Cattle fodder seeds were distributed to the farmers at Hanur Animal Hospital

ವರದಿ : ಬಂಗಾರಪ್ಪ ಸಿ ಹನೂರು.
ಹನೂರು ತಾಲ್ಲೂಕಿನಾದ್ಯಂತ ಬರ ಘೋಷಣೆ ಯಾಗಿರುವುದರಿಂದ ಇಂದು ಹನೂರು ಪಟ್ಟಣದ ಸರ್ಕಾರಿ ಪಶುವೈದ್ಯ ಆಸ್ಪತ್ರೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಆಸಕ್ತ ನಮ್ಮ ರೈತರುಗಳಿಗೆ ಮೇವಿನ ಬೀಜಗಳಾದ ಹೈಬ್ರಿಡ್ ಜೊವಾರ್ .ಬಾಜ್ರ ಗಳ ತಳಿಯನ್ನು ವಿತರಿಸಲಾಯಿತು , ಈ ಬೀಜದಿಂದ ಮುಂದಿನ ದಿನಗಳಲ್ಲಿ ಮಳೆಯಾಗುವ ಸಮಯದಲ್ಲಿ ಬೀಜಗಳನ್ನು ಬಿತ್ತಿ ತಮ್ಮ ತಮ್ಮ ಜಾನುವಾರುಗಳನ್ನು ಮೇವಿನ ಕೊರತೆಯಾಗದಂತೆ ನೋಡಿಕೊಳ್ಳಬೇಕೆಂದು ಹನೂರು ತಾಲ್ಲೂಕಿನ ಪಶುವೈದ್ಯಾಧಿಕಾರಿಗಳಾದ ಸಿದ್ದರಾಜು ತಿಳಿಸಿದರು . ಇದೇ ಸಂದರ್ಭದಲ್ಲಿ ಸಿಬ್ಬಂದಿಗಳಾದ ರಾಜು .ನವೀನ್ .ಸೇರಿದಂತೆ ರೈತ ಮುಖಂಡರುಗಳು ಹಾಜರಿದ್ದರು .