Breaking News

ನರಳುವವಂಗೆ ಕಡುರೋಗ: ಸರ್ವಜ್ಞ ವಾಣಿ

A chronic disease for the afflicted: omniscient voice

ಜಾಹೀರಾತು

ನರಳುವವಂಗೆ ಕಡುರೋಗ ಮೊರೆವಂಗೆ ರಾಗವು|
ಬರೆವಂಗೆ ಓದು ಬರುವಂತೆ| ಸಾಧಿಪಗೆ
ಬರದುದು ಒಂದುಂಟೇ ಸರ್ವಜ್ಞ||

ವಿವರಣೆ:
ನರಳುವವಂಗೆ ಕಡುರೋಗ:

ಯಾರು ಯಾವಾಗಲೂ ನನಗೆ ಹುಷಾರಿಲ್ಲ, ನನ್ನ ಆರೋಗ್ಯ ಸರಿ ಇಲ್ಲ, ಮೈ ಕೈ ನೋವು, ಅಂತ ಈ ರೀತಿ ಯಾರು ನರಳುತ್ತಿರುತ್ತಾರೋ ಅವರಿಗೆ ಸದಾ ಕಾಲ ರೋಗ ಬರುತ್ತದೆ. ಅವರ ದೇಹ ಮತ್ತು ಮನಸ್ಸುಗಳೆರಡೂ ದುರ್ಬಲ(weak)ಆಗುತ್ತವೆ. ದೇಹ ಮತ್ತು ಮನಸ್ಸು ಬಹು ದೊಡ್ಡ ಸಂಪತ್ತು. ಇವೆರಡರ ಸಹಾಯದಿಂದಲೇ ನಾವು ಏನೆಲ್ಲವನ್ನು ಸಾಧಿಸಲು ಸಾಧ್ಯವಿದೆ. ಆದ್ದರಿಂದ ಯೋಗ, ಪ್ರಾಣಯಾಮ, ನಡಿಗೆ(Walking) ಮಾಡಿ ಆರೋಗ್ಯವನ್ನು ಸುಸ್ಥಿಯಲ್ಲಿ ಇಟ್ಟುಕೊಳ್ಳಬೇಕು.
Sound mind in a Sound body ಎಂದು ಸ್ವಾಮಿ ವಿವೇಕಾನಂದರೂ ಕೂಡ ಹೇಳಿದ್ದಾರೆ.
Body ಮತ್ತು Mind Sound ಇದ್ದರೆ ನಮ್ಮ ಇಡೀ ಜೀವನವೂ ಸೌಂಡ್ ಆಗಿ ಇರುತ್ತದೆ.

ಮೊರೆವಂಗೆ ರಾಗವು

ಸಂಗೀತ ಕಲೆ ಕರಗತ ಮಾಡಿಕೊಳ್ಳಲು ಬಹುದೊಡ್ಡ ಶ್ರಮ‌ಬೇಕು. ನಿರಂತರ ಕಲಿಕೆ ಮತ್ತು ಕಲಿತುದನ್ನು ಹಾಡಬೇಕು. ಕೇಳುವವರಿದ್ದರೂ ಹಾಡಬೇಕು ಇಲ್ಲದಿದ್ದರೂ ಹಾಡಬೇಕು.ನಿರಂತರ ಹಾಡನ್ನು ಮೊರೆಯತ್ತಿರಬೇಕು Practice ಮಾಡುತ್ತಿರಬೇಕು ಆಗ ಮಾತ್ರ ಸಂಗೀತ ವಿದ್ಯೆ ಕಲಿಯಲು ಸಾಧ್ಯವಿದೆ.

ಬರೆವಂಗೆ ಓದು ಬರುವಂತೆ

ವಿದ್ಯಾಭ್ಯಾಸದಲ್ಲಿ ನಾವು ಓದುವುದಕ್ಕಿಂತ ಹೆಚ್ಚಾಗಿ ಬರೆಯುವುದನ್ನು ಮಾಡಬೇಕು. ಬರೆದಿರುವುದು ಹೆಚ್ಚಿಗೆ ನೆನಪಿರುತ್ತದೆ ಯಾರು ಬರೆಯಲಾರದೇಯೇ ಬರೀ ಓದ್ತಾರಲ್ಲ ಅವರಿಗೆ ವಿದ್ಯೆ ತಲೆಗೆ ಹತ್ತೋದಿಲ್ಲ. ಯಾರು ಬರೆದು ಬರೆದು ಚೆನ್ನಾಗಿ ಬರೆದು ಓದುತ್ತಾರೋ ಅವರಿಗೆ ವಿದ್ಯೆ ತಲೆಗೆ ಹತ್ತುತ್ತದೆ.

ಅದೇ ರೀತಿ
ಸಾಧಿಪಗೆ ಬರದುದು ಒಂದುಂಟೇ ಸರ್ವಜ್ಞ
ಸಾಧನೆ ಮಾಡಬೇಕು, ಜೀವನದಲ್ಲಿ ಮುಂದೆ ಬರಬೇಕು, ಯಶಸ್ಸನ್ನು ಗಳಿಸಬೇಕು ಅಂತ ಹಂಬಲ ತುಂಬಿ ಸಾಧನೆ, ಕೆಲಸ, ಕಾಯಕ , ಶ್ರಮ ಮಾಡುವವರಿಗೆ ಈ ಜಗತ್ತಿನಲ್ಲಿ ಬರದುದು, ಸಾಧಿಸಲಿಕ್ಕೆ ಸಾಧ್ಯವಾಗದೇ ಇರುವುದು ಯಾವುದೂ ಇಲ್ಲ.

ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ ಆದರೆ ಸಾಧಿಸುವ ಛಲ ಮನಸ್ಸಿನಲ್ಲಿರಬೇಕು ಎನ್ನುವ ಮನೋಭಾವವನ್ನು ಸರ್ವಜ್ಞ ಕವಿ ಮೇಲಿನ ವಚನದಲ್ಲಿ ವ್ಯಕ್ತಪಡಿಸಿದ್ದಾರೆ

ಸಚ್ಚಿದಾನಂದ ಪ್ರಭು ಚಟ್ನಳ್ಳಿ.


About Mallikarjun

Check Also

ಕುಷ್ಟಗಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ: ನೋಂದಣಿಗೆ ಸೂಚನೆ

Kushtagi Taluk Level Dasara Games: Notice for registration ಕೊಪ್ಪಳ ಆಗಸ್ಟ್ 29 (ಕರ್ನಾಟಕ ವಾರ್ತೆ): 2025-26ನೇ ಸಾಲಿನ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.