Breaking News

ಮಲೆ ಮಹದೇಶ್ವರ ಸ್ವಾಮಿದೇಗುಲಹುಂಡಿಯಲ್ಲಿ 28 ದಿನದಲ್ಲಿ ಎರಡು ಕೋಟಿಗೂ ಹೆಚ್ಚಿನ ಹಣ ಸಂಗ್ರಹ

More than two crore money collected in 28 days in Male Mahadeshwar Swamy Temple Hundi

ಜಾಹೀರಾತು
IMG 20231108 WA0275 300x169


ವರದಿ :ಬಂಗಾರಪ್ಪ ಸಿ.
ಹನೂರು :ನಂಬಿದವರನ್ನು ಮಾದಪ್ಪ ಎಂದಿಗೂ ಕೈಬಿಡುವುದಿಲ್ಲ ಎಂಬ ನಂಬಿಕೆಯಿಂದ ಭಕ್ತರು ಸಲ್ಲಿಸುವ ಕಾಣಿಕೆ ಹಣವನ್ನು ಇಂದು ಎಣಿಕೆ ಮಾಡಲಾಯಿತು.

ಕರ್ನಾಟಕದ ನೆಲದಲ್ಲಿ ಐತಿಹಾಸಿಕ ಹಿನ್ನೆಲೆ ಇರುವ ದೇಗುಲಗಳ ಪೈಕಿ ಮಹದೇಶ್ವರ ಬೆಟ್ಟ ಮೊದಲ ಸ್ಥಾನ ಪಡೆಯುತ್ತದೆ ಎಂಬ ಪ್ರತೀತಿ ಇದೆ. ಕರ್ನಾಟಕ ಮಾತ್ರವಲ್ಲ, ನೆರೆ ರಾಜ್ಯ ಹಾಗೂ ದೂರದ ಊರುಗಳಿಂದಲೂ ಜನ ಮಹದೇಶ್ವರ ಬೆಟ್ಟಕ್ಕೆ ಬಂದು ಸ್ವಾಮಿ ದರ್ಶನ ಪಡೆದು ನಮಿಸುತ್ತಾರೆ. ಹಾಗೇ ಕಾಣಿಕೆ ಸಂಗ್ರಹ ವಿಚಾರದಲ್ಲಿ ಕೂಡ ಈ ದೇಗುಲ ಮುಂದೆ ಇದ್ದು, ಈಗ ಸಿಸಿ ಕ್ಯಾಮೆರಾ ಕಣ್ಣಾವಲಿನಲ್ಲಿ ಹುಂಡಿ ಹಣದ ಎಣಿಕೆ ಕಾರ್ಯ ನಡೆದಿದೆ. ಚಾಮರಾಜನಗರದ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ಮಾದಪ್ಪನ ಹುಂಡಿಯಲ್ಲಿ ಕಳೆದ 28 ದಿನಗಳಲ್ಲಿ 2.10 ಕೋಟಿ ರೂಪಾಯಿ ನಗದು ಸಂಗ್ರಹ ಆಗಿದೆ. ಮಲೆ ಮಹದೇಶ್ವರ ಬೆಟ್ಟದ ಖಾಸಗಿ ಬಸ್ ನಿಲ್ದಾಣ ಸಮೀಪದ, ವಾಣಿಜ್ಯ ಸಂಕೀರ್ಣದಲ್ಲಿ ಇಂದು ಹುಂಡಿ ಹಣದ ಎಣಿಕೆ ಕಾರ್ಯ ನಡೆಯಿತು. ಸಾಲೂರು ಪೀಠಾಧಿಪತಿಗಳಾದ ಶಾಂತಮಲ್ಲಿಕಾರ್ಜುನ ಶ್ರೀಗಳು ಈ ವೇಳೆ ಸಾನಿಧ್ಯ ವಹಿಸಿದ್ರು. ಹಾಗೆ ಇಂದು ಬೆಳಗ್ಗೆ 8 ಗಂಟೆ ಸಮಯಕ್ಕೆ ಸಿಸಿ ಕ್ಯಾಮೆರಾ ಕಣ್ಣಾವಲಿನಲ್ಲಿ ಶುರು ಆಗಿದ್ದ ಹುಂಡಿ ಎಣಿಕೆ ಕಾರ್ಯ ಇಂದು ಸಂಜೆ 7 ಗಂಟೆ ವೇಳೆಗೆಲ್ಲಾ ಮುಕ್ತಾಯವಾಗಿದೆ.ಎಣಿಕೆ ವೇಳೆ ಯಾರೆಲ್ಲಾ ಹಾಜರಿದ್ದರು?
ಅಷ್ಟಕ್ಕೂ ಈ ಬಾರಿ ಮಹದೇಶ್ವರ ಸ್ವಾಮಿ ಹುಂಡಿಯಲ್ಲಿ ಕಳೆದ 28 ದಿನದಲ್ಲಿ 2,10,78,014 ಅಂದರೆ 2 ಕೋಟಿ 10 ಲಕ್ಷದ 78 ಸಾವಿರದ 14 ರೂಪಾಯಿ ಸಂಗ್ರಹವಾಗಿದೆ. ಮತ್ತೊಂದು ಕಡೆ ಹುಂಡಿ ಎಣಿಕೆ ಪ್ರಕ್ರಿಯೆ ವೇಳೆ ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ, ಉಪಕಾರ್ಯದರ್ಶಿ ಚಂದ್ರಶೇಖರ್ ಜಿ.ಎಲ್., ಪ್ರಾಧಿಕಾರದ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿವರ್ಗ, ಬ್ಯಾಂಕಿನ ಅಧಿಕಾರಿಗಳು ಹಾಜರಿದ್ದರು. ಮಲೆ ಮಹದೇಶ್ವರಬೆಟ್ಟ ಠಾಣೆಯ ಪೊಲೀಸರು ಈ ವೇಳೆ ಬಿಗಿ ಭದ್ರತೆ ಏರ್ಪಡಿಸಿದ್ದರು.

ಈ ನಡುವೆ ಹುಂಡಿಯಲ್ಲಿ ಸಂಗ್ರಹವಾಗಿರುವ, ಚಿನ್ನ ಮತ್ತು ಬೆಳ್ಳಿ ಮೌಲ್ಯಮಾಪನ ಕಾರ್ಯ ಇನ್ನೂ ನಡೆದಿಲ್ಲ. ಈ ಹಿಂದೆ ಪ್ರತಿ ಬಾರಿ, ಹುಂಡಿ ಎಣಿಕೆ ಕಾರ್ಯದ ವೇಳೆ ಚಿನ್ನ & ಬೆಳ್ಳಿ ಮೌಲ್ಯಮಾಪನ ನಡೆಯುತ್ತಿತ್ತು. ಆದ್ರೆ ಈ ಬಾರಿ ಮೌಲ್ಯಮಾಪಕರು ಗೈರಾದ ಹಿನ್ನೆಲೆಯಲ್ಲಿ ಮೌಲ್ಯಮಾಪನ ಸಾಧ್ಯವಾಗಿಲ್ಲ ಎನ್ನಲಾಗಿದೆ. ಹೀಗಾಗಿ ಹುಂಡಿಯಲ್ಲಿ ಸಂಗ್ರವಾಗಿದ್ದ ಚಿನ್ನ & ಬೆಳ್ಳಿಯನ್ನ ಚೀಲದಲ್ಲಿ ಹಾಕಿ ಸೀಲ್ಮಾಡಲಾಗಿದೆ.
ಹರಿದು ಬಂದಿತ್ತು ಭಕ್ತ ಸಾಗರ
ಮತ್ತೊಂದು ಕಡೆ ಇದು ಹಬ್ಬಗಳ ಸಮಯವಾದ ಕಾರಣ, ಕಳೆದ 28 ದಿನಗಳ ಅವಧಿಯಲ್ಲಿ ಶ್ರೀ ಕ್ಷೇತ್ರಕ್ಕೆ ಹೆಚ್ಚಿನ ಭಕ್ತರು ಬಂದು ಸ್ವಾಮಿಯ ದರ್ಶನ ಪಡೆದಿದ್ದರು. ಇದೇ ಅವಧಿಯಲ್ಲಿ ಮಹಾಲಯ ಅಮಾವಾಸ್ಯೆ, ನವರಾತ್ರಿ ಮಹೋತ್ಸವ, ಆಯುಧ ಪೂಜೆ, ವಿಜಯದಶಮಿಯ ಸಂಭ್ರಮ ಮೇಳೆಸಿತ್ತು. ಈ ಹಿನ್ನೆಲೆ ಕರ್ನಾಟಕದ ಮೂಲೆ ಮೂಲೆಯಿಂದ ಮತ್ತು ದೇಶದ ಹಲವು ರಾಜ್ಯಗಳಿಂದ ಬಂದಿದ್ದ ಭಕ್ತರು ಮಹದೇಶ್ವರ ಸ್ವಾಮಿಯ ದರ್ಶನ ಪಡೆದಿದ್ದರು.

About Mallikarjun

Check Also

screenshot 2025 10 16 17 56 26 72 6012fa4d4ddec268fc5c7112cbb265e7.jpg

ತಿರುಪತಿ ಬೌದ್ಧರ ಕ್ಷೇತ್ರ ವಾಗಿತ್ತು ಎನ್ನುವುದು ಹಾಸ್ಯಾಸ್ಪದ:ಟಿಟಿಡಿ ಸದಸ್ಯ ಎಸ್ ನರೇಶ್  ಕುಮಾರ್

It is ridiculous to say that Tirupati was a Buddhist place: TTD member S Naresh …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.