಎಲ್. ರಾಥೋಡ್, ಇತರರು ಇದ್ದರು.
Kalyanasiri Kannada News Live 24×7 | News Karnataka
