Breaking News

ನಗರದ ಲಿಟಲ್ಲ್ ಹಾರ್ಟ್ ಶಾಲೆಯಲ್ಲಿ ಎರಡನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ

Second Children’s Kannada Literature Conference at Little Heart School in the city

ಜಾಹೀರಾತು

ಗಂಗಾವತಿ 20 ಭಾರತ ರತ್ನ ಸರ್ ಎಂ ವಿ ಎಜುಕೇಶನ್ ಸೊಸೈಟಿ ಲಿಟಲ್ ಹಾರ್ಟ್ ಸ್ಕೂಲ್ ನಶಾಲೆಯಲ್ಲಿ ಇದೆ ದಿನಾಂಕ 30 ರಂದು ಕರ್ನಾಟಕ ಸಂಭ್ರಮ 50ರ ಪ್ರಯುಕ್ತ ಎರಡನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಶಾಲೆಯ 20ನೆಯ ವಾರ್ಷಿಕೋತ್ಸವ ಅತ್ಯಂತ ಸಂಭ್ರಮದಿಂದ ಜರುಗಲಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಜಗನ್ನಾಥ ಆಲಂಪಲ್ಲಿ ಮುಖ್ಯೋಪಾಧ್ಯಾಯನಿ ಪ್ರಿಯ ಕುಮಾರಿ ಖಜಾಂಚಿ ಪ್ರಭಾಕರ್ ಸೇರಿದಂತೆ ಇತರರು ತಿಳಿಸಿದರು ಅವರು ಸೋಮವಾರದಂದು ಶಾಲೆಯ ಆವರಣದಲ್ಲಿಶಾಲಾ ಲಾಂಛನ ಹಾಗೂ ಅಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿಪ್ರಸ್ತುತ ಸಮಾರಂಭಕ್ಕೆ ಪಂಚೆ ಮಂಗೇಶರಾಯ್ ವೇದಿಕೆಯನ್ನು ನಿರ್ಮಿಸಲಾಗುತ್ತಿದ್ದು ಹಾಗೆ ಸಿದ್ದಯ್ಯ ಪುರಾಣಿಕ್ ಹಾಗೂ ಡಾ. ಶಿವರಾಮ ಕಾರಂತ್ ಅವರ ಮಹಾದ್ವಾರ ಗಳನ್ನುನಿರ್ಮಿಸಲಾಗುವುದು ಎರಡನೆಯ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆಯನ್ನು ಇದೇ ಶಾಲೆಯಲ್ಲಿ ವ್ಯಾಸಂಗ ಮಾಡಿದ ಕುಮಾರ್ ಅಭಿಷೇಕ್ ಸ್ವಾಮಿ ಹೇರೂರು ಎಂ ಬಿ ಬಿ ಎಸ್ ಎಂ ಡಿ ಸಮ್ಮೇಳನ ಅಧ್ಯಕ್ಷತೆಯನ್ನು ವಹಿಸಲಿದ್ದು ಅಧ್ಯಕ್ಷರ ಮೆರವಣಿಯನ್ನು ಎಪಿಎಂಸಿ ಚನ್ನಬಸವ ಸ್ವಾಮಿ ದೇವಸ್ಥಾನದಿಂದ ವಿವಿಧ ಜನಪದ ಕಲಾವಿದರವೇಷಭೂಷಣಗಳಲ್ಲಿ ಮಕ್ಕಳು ಸಮ್ಮೇಳನ ಅಧ್ಯಕ್ಷರ ಮೆರವಣಿಯನ್ನು ನಡೆಸುವುದರ ಮೂಲಕ ವೇದಿಕೆಗೆ ಅದ್ದೂರಿಯಾಗಿ ಬರಮಾಡಿಕೊಳ್ಳಲಾಗುವುದು ಎಂದು ತಿಳಿಸಿದರುಎರಡನೆಯ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಎಲ್ಲಾ ಆಗುಹೋಗುಗಳನ್ನು ಶಾಲಾ ವಿದ್ಯಾರ್ಥಿಗಳೇ ನಡೆಸಿಕೊಡಲಿದ್ದು ಪ್ರಮುಖವಾಗಿ ಗೋಷ್ಠಿ ಒಂದರಲ್ಲಿ ಉಪನ್ಯಾಸ ವರ್ತಮಾನದಲ್ಲಿ ಮಕ್ಕಳ ತ ತಳ್ಳನ ಗಳು ಕುರಿತು ಎರಡನೇದಾಗಿ ಮಕ್ಕಳ ಸಾಹಿತ್ಯ ಅವಲೋಕದ ಮೂರನೇದಾಗಿ ಕವಿಗೋಷ್ಠಿ ಸೇರಿದಂತೆ ನಾಲ್ಕನೆಯ ಘೋಷ್ಠಿಯಲ್ಲಿ ಬಲ್ಲವರೊಡನೆ ಸಂವಾದ ಕಾರ್ಯಕ್ರಮ ನಡೆಸಲಾಗುವುದು ಇದೊಂದು ವೈಶಿಷ್ಟವಾದ ಕಾರ್ಯಕ್ರಮವಾಗಿದೆ ಎಂದು ತಿಳಿಸಿದರು ಹಾಗೆಮುಖ್ಯೋಪಾಧ್ಯಾಯಪ್ರಿಯ ಕುಮಾರಿ ಮಾತನಾಡಿ ವಿದ್ಯಾರ್ಥಿ ದೆಸೆಯಲ್ಲಿ ಮಕ್ಕಳಿಗೆ ಕನ್ನಡ ನಾಡು ನುಡಿ ಸಂಸ್ಕೃತಿ ಇವುಗಳನ್ನು ಬೆಳೆಸುವಲ್ಲಿ ಎರಡನೇ ಸಾಹಿತ್ಯ ಸಮ್ಮೇಳನ ಇತಿಹಾಸ ಪುಟವನ್ನು ಸೇರಲಿದೆ ಎಂದು ತಿಳಿಸಿದರು ಈ ಸಂದರ್ಭದಲ್ಲಿ ಪವನ್ ಕುಮಾರ್ಶಾಲೆಯ ಕನ್ನ|ಡ ವಿಭಾಗದ ಮುಖ್ಯಸ್ಥ ನೀಲಕಂಠ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ರಾಮರಾವ್ ಆಲಂಪಲ್ಲಿಇಬ್ರಾಹಿಂ ಸಾಬ್ ಇತರರು ಉಪಸ್ಥಿತರಿದ್ದರು

About Mallikarjun

Check Also

ಕುಷ್ಟಗಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ: ನೋಂದಣಿಗೆ ಸೂಚನೆ

Kushtagi Taluk Level Dasara Games: Notice for registration ಕೊಪ್ಪಳ ಆಗಸ್ಟ್ 29 (ಕರ್ನಾಟಕ ವಾರ್ತೆ): 2025-26ನೇ ಸಾಲಿನ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.