The action of the tehsildar who ignored the literature is condemnable.
ಚಿಟಗುಪ್ಪ: ಕನ್ನಡ ನಾಡು ನುಡಿ ಭಾಷೆ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹಗಲಿರುಳು ದುಡಿಯುತ್ತಿರುವ ಸಾಹಿತಿಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ ಚಿಟಗುಪ್ಪ ತಾಲೂಕಿನ ತಹಶೀಲ್ದಾರರ ನಡೆ ಖಂಡನೀಯ ಎಂದು ಸಾಹಿತಿ ಸಂಗಮೇಶ ಎನ್ ಜವಾದಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕನ್ನಡ ನಾಡು
ಶ್ರೀಗಂಧದ ಬೀಡು, ಶಿಲ್ಪಕಲೆಯ ತವರೂರು, ಸಂಸ್ಕ್ರತಿಯ ನೆಲೆವೀಡು, ಹಚ್ಚ ಹಸುರಿನ ಸುಂದರ ಬೆಟ್ಟಗಳ, ಪವಿತ್ರ ನದಿಗಳ ನಾಡು, ಕರುನಾಡು ಎಂದು ಕರೆಯಲ್ಪಡುವ ಕರ್ನಾಟಕದ ಕನ್ನಡ ರಾಜ್ಯೋತ್ಸವವನ್ನು ಬಹಳ ಸಡಗರ – ಸಂಭ್ರಮ ಹಾಗೂ ಅಷ್ಟೇ ಹೆಮ್ಮೆಯಿಂದ ರಾಜ್ಯಾದ್ಯಂತ ಆಚರಿಸಲಾಗುತ್ತದೆ. ಆದರೆ ಚಿಟಗುಪ್ಪ ತಾಲೂಕಿನಲ್ಲಿ ಇದಕ್ಕೆ ವ್ಯತಿರಿಕ್ತವಾದ ಭಯನವಾಕವಾದ ವಾತಾವರಣ ಇದೆ. ಇಲ್ಲಿ ಸತ್ಯ ಹೇಳಲು ಸಾಧ್ಯವಿಲ್ಲ. ವಿಶೇಷವಾಗಿ ಕನ್ನಡ ರಾಜ್ಯೋತ್ಸವ ಆಚರಣೆಯ ಕುರಿತು ಪೂರ್ವಭಾವಿ ಸಭೆಗೆ ಸಾಹಿತಿಗಳನ್ನು ಆಹ್ವಾನ ಮಾಡದೇ ಉಡಾಫೆ ಮಾಡಿರುತ್ತಾರೆ. ಚಿಟಗುಪ್ಪ ತಾಲೂಕು ಶರಣ ಸಾಹಿತ್ಯ ಪರಿಷತ್ತು, ಜಾನಪದ ಪರಿಷತ್ತು ಅಧ್ಯಕ್ಷರನ್ನು ಸಭೆಗೆ ಆಹ್ವಾನ ನೀಡದಿರುವುದು ಸಹ ಕುತಂತ್ರದ ಒಂದು ಭಾಗ. ಇಲ್ಲಿ ಪ್ರತಿಬಾರಿಯೂ ಪಕ್ಕಾ ರಾಜಕೀಯ ಷಡ್ಯಂತ್ರ ನಡೆಯುತ್ತದೆ.
ಹತ್ತಾರು ಬಾರಿ ಈ ವಿಷಯದ ಕುರಿತು ಮನವಿ ಪತ್ರ ಕೊಟ್ಟರು ಯಾವುದೇ ಪ್ರಯೋಜನವಾಗಿಲ್ಲ. ರಾಜ್ಯದಲ್ಲಿ,ಜಿಲ್ಲಾದಲ್ಲಿ ಒಂದು ಕಾನೂನು ಇದ್ದರೆ, ಚಿಟಗುಪ್ಪ ತಾಲೂಕಿನಲ್ಲಿ ಒಂದು ಕಾನೂನು ಇದೆ. ಇಲ್ಲಿ ಸಂವಿಧಾನದ ವಿರುದ್ಧವಾಗಿ ನಡೆದುಕೊಳ್ಳುತ್ತಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡುತ್ತಿದ್ದಾರೆ. ಸಾಂಸ್ಕೃತಿಕ ಸಂಘಟಕರು, ಪರಿಸರ ಸಂರಕ್ಷಕರು, ಸಾಹಿತಿಗಳನ್ನು ತುಳಿಯುವ ಕೆಲಸ ವ್ಯವಸ್ಥಿತವಾಗಿ
ಮಾಡುತ್ತಿದ್ದಾರೆ.
ಅಷ್ಟೇ ಅಲ್ಲ ಅಗೌರವದಿಂದ ವರ್ತಿಸುತ್ತಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ ಚಿಟಗುಪ್ಪಾ ತಾಲೂಕಿನ ಈಗಿನ ತಹಶೀಲ್ದಾರರ ಅವರಿಂದ ನಾಡು ನುಡಿ ಸೇವಕರಿಗೆ, ಸಾಹಿತಿಗಳಿಗೆ ಕಿಂಚಿತ್ತು ಗೌರವ ನೀಡದೆ ಅಪಮಾನ ಮಾಡುತ್ತಿರುವ ಪ್ರಸಂಗಗಳು ದಿನ ನಿತ್ಯ ಮಾಡುತ್ತಿದ್ದಾರೆ. ಇದು ಇಂದಿನ ನಾಗರಿಕ ಸಮಾಜ ಉಗ್ರವಾಗಿ ಖಂಡಿಸಬೇಕು ಎಂದು ಜವಾದಿ ಯವರು ತಿಳಿಸಿದ್ದಾರೆ.
ಈ ಕೂಡಲೇ ಸಂವಿಧಾನ ಬಾಹಿರವಾಗಿ ನಡೆದುಕೊಳ್ಳುತ್ತಿರುವ ಚಿಟಗುಪ್ಪ ತಹಶೀಲ್ದಾರ ರವರನ್ನು ಅಮಾನತ್ತು ಮಾಡಬೇಕು ಇಲ್ಲವೇ ವರ್ಗಾವಣೆ ಮಾಡಬೇಕೆಂದು ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಹಾಗೂ ಪ್ರಾದೇಶಿಕ ಆಯುಕ್ತರಿಗೆ ಸಂಗಮೇಶ್ ಜವಾದಿಯವರು ಆಗ್ರಹಿಸಿದ್ದಾರೆ.