Breaking News

ಕರವೇ ಸ್ವಾಭಿಮಾನಿ ಸೇನೆ ವತಿಯಿಂದ ಕನ್ನಡ ರಾಜ್ಯೋತ್ಸವ

Kannada Rajyotsava by Karave Swabhimani Sena

ಯಲಬುರ್ಗಾ : ತಾಲೂಕಿನ ಮಂಡಲಮರಿ ಗ್ರಾಮದ ಸಹಿಪ್ರಾ ಶಾಲೆಯಲ್ಲಿ ಕರವೇ ಸ್ವಾಭಿಮಾನಿ ಸೇನೆ ವತಿಯಿಂದ ಕನ್ನಡ ರಾಜ್ಯೋತ್ಸವ ವವು ಮಂಗಳವಾರ
ಅದ್ದೂರಿಯಾಗಿ ಆಚರಿಸಲಾಯಿತು.

ಮಂಡಲಮರಿ ಕ್ರಾಸ್ ನಿಂದ ಕನ್ನಡ ಮಾತೆ ಶ್ರೀಭುವನೇಶ್ವರಿ ದೇವಿಯ ಭಾವಚಿತ್ರದ ಮೆರವಣಿಗೆ ಅದ್ದೂರಿಯಾಗಿ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮೂಲಕ ಶಾಲೆಗೆ ಬಂದು ತಲುಪಿತು. ಮೆರವಣಿಗೆಯಲ್ಲಿ ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಯುವಕರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಶ್ರೀಧರಮುರಡಿ ಮಠದ ಬಸವಲಿಂಗ ಸ್ವಾಮಿಗಳು ಮಾತನಾಡಿ, ಯುವಕರು ದುಶ್ಚಟಗಳಿಂದ ಮುಕ್ತಿಹೊಂದಬೇಕು. ಯುವಕರು ಯಾವದೇ ಚಟಕ್ಕೆ ಬಲಿಯಾಗ ಬಾರದು, ಮದ್ಯಮುಕ್ತ ವಾಗ ಬೇಕು.
ಧಾರ್ಮಿಕ , ಕನ್ನಡ ಕಾರ್ಯ ಕ್ರಮಗಳನ್ನು ಮಾಡುವ ಮೂಲಕ ಗ್ರಾಮವನ್ನು ಸುಸಂಸ್ಕೃತ ಗ್ರಾಮವನ್ನಾಗಿ ಮಾಡವೇಕು.‌ಕನ್ನಡ ರಕ್ಷಣೆ ಮಾಡುವ ಕಾರ್ಯವನ್ನು ಕರವೇ ದವರು ಮಾಡುತ್ತಿದ್ದಾರೆ ಅವರ ಸೇವೆ ಶ್ಲಾಘನೀಯ ಎಂದರು.

ಕರವೇ ರಾಜ್ಯಾಧ್ಯಕ್ಷ ನಿಂಗರಾಜ ಗೌಡ್ರು ಮಾತನಾಡಿ,
ಕರವೇ ದವರು ಏನಾದರು ಒಳ್ಳೇಯ ಕೆಲಸ ಮಾಡುತ್ತಾರೆ ‌ಎಂದರೆ ಅವರಿಗೆ ನೀವು ಸಹಕಾರ ಮತ್ತು ಸಹಾಯ ಮಾಡಬೇಕು. ಸಂಘಟಿಕರು ರೈತ ಮತ್ತು ದಿನ ದಲಿತರ ಪರ ಕೆಲಸ ಮಾಡಬೇಕು. ಪರಭಾಷಿಕರು ಬೆಂಗಳೂರಿನಲ್ಲಿ ಸೇರಿಕೊಂಡು ಕನ್ನಡವನ್ನು ಅವನತಿಗೆ ದೂಡುತ್ತಿದ್ದಾರೆ ಇದು ಖೇದರಕರ ಸಂಗತಿ.
ಕನ್ನಡ ನಾಡು, ನುಡಿಗೆ ಶ್ರಮೀಸಲಾಗುತ್ತದೆ. ಜಾತ್ಯತೀತವಾಗಿ ನಾವು ಅನ್ಯಾಯದ ವಿರುದ್ದ ಧ್ವನಿಯಾಗಿ ಕೆಲಸ ಮಾಡಬೇಕು. ನಮ್ಮ‌ ಸಂಘಟನೆಯು ಬಡವರ ಮತ್ತು ಸಾರ್ವಜನಿಕರ ಪರ ಕೆಲಸ ಮಾಡುತ್ತಾರೆ ಎಂದರು.

ವಕೀಲ ಭರಮಗೌಡ ಪಾಟೀಲ್ , ಶ್ರೀಶಿವಾನಂದ ಸ್ವಾಮಿ ಮಕ್ಕಳ್ಳಿ ಮಾತನಾಡಿದರು.

ಶ್ರೀಧರ ಮುರಡಿ ಮಠ ಯಲಬುರ್ಗಾ, ಬಸವಲಿಂಗ ಮಹಾಸ್ವಾಮಿಗಳು ಹಾಗು ಶಿವಾನಂದ ಮಹಾಸ್ವಾಮಿಗಳು ಮಕ್ಕಳ್ಳಿ ಸಾನಿಧ್ಯ ವಹಿಸಿದರು.

ರಾಜ್ಯ ಪ್ರಧಾನ ಕಾರ್ಯ ದರ್ಶಿ ಸುರೇಶಗೌಡ, ಬೆಂಗಳೂರು ನಗರ ಯುವ ಘಟಕದ ಅಧ್ಯಕ್ಷ ಮಹೇಶಗೌಡ,ರಾಜ್ಯ ಕಾರ್ಯದರ್ಶಿ ಸುಜ್ಞಾನ ಮೂರ್ತಿ, ಖಜಾಂಚಿ ಶ್ರೀಧರ ನಾಯ್ಕ, ರಾಜ್ಯ ಸಂಘಟಿಕದ ಕಾರ್ಯದರ್ಶಿ ಶ್ರೀನಿವಾಸ,
ಜಿಲ್ಲಾ ಅಧ್ಯಕ್ಷ ಸಂತೋಷ ತೋಟದ, ವಕೀಲ ಭರಮಗೌಡ ಪಾಟೀಲ್ ನಿಂಗಲಬಂಡಿ, ಮುಖ್ಯ ಶಿಕ್ಷಕ ರಾಠೋಡ್, ಭೀಮನಗೌಡ ಪೊಲೀಸ್ ಪಾಟೀಲ್ ,
ಯಲಬುರ್ಗಾ ತಾಲೂಕಿನ ರಾಮಣ್ಣ ದಿವಾಣದ, ದ್ಯಾಮಣ್ಣ ಕಮ್ಮಾರ, ಹನಮೇಶ ಕೊಂಡಗುರಿ,
ಕನ್ನಡ ಕೋಗಿಲೆ ಅರ್ಜುನ ಇಟಗಿ, ಜ್ಯೂನಿಯರ್ ಉಪೇಂದ್ರ, ಜ್ಯೂನಿಯರ್ ವಿಷ್ಣು ವರ್ಧನ
ಕನಕಗಿರಿ, ಕುಷ್ಟಗಿ ತಾಲೂಕಾ ಅಧ್ಯಕ್ಷ
ಜಿಲ್ಲಾ ಗೌರವ ಅಧ್ಯಕ್ಷ ಮಳಿಯಪ್ಪ ಬಡಿಗೇರ, ಗ್ರಾಮ‌ಘಟಕದ ಅಧ್ಯಕ್ಷ ಪರಶುರಾಮ ಗದ್ದಿ, ಮಂಜಪ್ಪ ಹಾಸಗಲ್, ರಾಮಣ್ಣ , ಜಿಲ್ಲಾ ಮತ್ತು ತಾಲೂಕಿನ ವಿವಿಧ ಅಧಿಕಾರಿಗಳು ಭಾಗ ವಹಿಸಿದ್ದರು.
ಎಸ್ ಡಿ ಎಂ ಸಿ ಅಧ್ಯಕ್ಷರು ಸೇರಿದಂತೆ ಸದಸ್ಯರು ಹಾಗು ಗ್ರಾಪಂ‌ ಸದ್ಯರು ಸೇರಿದಂತೆ ಗ್ರಾಮದ ಗುರು, ಹಿರಿಯರು ಪಾಲ್ಗೊಂಡಿದ್ದರು.
ಬಸವರಾಜ ಮುಂಡರಗಿ ಕಾರ್ಯಕ್ರಮ ನಿರ್ವಹಿಸಿದರು.

ಅಂಗನವಾಡಿ ಮಕ್ಕಳಿಗೆ 70 ಜೊತೆ ಸಮವಸ್ತ್ರ ವಿತರಣೆ ಮಾಡಲಾಯಿತು.
ನಂತರ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಫೋಟೋ ಶೀರ್ಷಿಕೆ 28 ವಾಯ್ ಎಲ್ ಬಿ ಪಿ01
ಯಲಬುರ್ಗಾ ತಾಲೂಕಿನ ಮಂಡಲಮರಿ ಗ್ರಾಮದ ಸಹಿಪ್ರಾ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.

About Mallikarjun

Check Also

ಅಂಜಲಿ ಕೊಲೆ ಆರೋಪಿಗೆ ಕಠಿಣ ಶಿಕ್ಷೆ  ವಿಧಿಸುವಂತೆ ಗಂಗಾಮತ ಸಮಜದಿಂದ ಒತ್ತಾಯ

Gangamat Samaj insists that the accused of Anjali’s murder should be punished severely ಗಂಗಾವತಿ.ಮೇ.15: ಹುಬ್ಬಳ್ಳಿಯ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.