Breaking News

ಬಸವಣ್ಣನವರಿಗೆ ಜಾತವೆದ ಮುನಿಗಳು ಲಿಂಗದೀಕ್ಷೆ ಕೊಟ್ಟಿದ್ದು ಹಸಿ ಸುಳ್ಳು ನಾನು ಪುರಾವೆ ಸಹಿತ ನಿಮ್ಮ ಜೊತೆ ಬಹಿರಂಗ ಚರ್ಚೆಗೆ ಸಿದ್ದ:ಶ್ರೀಕಾಂತ ಸ್ವಾಮಿ, ಕರ್ನಾಟಕ ರಾಜ್ಯ ಸಂಚಾಲಕ, ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿ.

Basavanna was given gender initiation by Jatava sages is a blatant lie I am ready to have an open discussion with you with proof: Srikanta Swamy, Karnataka State Coordinator, All India Lingayat Coordination Committee.

ಜಾಹೀರಾತು

ಬಸವಣ್ಣನವರಿಗೆ ಜಾತವೆದ ಮುನಿಗಳು ಲಿಂಗದೀಕ್ಷೆ ಕೊಟ್ಟಿದ್ದರು: ಪೂಜ್ಯ ಶ್ರೀ ರಂಭಾಪುರೀ ಪ್ರಸನ್ನರೇಣುಕಾ ವೀರಸೋಮೇಶ್ವರ ಜಗದ್ಗುರುಹೆಳಿಕೆ

Screenshot 2023 12 27 08 53 33 46 6012fa4d4ddec268fc5c7112cbb265e7

ಜಗದ್ಗುರುಗಳೇ ಸುಳ್ಳು ಏಕೆ ಹೇಳುತ್ತೀರಿ? ಸಮಾಜ ನಿಮಗೆ ಗೌರವ ಕೊಡುತ್ತದೆ, ಅಡ್ಡಪಲ್ಲಕ್ಕಿ ಮೇಲೆ ಕೂಡಿಸಿ ಹೆಗಲ ಮೇಲೆ ಹೊತ್ತು ಮೆರವಣಿಗೆ ಮಾಡುತ್ತಾರೆ, ನೀವು ಈ ರೀತಿ ಸುಳ್ಳು ಹೇಳಿದರೆ ನಿಮ್ಮ ಅಡ್ಡಪಲ್ಲಕ್ಕಿ ಖಡಿ ಮಾಡಿ ಖೆಡುವ ಸಮಯ ದೂರ ಇಲ್ಲ. ಬಸವಣ್ಣನವರನ್ನು ವಿರೋಧಿಸುವುದು ಬಿಟ್ಟರೆ ಉಳಿಗಾಲ ಇದೆ ಇಲ್ಲಾಂದರೆ ನೀವು ಇತಿಹಾಸ ಆಗುತ್ತಿರಿ, ನಗೆಪಾಟಲಗೆ ಗುರಿ ಆಗುತ್ತೀರಿ. ಇದು ಕಂಪ್ಯೂಟರ್ ಮೊಬೈಲ್ ಯುಗ ಸುಳ್ಳು ನಡೆಯುವುದಿಲ್ಲ. *ನಾನು ಪುರಾವೆ ಸಹಿತ ನಿಮ್ಮ ಜೊತೆ ಬಹಿರಂಗ ಚರ್ಚೆಗೆ ಸಿದ್ದ.

ಒಂದು ಪುರಾಣದಲ್ಲಿ ಬಸವಣ್ಣವರು ಜನ್ಮ ಆದಾಗ ಅವರು ಚಲನವನ ಮಾಡುತ್ತಿದ್ದಿಲ್ಲ, ಆವಾಗ ಮಾದರಸರನ್ನು ಕಾಣಲು ಒಬ್ಬ ಮುನಿ ಬಂದಿದ್ದರು, ಅವರನ್ನು ವಿಷಯ ತಿಳಿಸಿದಾಗ ಮಗುವಿಗೆ ಆಶೀರ್ವಾದ ಮಾಡಿದರು ಎಂದು ಕಥೆ ಇದೆ. ಆದರೆ ಈ ಪಂಚಾಚಾರ್ಯರು ಸುಳ್ಳಿನ ಕಂತೆ ಪೋಣಿಸಿ ಜಾತವೆದ ಮುನಿಗಳು ತೊಟ್ಟಿಲಲ್ಲಿ ಬಸವಣ್ಣನವರಿಗೆ ಲಿಂಗ ದೀಕ್ಷೆ ನೀಡಿದರು ಎಂದು ಹೇಳುತ್ತಾರೆ. ಇದು ಸುದ್ದ ಸುಳ್ಳು, ಬಸವಣ್ಣನವರು ಬ್ರಾಹ್ಮಣ ಮನೆಯಲ್ಲಿ ಜನಿಸಿದರು ಸತ್ಯ . ಮಾದರಸರು ಆ ಪ್ರಾಂತದ ಮುಖಂಡರು ರಾಜ ಆಗಿದ್ದರು, ಸಂಪ್ರಾದಯ ಬ್ರಾಹ್ಮಣ ಕುಟುಂಬದವರು. ಮಾದರಸರು ಬಸವಣ್ಣ ಮುಂಜಿ ವಿರೋಧ ಮಾಡಿದಕ್ಕೆ ಎಂಟು ವರ್ಷದ ಮಗು , ಏಕೈಕ ಮಗ ಬಸವಣ್ಣನವರನ್ನು ಮನೆಯಿಂದ ಹೊರಗೆ ಹಾಕಿದರು, ಮಾದರಸರು ಎಸ್ಟು ಕಠೋರ ಇದ್ದರು ಅನ್ನುವದು ಅರ್ಥ ಆಗುತ್ತದೆ. ಕಟ್ಟುಕಥೆಯ ವೀರಶೈವ ಗುರು ಜಾತವೆದಾ ಮುನಿ ಬ್ರಾಹ್ಮಣರ ರಾಜನ ಮನೆಯಲ್ಲಿ ಹೋಗಿ ಅವರ ಮಗುವಿಗೆ ಲಿಂಗ ಧಿಕ್ಷೆ ಕೊಡಲು ಆಗುತ್ತದ? ಅಷ್ಟು ಧೈರ್ಯನ ಮುನಿಗೆ? ಒಂದು ವೇಳೆ ಆ ಮುನಿ ಹಾಗೆ ಮಾಡಿದರೆ, ಜಾತವೆದಾ ಮುನಿಯನ್ನು ಕಂಬಕ್ಕೆ ಕಟ್ಟಿ ಹಾಕಿ ಶಿಕ್ಷೆ ಕೊಡುತ್ತಿದ್ದರು ಮಾದರಸರು.

ಜಾತವೇದಾ ಮುನಿ ಹೆಸರು ಯಾವ ಶರಣರ ವಚನಗಳಲ್ಲಿ ಉಲ್ಲೇಖ ಆಗಿಲ್ಲ. ಮಾದರಸ ಮಾದಲಂಬಿಕೆ ಹೆಸರು ಉಲ್ಲೇಖ ಆಗಿದೆ. ಜಾತವೆದಾ ಮುನಿ ಹುಟ್ಟಿಲ್ಲ, ಅದು ಒಂದು ಕಾಲ್ಪನಿಕ ಕಥೆ. ಬಸವಣ್ಣನವರು ನನಗೆ ಇಷ್ಟಲಿಂಗ ಕೊಟ್ಟವರು ಶ್ರೀಗುರು ಅನ್ನುತ್ತಾರೆ, ಶ್ರೀಗುರು ಅಂದರೆ ದೇವರು ಸೃಷ್ಟಿಕರ್ತ ಲಿಂಗದೇವರು ಪರಶಿವ, ಅದು ಅವರ ವಚನಗಳಲ್ಲಿ ಉಲ್ಲೇಖ ಆಗಿದೆ. ಲಿಂಗ ಬಸವಣ್ಣನವರ ಉದರದಲ್ಲಿ ಹುಟ್ಟಿತ್ತು ಎಂದು ಚೆನ್ನಬಸವಣ್ಣ ಹೇಳಿದ್ದಾರೆ. ಲಿಂಗಾಯತಕ್ಕೆ ಬಸವಣ್ಣನೇ ಕರ್ತೃ ಎಂದು ಸರ್ವಜ್ಞ ಹೇಳುತ್ತಾರೆ. ಹಲವಾರು ಶರಣರ ತಮ್ಮ ವಚನಗಳಲ್ಲಿ ಬಸವಣ್ಣನೇ ಧರ್ಮ ಗುರು ಎಂದು ಹೇಳಿದ್ದಾರೆ.

ಕೆಲವು ವಚನಗಳು ಉಲ್ಲೇಖ ಮಾಡುತ್ತೇನೆ, ಯಾವುದೇ ಸತ್ಯ ಗೊತ್ತಾಗುತ್ತದೆ, ಜಗದ್ಗುರುಗಳು ಸುಳ್ಳು ಹೇಳುತ್ತಾರೆ ಅನ್ನೋದು ಸಿದ್ದ ಆಗುತ್ತದೆ.

Screenshot 2023 12 27 08 41 28 69 6012fa4d4ddec268fc5c7112cbb265e7 668x1024

ಬಸವಣ್ಣ: ಇಷ್ಟಲಿಂಗ ಕೊಟ್ಟವರು ಶ್ರೀಗುರು ಅಂದರೆ ದೇವರು ಸೃಷ್ಟಿಕರ್ತ ಲಿಂಗದೇವರು ಪರಶಿವ.

ಅಂತರಂಗದೊಳಗಿರ್ದನಿರವಯಲಿಂಗವನು ಸಾವಯವಲಿಂಗವ ಮಾಡಿ, ಶ್ರೀಗುರುಸ್ವಾಮಿ ಕರಸ್ಥಲಕ್ಕೆ ತಂದುಕೊಟ್ಟನಾಗಿ, ಆ ಇಷ್ಟಲಿಂಗವೆ ಅಂತರಂಗವನಾವರಿಸಿ
ಅಂತರಂಗದ ಕರಣಂಗಳೆ ಕಿರಣಂಗಳಾಗಿ
ಬೆಳಗುವ ಚಿದಂಶವೆ ಪ್ರಾಣಲಿಂಗವು,
ಆ ಮೂಲಚೈತನ್ಯವೆ ಭಾವಲಿಂಗವು.
ಇದನರಿದು, ನೋಡುವ ನೋಟ ಭಾವಪರಿಪೂರ್ಣವಾಗಿ
ತಾನು ತಾನಾದಲ್ಲದೆ, ಇದಿರಿಟ್ಟು ತೋರುವುದಿಲ್ಲವಾಗಿ
ಅಖಂಡ ಪರಿಪೂರ್ಣವಪ್ಪ ನಿಜವು ತಾನೆ, ಕೂಡಲಸಂಗಮದೇವ

ಬಸವಣ್ಣ

ಶ್ರೀಗುರು ತನ್ನ #ಲಿಂಗವನೆ ಅಂಗದ ಮೇಲೆ ಬಿಜಯಂಗೆಯ್ಸಿದನಾಗಿ,
ಆ ಲಿಂಗಕ್ಕೆ ನಾನು ಅಷ್ಟವಿಧಾರ್ಚನೆ, ಷೋಡಶೋಪಚಾರಗಳ ಮಾಡಿ,
ಚತುರ್ವಿಧಫಲಪದಪುರುಷಾರ್ಥವ ಪಡೆದು,
ಆ ಪರಿಭವಕ್ಕೆ ಬರಲೊಲ್ಲದೆ,
ನಾನು ನಿಷ್ಕಳವೆಂಬ ಹೊಲದಲ್ಲಿ ಒಂದು ನಿಧಾನವ ಕಂಡೆ.
ಆ ನಿಧಾನದ ಹೆಸರಾವುದೆಂದಡೆ;
ತ್ರೈಲಿಂಗದ ಆದಿಮೂಲಾಂಕುರವೊಂದಾದ ಚರಲಿಂಗವೆಂದು.
ಆ ಚರಲಿಂಗದ ಪಾದಾಂಬುವ ತಂದೆನ್ನ
ಇಷ್ಟಲಿಂಗದ ಚತುರ್ವಿಧಫಲಪದಪುರುಷಾರ್ಥವೆಂಬ ಕರಂಗಳಂ ತೊಳೆವೆ.
ಅದೆಂತೆಂದೆಡೆ;
ಸಾಲೋಕ್ಯಂ ಚ ತು ಸಾಮೀಪ್ಯಂ ಸಾರೂಪ್ಯಂ ಚ ಸಾಯುಜ್ಯತಾ
ತದುಪೇಕ್ಷಕಭಕ್ತಶ್ಚ gõ್ಞರವಂ ನರಕಂ ವ್ರಜೇತ್ ಎಂದುದಾಗಿ,
ಆ ಚರಲಿಂಗದ ಪ್ರಸಾದವ ತಂದೆನ್ನ ಇಷ್ಟಲಿಂಗದ ಜೀವಕಳೆಯ ಮಾಡುವೆ
ಅದೆಂತೆಂದೆಡೆ;
ಸ್ವಯಂಪ್ರಕಾಶರೂಪಶ್ಚ ಜಂಗಮೋ ಹಿ ನಿಗದ್ಯತೇ
ಮತ್ತಂ,
ಜಂಗಮಸ್ಯ ಪದೋದಂ ಚ ಯುಕ್ತಂ ಲಿಂಗಾಭಿಷೇಚನೇ
ತತ್ಪ್ರಸಾದೋ ಮಹಾದೇವ ನೈವೇದ್ಯಂ ಮಂಗಲಂ ಪರಂ ಎಂದುದಾಗಿ,
ಆ ಲಿಂಗವೆ ಅಂಗ, ಅಂಗವೆ ಲಿಂಗ,
ಆ ಲಿಂಗವೆ ಪ್ರಾಣ, ಆ ಪ್ರಾಣ ಲಿಂಗವಾದುದು.
ಇದು ಚತುರ್ವಿಧಫಲಪದಪುರುಷಾರ್ಥವ ಮೀರಿದ ಘನವು.
ಕೂಡಲಸಂಗಮದೇವಯ್ಯಾ.
ಈ ದ್ವಯದ ಪರಿಯ ನಿಮ್ಮ ಶರಣರನೆ ಬಲ್ಲ

ಬಸವಣ್ಣ

ಶ್ರೀಗುರುಕರುಣಿಸಿ ಹಸ್ತಮಸ್ತಕಸಂಯೋಗದಿಂದ ಪ್ರಾಣಲಿಂಗವನು ಕರತಳಾಮಳಕವಾಗಿ ಕರಸ್ಥಲಕ್ಕೆ ತಂದುಕೊಟ್ಟನಾಗಿ
ಒಳಗೆನ್ನದೆ ಹೊರಗೆನ್ನದೆ, ಆ ಲಿಂಗದಲ್ಲಿ ನಚ್ಚಿ ಮಚ್ಚಿ ಹರುಷದೊಳೋಲಾಡಿದೆ
ಅದೆಂತೆಂದಡೆ,
ಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಮನಸಾ ಸಹ
ನಾದಬಿಂದುಕಲಾತೀತಂ ಗುರುಣಾ ಲಿಂಗಮುದ್ಭವಂ
ಎಂದುದಾಗಿ
ಆ ಲಿಂಗವ ಪಡೆದು ಆನಂದಿಸುವೆ, ಕೂಡಲಸಂಗಮದೇವಾ

ಬಸವಣ್ಣ

ಅಯ್ಯಾ, ಸಜ್ಜನ ಸದ್ಭಾವರ ಸಂಗದಿಂದ
ಮಹಾನುಭಾವರ ಕಾಣಬಹುದಯ್ಯಾ.
ಮಹಾನುಭಾವರ ಸಂಗದಿಂದ #ಶ್ರೀಗುರುವನರಿಯಬಹುದು, #ಲಿಂಗವನರಿಯಬಹುದು,ಜಂಗಮವನರಿಯಬಹುದು, ಪ್ರಸಾದವನರಿಯಬಹುದು, ತನ್ನ ತಾನರಿಯಬಹುದು.
ಇದು ಕಾರಣ ಸದ್ಭಕ್ತರ ಸಂಗವನೆ ಕರುಣಿಸು
ಕೂಡಲಸಂಗಮದೇವಾ, ನಿಮ್ಮ ಧರ್ಮ.

ಲಿಂಗವು ಬಸವಣ್ಣನ ಉದರದಲ್ಲಿ ಹುಟ್ಟಿತ್ತು, ಜಂಗಮ ಪ್ರಸಾದ ಎಲ್ಲದಕ್ಕೂ ಬಸವಣ್ಣನೇ ಕಾರಣ ಚೆನ್ನಬಸವಣ್ಣ ತನ್ನ ವಚನದಲ್ಲಿ ಉಲ್ಲೇಖ ಮಾಡಿದ್ದಾರೆ.

ಚನ್ನಬಸವಣ್ಣ

ಆದಿ ಬಸವಣ್ಣ, ಅನಾದಿಲಿಂಗವೆಂದೆಂಬರು,
ಹುಸಿ ಹುಸಿ ಈ ನುಡಿಯ ಕೇಳಲಾಗದು.
ಆದಿ ಲಿಂಗ, ಅನಾದಿ ಬಸವಣ್ಣನು! ಲಿಂಗವು ಬಸವಣ್ಣನ ಉದರದಲ್ಲಿ ಹುಟ್ಟಿತ್ತು, ಜಂಗಮವು ಬಸವಣ್ಣನ ಉದರದಲ್ಲಿ ಹುಟ್ಟಿತ್ತು, ಪ್ರಸಾದವು ಬಸವಣ್ಣನನುಕರಿಸಲಾಯಿತ್ತು.
ಇಂತೀ ತ್ರಿವಿಧಕ್ಕೆ ಬಸವಣ್ಣನೆ ಕಾರಣನೆಂದರಿದೆನಯ್ಯಾ
ಕೂಡಲಚೆನ್ನಸಂಗಮದೇವಾ

ರುದ್ರಮುನಿ ವಚನಗಳಲ್ಲಿ ಉಲ್ಲೇಖ, ಚೆನ್ನಬಸವಣ್ಣ ವಚನ

ಚನ್ನಬಸವಣ್ಣ

ರುದ್ರಮುನಿ ಲಿಂಗವೆ ಸದ್ಭಕ್ತರನೆ ತೋರಿಸಯ್ಯಾ ಪ್ರಭುವೆ.
ನಿಧಾನವನಗಿವೆನೆಂದು ಹೋದಡೆ,
ವಿಘ್ನ ಬಪ್ಪುದು ಮಾಬುದೆ ಅಯ್ಯಾ ?
ಸದಾಶಿವನ ಪೂಜಿಸಿಹೆನೆಂದು ಹೋದಡೆ
ತರುಬಿ ಹಿಡಿವವಯ್ಯಾ ಸಕಲ ವಿಪತ್ತುಗಳು
ಎಡೆಭಂಗವಿಲ್ಲದೆ ನಿಲಬಲ್ಲಡೆ
ಸದಮಲಸುಖವನೀವ ನಮ್ಮ ಕೂಡಲಸಂಗಮದೇವರು

ವಚನಗಳಲ್ಲಿ ರೇವಣಸಿದ್ದೇಶ್ವರ ಉಲ್ಲೇಖ, ಗುರುಸಿದ್ದದೇವರ ವಚನ.

ಗುರುಸಿದ್ಧದೇವರು

ಅಯ್ಯ, ವರಕುಮಾರದೇಶಿಕೇಂದ್ರನೆ ಕೇಳಾ,
ಚಿದ್ಘನಶರಣ ಪ್ರಸಾದಲಿಂಗವಾಗಿ ನಿಂದ ನಿಜಾಚರಣೆಯ ನಿಲುಕಡೆಯ,
ಕಲ್ಯಾಣಪಟ್ಟಣದ ಅನುಭಾವ ಮಂಟಪದ ಶೂನ್ಯಸಿಂಹಾಸನದಲ್ಲಿ,
ಬಸವ, ಚೆನ್ನಬಸವ, ಸಿದ್ಧರಾಮ, ಅಕ್ಕಮಹಾದೇವಿ, ನೀಲಲೋಚನೆ
ಮೊದಲಾದ ಸಕಲಮಹಾಪ್ರಮಥಗಣಂಗಳೆಲ್ಲ
ಮಹಾಪ್ರಭುಸ್ವಾಮಿಗಳಿಗೆ ಅಬ್ಥಿವಂದಿಸಿ ಹಸ್ತಾಂಜಲಿತರಾಗಿ
ಎಲೆ ಮಹಾಪ್ರಭುವೆ ನಿನ್ನ
ಅನಾದಿ ಷಟ್ಸ್ಥಲ ನಿರಭಾರಿವೀರಶೈವಶರಣನ ನಿಜಾಚರಣೆಯ ನಿಲುಕಡೆಯ
ದಯವಿಟ್ಟು ಕರುಣಿಸಬೇಕಯ್ಯ ಮಹಾಗುರುವೆ
ಎಂದು ಬೆಸಗೊಂಡಲ್ಲಿ ಆಗ ಮಹಾಪ್ರಭುವು
ಲಿಂಗಾಂಗಕ್ಕೆ ಬ್ಥಿನ್ನವಿಲ್ಲದೆ ಹಸ್ತಮಸ್ತಕಸಂಯೋಗವ ಮಾಡಿ,
ವೇಧಾ-ಮಂತ್ರ-ಕ್ರಿಯಾದೀಕ್ಷೆಯನಿತ್ತು.
ಇಪ್ಪತ್ತೊಂದು ತೆರದ ವಿಚಾರವನರುಪಿ,
ನೂರೊಂದುಸ್ಥಲದಾಚರಣೆಯ, ಇನ್ನೂರಹದಿನಾರು ಸ್ಥಲದ ಸಂಬಂಧವ ತೋರಿ,
ಸರ್ವಾಚಾರ ಸಂಪತ್ತಿನಾವರಣದ ಸ್ವಸ್ವರೂಪು ನಿಲುಕಡೆಯ ತೋರಿಸಿ,
ಸಾಕಾರನಿರಾಕಾರದ ನಿಜದ ನಿಲುಕಡೆಯನರುಪಿ,
ನಿಜಶಿವಯೋಗದ ನಿರ್ಣಯದ ಕರಿಣಿಸಿ,
ಸತ್ತುಚಿತ್ತಾನಂದ ನಿತ್ಯಪರಿಪೂರ್ಣ ಅವಿರಳಪರಂಜ್ಯೋತಿಸ್ವರೂಪ
ತಾವೆಂದರುಪಿದ ನೋಡ.
ಇಂತು ಚೆನ್ನಬಸವೇಶ್ವರಸ್ವಾಮಿಗಳು ಬೆಸಗೊಂಡು
ತಮ್ಮ ಚಿದಂಗಸ್ವರೂಪರಾದ ಚಿದ್ಘನರಶರಣ
ನಿರ್ಲಜ್ಜಶಾಂತಯ್ಯನೆಂಬ ಶಿವಶರಣನ ಮುಖದಲ್ಲಿ
ಮೋಳಿಗಯ್ಯ ಮೊದಲಾದ ಸಕಲಪ್ರಮಥರ್ಗೆ ಬೋದ್ಥಿಸಿದರು ನೋಡ.
ಅದೇ ಪ್ರಸಾದವನ್ನೆ ನಿರ್ಲಜ್ಜಶಾಂತಯ್ಯನೆಂಬ ದೇಶಿಕೇದ್ರನು ಚಂಗಣಗಿಲಮಂಟಪದ #ರೇವಣಸಿದ್ದೇಶ್ವರಂಗೆ ಬೋದ್ಥಿಸಿದರು ನೋಡ.
ಅದೇ ಪ್ರಸಾದವನ್ನೆ ರೇವಣಸಿದ್ದೇಶ್ವರನೆಂಬ ದೇಶಿಕೇಂದ್ರನು
ಜ್ಞಾನೋದಯರಾಗಿ ತಮ್ಮಡಿಗೆರಗಿ ಬಂದ ಶಿಷ್ಯೋತ್ತಮ ಶಿವಶರಣರ್ಗೆ
ಸ್ವಾನುಭಾವಸೂತ್ರವ ಬೋದ್ಥಿಸುತ್ತಿರ್ದರು ನೋಡ.
ಅದೇ ಮಹಾಪ್ರಸಾದವ ನಿನ್ನ ಶ್ರೋತ್ರಮುಖದಲ್ಲಿ
ಮಹಾಮಂತ್ರಮೂರ್ತಿಯಾಗಿ ನೆಲೆಗೊಂಡಿರ್ಪ
ಪ್ರಸಾದಲಿಂಗಮುಖದಲ್ಲಿ ಅರುಹಿಸಿ ಕೊಟ್ಟೇವು ಕೇಳಿ,
ಮಹಾಲಿಂಗಮುಖದಲ್ಲಿ ಸಂತೃಪ್ತನಾಗಿ,
ಪರಿಣಾಮಪ್ರಸಾದದಲ್ಲಿ ಲೋಲುಪ್ತನಾಗಿ,
ಎನ್ನ ಜ್ಞಾನಮಂಟಪದಲ್ಲಿ ಮೂರ್ತಿಗೊಂಡಿರುವ ಸಂಗನಬಸವೇಶ್ವರ

ಇಷ್ಟೆಲ್ಲಾ ಲಿಖಿತ ಪುರಾವೆಗಳು ಇದ್ದರು ಪಂಚಾಚಾರ್ಯರು ಕಟ್ಟು ಕಥೆ ಕಟ್ಟಿ ಪಂಚಾಚಾರ್ಯರು ಬಸವಣ್ಣನವರ ಗುರು ಎಂದು ಸುಳ್ಳು ಹೇಳುತ್ತಾರೆ. ಜಾತವೆದ ಮುನಿಗಳು ಲಿಂಗ ಧಿಕ್ಷೇ ಕೊಟ್ಟರಂತೆ, ಖಾವಿ ತೊಟ್ಟು ಅಡ್ಡಪಲ್ಲಕ್ಕಿ ಮೇಲೆ ಕೂತು ಸುಳ್ಳು ಹೇಳಲು ನಾಚಿಕೆ ಆಗಬೇಕು. ಜಾತವೆದ ಎನ್ನುವ ಮುನಿ ಹುಟ್ಟು ಇಲ್ಲ, ಲಿಂಗ ಧೀಕ್ಷೆ ಕೊಡುವದು ದೂರಿನ ಮಾತು. ಇಷ್ಟಲಿಂಗ ಕಂಡು ಹಿಡಿದವರು ಬಸವಣ್ಣ, ಧರ್ಮ ಪ್ರಚಾರಕ್ಕೆ ಒಂದು ಲಕ್ಷ ತೊಂಬತೈದು ಸಾವಿರ ಜಂಗಮರನ್ನು ತಯಾರು ಮಾಡಿದ್ದೆ ಬಸವಣ್ಣ, ಮುಂದೆ ಜಂಗಮ ಜಾತಿ ಆಯಿತು, ಲಿಂಗಾಯತ ಕೂಡ ಧರ್ಮ ಹೋಗಿ ಜಾತಿ ಆಯಿತು. ಸತ್ಯ ಹೇಳಬೇಕಾದರೆ ವೀರಶೈವಕ್ಕು ಜಂಗಮರಿಗೆ ಪಂಚಾಚಾರ್ಯರೀಗೆ ಸಂಬಂಧ ಇಲ್ಲ. ಅಷ್ಟಾವರಣ ಪಂಚಾಚಾರ ಶಟಸ್ಥಲ ಜಾರಿಗೆ ತಂದವರು ಬಸವಣ್ಣ. ಇದಕ್ಕೆಲ್ಲ ಪುರಾವೆಗಳು ಇವೆ.

ರಂಭಾಪುರಿ ಶ್ರೀಗಳ ಆಶ್ರಮ ಅಥವಾ ಪೀಠ ಹುಟ್ಟಿ ಹಾಕಿದ್ದು ಅಕ್ಕ ನಾಗಲಾಂಬಿಕೆ, ಅದಕ್ಕೆ ಪಟ್ಟ ಕಟ್ಟಿದ್ದು ಪೂಜ್ಯ ರಟಕಲ ರೇವಣಸಿದ್ದೇಶ್ವರ ಮಗ ಪೂಜ್ಯ ಶರಣ ರುದ್ರಮುನಿ ಅವರನ್ನು, ಇವರೇ ರಂಭಾಪುರೀ ಪೀಠದ ಪ್ರಥಮ ಗುರು.

ವೀರಶೈವ ಗುರು ಲಿಂಗೋಧ್ಭವ ಶ್ರಿ ರೇಣುಕಾಚಾರ್ಯರು ಕಾಲ್ಪನಿಕ ಗುರು ಎಂದು ಚಿದಾನಂದ ಮೂರ್ತಿ ಚಿಮು ಹೇಳಿದ್ದಾರೆ. ನಿಜ ಹೇಳಬೇಕೆಂದರೆ ರಟಕಲ ರೇವಣಸಿದ್ದೇಶ್ವರ ಅವರೇ ರೇಣುಕಾಚಾರ್ಯರು ಎಂದು ಬದಲಾಯಿಸಿ ಸೃಷ್ಟಿ ಮಾಡಿದ್ದಾರೆ. ರೇವಣಸಿದ್ದೇಶ್ವರ ಬಸವಣ್ಣನವರ ಸಮಕಾಲೀನರು, ಆದರೆ ಬಸವಣ್ಣನವರಿಗಿಂತ ಹಿರಿಯರು. ರೇವಣಸಿದ್ದರು ಬಸವಣ್ಣನವರ ಕೀರ್ತಿ ಕೇಳಿ ತನ್ನ ಮಗ ರುದ್ರಮುನಿ ಅವರನ್ನು ಬಸವಣ್ಣನವರನ್ನು ಕಾಣಲು ಕಲ್ಯಾಣಕ್ಕೆ ಕಳಿಸಿದರು. ರುದ್ರಮುನಿ ಅನುಭವ ಮಂಟಪದಲ್ಲಿ ಬಸವಾದಿ ಶರಣರ ಜೊತೆ ಚರ್ಚೆ ಮಾಡಿ ಅಕ್ಕ ನಾಗಲಾಂಬಿಕೆ ಅವರಿಂದ ಇಷ್ಟಲಿಂಗ ದೀಕ್ಷೆ ಪಡೆದರು. ರಂಭಾಪುರಿ ಪೀಠದ ಪ್ರಥಮ ಗುರು ರುದ್ರಮುನಿಗಳು, ಇದು ಪೀಠದ ಇತಿಹಾಸದಲ್ಲಿ ಕೂಡ ಉಲ್ಲೇಖ ಇದೆ, ಆದರೆ ಜಗದ್ಗುರು ಇದನ್ನು ಮರೆಮಾಚುತ್ತಾರೆ ಇತಿಹಾಸ ತಿರುಚುತ್ತಾರೆ.ಮೊದಲು ಪಂಚಾಚಾರ್ಯರರ ನಾಲ್ಕು ಪೀಠಗಳು ಇದ್ದವು, ಅವೆಲ್ಲ ಬಸವಾದಿ ಶರಣರ ಪೀಠಗಳು, ಅವೆಲ್ಲ ಮುಂದೆ ಶೈವ ಪೀಠಗಳು ಎಂದು ಹೇಳಿದರು.

ಪಂಚಾಚಾರ್ಯರು ಬಹಿರಂಗ ಚರ್ಚೆಗೆ ಬಂದರೆ ಇವೆಲ್ಲದಕ್ಕೂ ಪುರಾವೆ ಸಹಿತ ಚರ್ಚೆ ಮಾಡಲು ನಾನು ಸಿದ್ದ, ಆದರೆ ಸುಳ್ಳು ಹೇಳುವದು ಬಿಟ್ಟು ಬಿಡಿ. ಬಸವಣ್ಣನವರ ಗುರು ಜಾತವೆದ ಮುನಿ ಎಂದು ಹೇಳುವದು ವಾಪಿಸ ತಗೊಳ್ಳಬೇಕು. ನೀವು ಬಸವಣ್ಣನವರು ಗುರು ಎಂದು ಒಪ್ಪಿಕೊಂಡರೆ ನಾವು ನಿಮ್ಮನು ಅಪ್ಪುಕೊಳ್ಳುತ್ತೇವೆ, ಹುಳಿ ಹಿಂಡುವದು ಬಿಟ್ಟು ಎಲ್ಲರನ್ನೂ ಒಟ್ಟುಗೂಡಿಸುವ ಪ್ರಯತ್ನ ಮಾಡಿ. ನಿಮ್ಮನ್ನು ನಾವು ಗೌರವಿಸುತ್ತೇವೆ.

ಜಯ ಬಸವ, ಜಯ ಲಿಂಗಾಯತ, ಜಯ ಭಾರತ.

Screenshot 2023 12 27 08 56 53 56 6012fa4d4ddec268fc5c7112cbb265e7 226x300

ಶ್ರೀಕಾಂತ ಸ್ವಾಮಿ, ಕರ್ನಾಟಕ ರಾಜ್ಯ ಸಂಚಾಲಕ, ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿ.

About Mallikarjun

Check Also

screenshot 2025 11 11 19 38 54 04 e307a3f9df9f380ebaf106e1dc980bb6.jpg

ಜಿಲ್ಲೆಯ ಯಾವುದೇ ಧಾರ್ಮಿಕ ಮಂದಿರಗಳಲ್ಲಿ ಬಾಲ್ಯ ವಿವಾಹ ಜರುಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ : ಡಾ. ಸುರೇಶ ಇಟ್ನಾಳ

It is our duty to ensure that child marriage does not take place in any …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.