Breaking News

ಕಾಡಂಚಿನ ಗ್ರಾಮಗಳ ಸಮಸ್ಯೆಗಳನ್ನುಬಗೆಹರಿಸಲು ಸರ್ಕಾರಗಳು ವಿಫಲವಾಗಿವೆ:ಕೂಡ್ಲೂರು ಶ್ರೀದರ್ ಮೂರ್ತಿ

Governments have failed to solve the problems of forest villages: Cuddalore Shridar Murthy.

ಜಾಹೀರಾತು


ವರದಿ : ಬಂಗಾರಪ್ಪ ಸಿ ಹನೂರು
ಹನೂರು : ತಾಲ್ಲೂಕು ಸುತ್ತಮುತ್ತಲಿನಲ್ಲಿ ಗ್ರಾಮಗಳಲ್ಲಿ ವಾಸಿಸುವ ಜನರಲ್ಲಿ ಅದೇ ಗ್ರಾಮಗಳಿಂದ ನಾವು ಸರ್ವೆ ಮಾಡಿದಾಗ ೧೯೬೨ ರಿಂದ ರೈತರು ಸಾಗುವಳಿ ಮಾಡಿಕೊಂಡು ಬಂದಿದ್ದಾರೆ. ಆದರೆ ಇವರಿಗೆ ಸಂಬಂಧಪಟ್ಟ ಅಧಿಕಾರಿಗಳಾಗಲಿ ಜನಪ್ರತಿನಿಧಿಗಳಾಗಲಿ, ಇವರ ಕಡೆ ಗಮನಹರಿಸಿಲ್ಲವೆಂದು ನಿರುದ್ಯೋಗಿಗಳ ರಾಜ್ಯ ಸಂಘದ ಅಧ್ಯಕ್ಷರಾದ ಕೂಡ್ಲೂರು ಶ್ರೀದರ ಮೂರ್ತಿ ತಿಳಿಸಿದರು . ಹನೂರು ಪಟ್ಟಣದ ಲೋಕೋಪಯೋಗಿ ಇಲಾಖೆಯ ವಸತಿಗೃಹದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮೂಲಭೂತ ಸೌಕರ್ಯಗಳಾದ ನೀರು, ವಿದ್ಯುತ್, ರಸ್ಯೆಗಳ ಬಗ್ಗೆ ಸರ್ಕಾರ ಗಮನಹರಿಸಿಲ್ಲ ಈ ಸಂಬಂಧದವಾಗಿ ಎಲ್ಲಾ ಅಧಿಕಾರಿಗಳಿಗೂ ಹಾಗೂ ಜನಪ್ರತಿನಿಧಿಗಳಿಗು ಎಲ್ಲಾರಿಗೂ ವಿಷಯ ತಿಳಿಸಿದರು, ಯಾವುದೇ ಪ್ರಯೋಜನವಾಗಿಲ್ಲ. ರಾಮಪುರ ಹೋಬಳಿಯ ಎಲ್ ಪಿ ಎಸ್ ಕ್ಯಾಂಪಿನ ಪಲಾನುಭವಿಗಳಿಗೆ ಬರಿ ಹಕ್ಕು ಪತ್ರ ನೀಡಿ ಅತ್ತ ಮಾರಲು ಹಾಗದೆ ಇತ್ತ ಸರ್ಕಾರಿ ಸೌಲಭ್ಯ ಪಡೆಯಲು ಹಾಗದೆ ತೊಂದರೆಯಾಗಿದೆ.
ಅದೇ ರೀತಿಯಲ್ಲಿ ದಂಟಳ್ಳಿ ಗ್ರಾಮದಲ್ಲಿರು ಜಮಿನುಗಳಿಗೆ ಕೊಯಮ್ಮೂತ್ತುರು ಜಿಲ್ಲೆಯಿದ್ದಾಗ ಐನೂರು ಎಕ್ರೆ ದಾಖಲೆಯಿರುವ ಕಂದಾಯ ಭೂಮಿಯಿದೆ ಆದರು ಅರಣ್ಯ ಇಲಾಖೆಯವರು ತೊಂದರೆ ನೀಡುತ್ತಾರೆ,ಈಗಾಗಲೇ 194.ಜನ ರೈತರ ಮೇಲೆ ಕೆಸ್ ಹಾಕಿದ್ದಾರೆ 1902ರಲ್ಲಿ ಅಂದಿನ ಸರ್ಕಾರವು ಅರಣ್ಯ ಇಲಾಖೆಗೆ ಪತ್ರ ಬರೆದು ರೈತರು ಜಿವನ ಮಾಡಲು ತೊಂದರೆ ಮಾಡಬೇಡಿ ಎಂದು ತಿಳಿಸಿದರು . ಡಿ ಲೈನ್ ಮಾಡಲಾಗಿದೆ. ಇನ್ನು ಅರಣ್ಯ ಇಲಾಖೆ ೧೯೭೧ ರ ಪ್ರಕಾರ ಯಾವುದೇ ಜಮಿನು ಅತಿಕ್ರಮಿಸಲು ಗೆಜೆಟ್ ನೋಟಿಪೀಕೆಷನ್ ಮುಖಾಂತರ ಆಕ್ರಮಿಸಿಕೊಳ್ಳಬೇಕು ಆಗ ಮಾತ್ರ ಸಾದ್ಯ ಸರ್ಕಾರ ಈ ಕೂಡಲೆ ಸಾಗುವಳಿ ಮಾಡುವವರಿಗೆ ಪಟ್ಟಾ ನೀಡಬೇಕು. ಮುಂದಿನ ದಿನಗಳಲ್ಲಿ ಇದೇ ತಿಂಗಳು
೨೨ ರಂದು ಪ್ರತಿಭಟನೆ ಮಾಡಲು ನಿರ್ದರಿಸಲಾಗಿದೆ , ಚಾಮರಾಜನಗರ ಜಿಲ್ಲೆಯು ಇಪ್ಪತ್ತೇಳು ವರ್ಷ ಕಳೆದಿದೆ ಆದರು ಭೂ ದಾಖಲೆಯನ್ನು ಕೊಯಂಬತ್ತೂರಿನಲ್ಲಿರಿಸಲಾಗಿದೆ . ಈ ಕೂಡಲೆ ದಾಖಲೆಯನ್ನು ತರಿಸಿಕೊಳ್ಳಲು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡುತ್ತೆವೆ ಎಂದರು . ಇದೇ ಸಂದರ್ಭದಲ್ಲಿ ಪುಟ್ಟಮಾದಯ್ಯ , ಮರಿಯ ಲೂಯಿಸ್ ,ಕ್ರಿಷ್ಣಪ್ಪ ,ರಂಜಿತ್ ಕುಮರ್ ,ಆಂತೋಣಿ , ಇನ್ನಿತರರು ಹಾಜರಿದ್ದರು .

About Mallikarjun

Check Also

ಜ್ಞಾನಾಕ್ಷಿರಾಜರಾಜೇಶ್ವರಿ ಮ್ಯೂಸಿಕ್ ವಿಡಿಯೋ ಆಲ್ಬಮ್ ಶೀರ್ಷಿಕೆ ಅನಾವರಣ

Gnanakshi Rajarajeshwari Music Video Album Title Unveiled ಬೆಂಗಳೂರಿನ ಸುಪ್ರಸಿದ್ದ ಐತಿಹಾಸಿಕ ಶ್ರೀ ಜ್ಞಾನಾಕ್ಷಿ ರಾಜರಾಜೇಶ್ವರಿ ದೇವಸ್ಥಾನ, ಶ್ರೀ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.