Breaking News

ಮಾನವ ಸಂಪನ್ಮೂಲ ಪೂರೈಕೆದಾರರಿಂದ ಟೆಂಡರ್/ಕೊಟೇಶನ್ ಆಹ್ವಾನ

Invitation of Tender/Quotation from HR Provider

ಜಾಹೀರಾತು

ಕೊಪ್ಪಳ ಕೌಟುಂಬಿಕ ನ್ಯಾಯಾಲಯದಲ್ಲಿ ವಿವಿಧ ಹುದ್ದೆಗಳು:

ಕೊಪ್ಪಳ ನವೆಂಬರ್ 03 (ಕರ್ನಾಟಕ ವಾರ್ತೆ): ಪ್ರಧಾನ ನ್ಯಾಯಾಧೀಶರು, ಕೌಟುಂಬಿಕ ನ್ಯಾಯಾಲಯ, ಕೊಪ್ಪಳ ಕಾರ್ಯಾಲಯದಲ್ಲಿ ಐದು ಕೇಡರ್‌ಗಳ ಹುದ್ದೆಗಳನ್ನು ಮಾನವ ಸಂಪನ್ಮೂಲ ಸಂಸ್ಥೆಗಳಿAದ ನಿರ್ವಹಿಸಲು ಅಧಿಕೃತ ಸೇವಾ ಪೂರೈಕೆದಾರರು/ಮಾನವ ಸಂಪನ್ಮೂಲ ಪೂರೈಕೆ ಏಜೆನ್ಸಿದಾರರಿಂದ ಮುಚ್ಚಿದ ಲಕೋಟೆಯಲ್ಲಿ ಟೆಂಡರ್ ಕೊಟೇಶನ್‌ಗಳನ್ನು ಆಹ್ವಾನಿಸಲಾಗಿದೆ.
ಒಂದು ಟೈಪಿಸ್ಟ್ ಹುದ್ದೆಗೆ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆಯೊಂದಿಗೆ ಕನ್ನಡ ಮತ್ತು ಇಂಗ್ಲೀಷ್‌ನಲ್ಲಿ ಸೀನಿಯರ್ ಟೈಪಿಂಗ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಶೈಕ್ಷಣಿಕ ಅರ್ಹತೆಯನ್ನು ನಿಗದಿಪಡಿಸಲಾಗಿದೆ. ಅದೇ ರೀತಿ 4 ಜವಾನ ಹುದ್ದೆಗಳಿಗೆ ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾಗಿರಬೇಕು ಎನ್ನುವ ಶೈಕ್ಷಣಿಕ ಅರ್ಹತೆಯನ್ನು ನಿಗದಿಪಡಿಸಲಾಗಿದೆ.
ಈಗಾಗಲೇ ಈ ರೀತಿಯ ವಿವಿಧ ಸೇವೆಗಳನ್ನು/ಮಾನವ ಸಂಪನ್ಮೂಲವನ್ನು ಒದಗಿಸಿದ ಅನುಭವ ಹೊಂದಿರುವ ಸೇವಾ ಪೂರೈಕೆದಾರರು ಮಾತ್ರ ಟೆಂಡರ್ ಮತ್ತು ಕೊಟೇಶನ್ ಸಲ್ಲಿಸಬೇಕು. ಇದಕ್ಕೆ ಸಂಬAಧಿಸಿದAತೆ ಹೊರಡಿಸಿದ ಅಧಿಸೂಚನೆಯೊಂದಿಗೆ ಅಳವಡಿಸಿದ, ನಿಗದಿತ ನಮೂನೆ ಅನುಬಂಧ-1 ಟೆಂಡರ್ ಫಾರಂ ಭಾಗ-ಎ (ತಾಂತ್ರಿಕ ಬಿಡ್ ಚೆಕ್ ಲಿಸ್ಟ್) ಮೂಲಕ ಕೊಟೇಶನ್ ಸಲ್ಲಿಸಬೇಕು. ಸೇವಾ ಪೂರೈಕೆದಾರರು ಕೊಟೇಶನ್‌ನಲ್ಲಿ ಇ.ಎಂ.ಡಿ ಯನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಕೊಪ್ಪಳ ಇವರ ಹೆಸರಿನಲ್ಲಿ ಡಿಡಿ ರೂಪದಲ್ಲಿ ಸಲ್ಲಿಸಬೇಕು. ಕಚೇರಿ ಅವಧಿಯು ಬೆಳಿಗ್ಗೆ 10 ಗಂಟೆಯಿAದ ಸಂಜೆ 06 ಗಂಟೆಯವರೆಗೂ ಇದ್ದು, ಅಗತ್ಯ ಸಂದರ್ಭಗಳಲ್ಲಿ ನೌಕರರು ಹೆಚ್ಚುವರಿ ಸಮಯ ಹಾಗೂ ರಜಾ ದಿನಗಳಲ್ಲಿ ಕರ್ತವ್ಯ ನಿರ್ವಹಿಸಲು ಸಿದ್ದರಿರಬೇಕು. ಸೇವಾ ಪೂರೈಕೆದಾರರು ಹುದ್ದೆಗೆ ನಿಗದಿ ಪಡಿಸಿದ ಸಮವಸ್ತç ಹಾಗೂ ಗುರುತಿನ ಚೀಟಿ ಸಹಿತ ಮಾನವ ಸಂಪನ್ಮೂಲವನ್ನು ಒದಗಿಸಬೇಕು.
ಕೊಟೇಶನ್‌ಗಳನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಬೇಕು. ಲಕೋಟೆಯ ಮೇಲೆ ಸ್ಪಷ್ಟವಾಗಿ ಮಾನವ ಸಂಪನ್ಮೂಲ ಸೇವೆ ಪೂರೈಕೆಗಾಗಿ ಟೆಂಡರ್/ಕೊಟೇಶನ್ ಪ್ರಧಾನ ನ್ಯಾಯಾಧೀಶರು, ಕೌಟುಂಬಿಕ ನ್ಯಾಯಾಲಯ, ಕೊಪ್ಪಳ ಎಂದು ನಮೂದಿಸಬೇಕು.
ಕೊಟೇಶನ್‌ಗಳನ್ನು ಸಲ್ಲಿಸಲು ನವೆಂಬರ್ 09 ಕೊನೆಯ ದಿನವಾಗಿದ್ದು, ಅಂದು ಸಂಜೆ 05 ಗಂಟೆಯೊಳಗಾಗಿ ಟೆಂಡರ್‌ಗಳನ್ನು ಸಲ್ಲಿಸಬೇಕು. ಸಂಜೆ 05.30 ಗಂಟೆಗೆ ಟೆಂಡರ್‌ಗಳನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಕಾರ್ಯಾಲಯದಲ್ಲಿ ಟೆಂಡರ್ ಪೂರೈಕೆದಾರರು ಅಥವಾ ಅವರನ್ನು ಪ್ರತಿನಿಧಿಸುವರ ಸಮ್ಮುಖದಲ್ಲಿ ತೆರೆಯಲಾಗುವುದು.
ಸದರಿ ವಿವಿಧ ಹುದ್ದೆಗಳಿಗೆ ಸಂಬAಧಿಸಿದ ವಿದ್ಯಾರ್ಹತೆ ಮತ್ತು ಇನ್ನೀತರ ಮಾಹಿತಿಯನ್ನು ಮತ್ತು ಪೂರ್ಣ ಪ್ರಮಾಣದ ಷರತ್ತುಗಳು ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಕೊಪ್ಪಳ ಇಲ್ಲಿಗೆ ಸಂಪರ್ಕಿಸಬಹುದು ಎಂದು ನ್ಯಾಯಾಲಯದ ಪ್ರಕಟಣೆ ತಿಳಿಸಿದೆ.

About Mallikarjun

Check Also

ಎಸ್ಸಿ ಎಸ್ಟಿ ಮೀನುಗಾರರಿಗೆ ವಾಹನ ಖರೀದಿಸಲು ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

Applications invited for subsidy for SC/ST fishermen to purchase vehicles ಕೊಪ್ಪಳ ಆಗಸ್ಟ್ 30 (ಕರ್ನಾಟಕ ವಾರ್ತೆ): …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.