
ವರದಿ:ಬಂಗಾರಪ್ಪ ಸಿ ಹನೂರು .
ಹನೂರು : ಶ್ರೀ ರಾಮಕೃಷ್ಣ ವಿಧ್ಯಾ ಶಾಲಾ, ಮೈಸೂರು, ಇಲ್ಲಿನ ಹಳೆಯ ವಿರ್ದ್ಯಾಥಿಗಳ ಬಳಗವಾದ ವಿವೇಕಾನಂದ ಸೇವಾ ಸಂಸ್ಥೆಯು ಶ್ರೀ ರಾಮಕೃಷ್ಣ ವಿಧ್ಯಾ ಶಾಲೆಯ 50ನೇ ಸುವರ್ಣ ಮಹೋತ್ಸವದ ಪ್ರಯುಕ್ತ ಶ್ರೀಮತ್ ಶಾಂಭವಾನಂದಜಿ ಸ್ಮರಣಾರ್ಥವಾಗಿ ಅಂತರ್ ಪ್ರೌಢ ಶಾಲಾ ಸಾಮಾನ್ಯ ಜ್ಞಾನ ಪರೀಕ್ಷೆಯು ಕರ್ನಾಟಕದಾದ್ಯಂತ ನಡೆಸಲಾಗಿದ್ದು.ಹನೂರು ತಾಲೂಕಿನ ರಾಮಾಪುರ ಪರೀಕ್ಷಾ ಕೆಂದ್ರದಲ್ಲಿ ಬರೆಯಲಾದ 344 ವಿದ್ಯಾರ್ಥಿಗಳಲ್ಲಿ ಆಯ್ಕೆ ಮಾಡಲಾದ 9ನೇ ತರಗತಿಯಲ್ಲಿ ನಾಲ್ಕು ವಿದ್ಯಾರ್ಥಿಗಳ ಪೈಕಿ ಮಾರ್ಟಳ್ಳಿಯ ಸೆಂಟ್ ಮೇರಿಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಸುಜನ್ ಗೌತಮ್ 3ನೇ ಸ್ಥಾನ, ದೀಪಕ್ ತಮಯನ್ 1ನೇ ಸ್ಥಾನ ಹಾಗೂ 10ನೇ ತರಗತಿಯಲ್ಲಿ ನಾಲ್ಕು ವಿದ್ಯಾರ್ಥಿಗಳ ಪೈಕಿ ಅಲ್ಬೀನ ಮರಿಯಾ 1ನೇ ಸ್ಥಾನ ಗಳಿಸುವುದರ ಜೊತೆಗೆ ಒಟ್ಟಾರೆ ಸಮಗ್ರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡ ಸೆಂಟ್ ಮೇರಿಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯನ್ನು ವಿ ಎಸ್ ಎಸ್ ಬಳಗವು ಶ್ಲಾಘಿಸಿರುತ್ತಾರೆ. ಇದನ್ನು ಕಣ್ಣುಂಬಿಕೊಂಡ ಶಾಲೆಯ ವ್ಯವಸ್ತಾಪಕರಾದ ವಂಧನೀಯ ಗುರುಗಳಾದ ಟೆನ್ನಿ ಕುರಿಯನ್‌ರವರು, ಮುಖ್ಯಶಿಕ್ಷಕರಾದ ಅನ್ನೈನಾದನ್ ಸೇರಿದಂತೆ ಇನ್ನಿತರರು ಅಭಿನಂದಿಸಿದರು.