Breaking News

ಏಸುಕ್ರಿಸ್ತನಅನುಯಾಯಿಗಳು ಶಾಂತಿಪ್ರಿಯರು : ಶಾಸಕ ಹಿಟ್ನಾಳ ಬಣ್ಣನೆ

Christians are pacifists: MLA Hitna Barane


ಕೊಪ್ಪಳ : ಜಗತ್ತಿನಲ್ಲಿ ಎಲ್ಲಾ ಮಾನವರೂ ಸಮಾನರು, ಭಾರತದಲ್ಲಿ ಸಂವಿಧಾನಬದ್ಧವಾದ ಅಧಿಕಾರ ಮತ್ತು ಅವಕಾಶದ ಮೂಲಕ ಎಲ್ಲಾ ಸಮುದಾಯಗಳಿಗೆ, ಧರ್ಮಗಳಿಗೆ ಜೀವಿಸುವ ಹಕ್ಕನ್ನು ಕೊಟ್ಟಿದೆ ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಹೇಳಿದರು.
ಅವರು ನಗರದ ತಾಲೂಕ ಕ್ರೀಡಾಂಗಣದಲ್ಲಿ ತಾಲೂಕ ಪಾಸ್ರ‍್ಸ್ ಅಸೋಸಿಯೇಷನ್ ಮೂಲಕ ಹಮ್ಮಿಕೊಳ್ಳಲಾಗಿದ್ದ ಕ್ರಿಸಮಸ್ ಹಬ್ಬ, ಹೊಸ ವರ್ಷಾಚರಣೆ ಮತ್ತು ಶಾಸಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ತಾಲೂಕಿನ ಎಲ್ಲಾ ಚರ್ಚ್ಗಳ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಕ್ರಿಶ್ಚಿಯನ್ ಸಮುದಾಯ ಶಾಂತಿ ಪ್ರಿಯರು, ಸಮಾಜಮುಖಿ ಜೀವಿಗಳು ಸೇವೆಗೆ ಹೆಸರಾದವರು, ತಾಯಿ ಮದರ್ ಥೆರೆಸಾರಂಥವರು ಭಾರತದ ಕುಷ್ಠರೋಗಿಗಳ ಪಾಲನೆ ಪೋಷಣೆ ಮತ್ತು ಚಿಕಿತ್ಸೆಯಲ್ಲಿ ಹೆಸರು ಮಾಡಿ ನೋಬೆಲ್ ಪ್ರಶಸ್ತಿ ತಂದವರು. ಇಂತಹ ಸಮುದಾಯದ ಸತ್ಕಾರ ತಮಗೆ ಇನ್ನಷ್ಟು ಸಮಾಜ ಸೇವೆ ಮಾಡಲು ಸ್ಪೂರ್ತಿಯಾಗಿದೆ, ಎಲ್ಲರ ಸಹಕಾರದಿಂದ ಮೂರನೇ ಬಾರಿ ಶಾಸಕನಾಗಿದ್ದೇನೆ ಇನ್ನಷ್ಟು ಉತ್ತಮ ಕೆಲಸ ಮತ್ತು ಅಭಿವೃದ್ಧಿ ಮಾಡಲು ಕಟಿಬದ್ಧನಾಗಿದ್ದು, ಶೀಘ್ರ ಅನುದಾನ ತಂದು ಕೆಲಸ ಮಾಡುವ ಭರವಸೆ ನೀಡಿದರು.
ಕ್ರಿಸ್ತ ನಮನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ವಿಶ್ವವಾಣಿ ರಾಜ್ಯ ಸಂಯೋಜಕ ಬದ್ರಿನಾಥ ಬೆಂಗಳೂರು. ತಾ. ಪಂ. ಮಾಜಿ ಅಧ್ಯಕ್ಷ ಎಸ್. ಬಾಲಚಂದ್ರನ್, ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜ್ಯೋತಿ ಎಂ. ಗೊಂಡಬಾಳ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಕ್ರಿಸ್ತಜ್ಯೋತಿ ಇಸಿಐ ಚರ್ಚ್ನ ಫಾದರ್ ರವಿಕುಮಾರ್, ರೆ. ನವನೀತಕುಮಾರ್, ರೆ. ಅಬ್ರಾಹಾಮ್ ನತಾನಯೇಲ ಭಾಗ್ಯನಗರ, ರೆ. ಬಿ. ಎಂ. ಡ್ಯಾನಿಯೇಲ, ರೆ. ಬಿ. ಜೋಸೇಫ್ ಮುನಿರಾಬಾದ್, ಸ. ನತಾನಯೇಲ, ರೆ. ಎನ್. ಸೋಲೊಮೋನರಾಜ, ರೆ. ದೇವೇಂದ್ರಪ್ಪ ಜೆ.ಎಲ್., ಶ್ಯಾಮಸುಂದರ್ ಹೆಚ್. ಭಾಗ್ಯನಗರ ಇತರರು ಇದ್ದರು.

About Mallikarjun

Check Also

ಅಶೋಕಸ್ವಾಮಿ ಹೇರೂರಭೇಟಿ:ಕಾಂಗ್ರೆಸ್ಸಿಗರಿಂದಮತಯಾಚನೆ.

ಗಂಗಾವತಿ:ರಾಜ್ಯ ವಾಣಿಜೋಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ನಿರ್ದೇಶಕ ಮತ್ತು ರಾಜ್ಯ ಔಷಧ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷ ಅಶೋಕಸ್ವಾಮಿ ಹೇರೂರ ಅವರನ್ನು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.