Breaking News

ವಚನ ಸಾಹಿತ್ಯ ಮಹಿಳೆಯರ ಶಕ್ತಿ ಹೆಚ್ಚಿಸಿದೆ

Vachana Sahitya has increased the power of women

ಜಾಹೀರಾತು
IMG 20231216 WA0293 300x169

ಕನಕಗಿರಿಯ ಶ್ರೀ ಪಂಪಣ್ಣ ಶರಣಪ್ಪ ಗುಗ್ಗಳಶೆಟ್ರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಸಾಹಿತಿ ಡಾ. ಮುಮ್ತಾಜ್ ಬೇಗ್ಂ ಅವರು ಉದ್ಘಾಟಿಸಿದರು

ಕನಕಗಿರಿ: 12ನೇ ಶತಮಾನದಲ್ಲಿ ಶೈಕ್ಷಣಿಕ, ಸಾಹಿತ್ಯ, ಸಾಮಾಜಿಕ ಕ್ಷೇತ್ರಗಳ ಕ್ರಾಂತಿಗೆ ನಾಂದಿ ಹಾಡಿದ ವಚನ ಸಾಹಿತ್ಯದ ಪ್ರಭಾವದಿಂದ ಮಹಿಳೆಯರ ಶಕ್ತಿ ವೃದ್ದಿಗೊಂಡಿದೆ ಎಂದು ಸಾಹಿತಿ ಅನಸೂಯ ಜಹಗೀರದಾರ ತಿಳಿಸಿದರು.
ಕರ್ನಾಟಕ ಲೇಖಕಿಯರ ಸಂಘ ಕೊಪ್ಪಳ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಶ್ರೀ ಪಂಪಣ್ಣ ಶರಣಪ್ಪ ಗುಗ್ಗಳಶೆಟ್ರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಯೋಗದಲ್ಲಿ ಶನಿವಾರ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಾವ್ಯ ಎಂಬುದು ಶೋಷಿತರ ಮಾಧ್ಯಮವಾಗಿದೆ, ಅದೊಂದು ಅನುಭವದ ಕಥನವು ಸಹ ಆಗಿದೆ ಎಂದು ಹೇಳಿದರು.
ಅರಸೊತ್ತಿಗೆ ಕಾಲದಲ್ಲಿ ಕಾವ್ಯವು ಸಮಾಜಮುಖಿ ಆಗಿರಲಿಲ್ಲ, ಆಗಿನ ಕಾಲದಲ್ಲಿ ರಾಜ್ಯಭಾರ ಮಾಡುತ್ತಿದ್ದ ರಾಜರನ್ನು ಹೊಗಳಲು ಸೀಮಿತವಾಗಿತ್ತು, ಮನೆಯ ಹೊಸ್ತಿಲು ದಾಟದಂತ ಸ್ಥಿತಿ ಇತ್ತು
ವಚನ ಸಾಹಿತ್ಯ ಆರಂಭದಿಂದಾಗಿ ಜನರ ನೋವು, ಸಂಕಷ್ಟಗಳಿಗೆ ಸ್ಪಂದಿಸಲು ಅನುಕೂಲವಾಯಿತು ಎಂದು ತಿಳಿಸಿದರು.
ಮಹಿಳೆಯರ ಕೃತಿಗಳು ಅಡುಗೆ ಮನೆಗೆ ಮಾತ್ರ ಸೀಮಿತ ಎಂಬ ಭಾವನೆಯನ್ನು ಕೆಲವರು ಬೆಳಸಿಕೊಂಡಿದ್ದಾರೆ, ಮಹಿಳಾ ಸಾಹಿತ್ಯವನ್ನು ವಿಶಾಲವಾದ ಭಾವನೆಯಿಂದ ವಿಮರ್ಶೆ ಮಾಡುವಂತ ಕೆಲಸ ನಡೆಯಬೇಕೆಂದು ಹೇಳಿದರು. ಸಾಹಿತ್ಯರ ಪ್ರಕಾರಗಳಲ್ಲಿ ಒಂದಾದ ಬಂಡಾಯ, ದಲಿತ ಸಾಹಿತ್ಯದ ಬೆಳವಣಿಗೆಯು ಜಾತಿ ಪದ್ದತಿ ನಿರ್ಮೂಲನೆ , ಮಹಿಳಾ ಸಮಾನತೆಗೆ ಪೂರಕವಾಯಿತು, ಮಹಿಳೆಯರ ಮೇಲೆ ನಡೆಯುತ್ತಿದ್ದ ದೌರ್ಜನ್ಯದ ವಿರುದ್ದ ಹೋರಾಟ ಮಾಡುವ ಶಕ್ತಿಯನ್ನು ಬಂಡಾಯ ಸಾಹಿತ್ಯ ನೀಡಿದೆ ಎಂದು ಪ್ರತಿಪಾದಿಸಿದರು.
ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷೆ ಹಾಗೂ ಸಾಹಿತಿ ಮುಮ್ತಾಜ್ ಬೇಗ್ಂ ಮಾತನಾಡಿ ಮಹಿಳೆ ಬರೀ ವ್ಯಕ್ತಿಯಲ್ಲ ಅವಳು ಕುಟುಂಬದ ಶಕ್ತಿಯಾಗಿದ್ದಾಳೆ ಕವಯಿತ್ರಿಯರು, ಲೇಖಕರು ಸಮಾಜಕ್ಕೆ ಉಪಯುತ್ತವಾಗುವ ಸಾಹಿತ್ಯವನ್ನು ರಚಿಸುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕಾಗಿದೆ, ಮಹಿಳೆ ಇರುವಿಕೆಯನ್ನು ಗುರುತಿಸುವ ಕೆಲಸವನ್ನು ಪ್ರತಿಯೊಬ್ಬರು ಮಾಡಬೇಕೆಂದು ಹೇಳಿದರು.
ಇಂದಿನ ಕಂಪ್ಯೂಟರ್ ಯುಗದಲ್ಲಿ ಯಜಮಾನ್ಯದ ಪರಿಕಲ್ಪನೆ ಬದಲಾಗಬೇಕಾಗಿದ್ದು ಈ ನಿಟ್ಟಿನಲ್ಲಿ ಕರ್ನಾಟಕ ಲೇಖಕಿಯರ ಸಂಘದ ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ಶಿಕ್ಷಕಿ ಮಂಜುಳಾ ಮೇಟಿ ಮಾತನಾಡಿ, ಮಹಿಳೆ ಹಾಗೂ ಪುರುಷ ಎಂಬ ತಾರತಮ್ಯ ಭಾವನೆ ಸರಿಯಲ್ಲ, ಹಲವಾರು ಸವಾಲುಗಳನ್ನು ಎದುರಿಸುವ ಮೂಲಕ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ತಿಳಿಸಿದರು. ಅಧ್ಯಯನ ಹಾಗೂ ಹೋರಾಟ ಮನೋಭಾವನೆಯಿಂದ ಮಹಿಳಾ ಅಸಮಾನತೆಯ ವಿರುದ್ದ ಧ್ವನಿ ಎತ್ತಬೇಕೆಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಮೆಹಬೂಬಹುಸೇನ ಮಾತನಾಡಿ ಶಿಕ್ಷಣದ ಪ್ರಭಾವದಿಂದಾಗಿ ಮಹಿಳೆಯರು ಬ್ಯಾಂಕಿಂಗ್, ರಾಜಕೀಯ, ಸಾಮಾಜಿಕ, ಆರ್ಥಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ, ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಮೀಸಲಾತಿ ಸೌಲಭ್ಯದಿಂದ ರಾಜಕೀಯ ಕ್ಷೇತ್ರದಲ್ಲಿ ಸ್ಥಾನಮಾನ ಪಡೆದಿದ್ದಾರೆ . ಸರ್ಕಾರದ ವಿವಿಧ ಯೋಜನೆಗಳು ಮಹಿಳಾ ಸಬಲೀಕರಣಕ್ಕೆ ಸಹಾಯಕವಾಗಿವೆ ಎಂದು ತಿಳಿಸಿದರು. ಪ್ರಭಾರ ಪ್ರಾಂಶುಪಾಲ ಬಜರಂಗ ಬಲಿ ಮಾತನಾಡಿದರು.
ಪ್ರಾಧ್ಯಾಪಕರಾದ ಡಾ. ಆಶಿಕಾ ಎಚ್.ಸಿ, ಮರ್ವಿನ್ ವಿಕ್ಟರ್ ಡಿಸೋಜಾ, ತಬಸ್ಸುಮ್ ಆರಾ, ಸಾಹಿತಿಗಳಾದ ಪಾರ್ವತಿ, ಪರ್ವಿನ್ ಬೇಗ್ಂ, ಗೀತಾ ಪಾಟೀಲ, ಕಸಾಪ ಪದಾಧಿಕಾರಿಗಳಾದ ಕನಕರೆಡ್ಡಿ ಕೆರಿ, ಪರಸಪ್ಪ ಹೊರಪೇಟೆ, ವಿರುಪಣ್ಣ ಕಲ್ಲೂರು, ತಿಪ್ಪಣ್ಣ ಮಡಿವಾಳರ, ರಮೇಶರೆಡ್ಡಿ ಓಣಿಮನಿ, ಅಮರೇಶ ಪಟ್ಟಣಶೆಟ್ಟಿ, ವಿಶ್ವನಾಥ ಅಕ್ಕನವರ್, ಶಿವಕುಮಾರ ಸಜ್ಜನ್, ರವಿ ಬಲಿಜ, ಚಾಂದಪಾಷ, ಸಿದ್ದನಗೌಡ ಪಾಟೀಲ ಇತರರು ಇದ್ದರು.

About Mallikarjun

Check Also

screenshot 2025 10 25 17 53 12 59 6012fa4d4ddec268fc5c7112cbb265e7.jpg

ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಶತೋತ್ತರ ದಶಮಾನೋತ್ಸವದ ಪೂರ್ವಭಾವಿ ಸಭೆ

Preparatory meeting for the centenary celebrations of Shivaratri Rajendra Mahaswamy. ವರದಿ: ಬಂಗಾರಪ್ಪ .ಸಿ .ಹನೂರು : …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.