ಕೊಪ್ಪಳದಲ್ಲಿ ಲೋಕಕಲ್ಯಾಣಾರ್ಥ ಗಾಯತ್ರಿ ಹೋಮ, ಲಲಿತಾ ಸಹಸ್ರನಾಮ

H.Mallikarjun
H.Mallikarjun - Kalyanasiri
2 Min Read
ಜಾಹೀರಾತು
Gayatri Homa and Lalita Sahasranama in Koppal for the welfare of the world

ಕೊಪ್ಪಳದಲ್ಲಿ ಲೋಕಕಲ್ಯಾಣಾರ್ಥ ಗಾಯತ್ರಿ ಹೋಮ, ಲಲಿತಾ ಸಹಸ್ರನಾಮ

ಜಾಹೀರಾತು
ಜಾಹೀರಾತು


ನಿರ್ಮಲ ಮನಸ್ಸಿನಿಂದ ಮಾತ್ರ ಹೋಮ ಸಾಧ್ಯ: ಶಿವಪ್ರಕಾಶನಾಂದ ಸ್ವಾಮೀಜಿ

ಕೊಪ್ಪಳ: ಲೋಕ ಕಲ್ಯಾಣಕ್ಕಾಗಿ ಇಲ್ಲಿನ ವೇದಮಾತಾ ಗಾಯತ್ರಿ ಸೇವಾಸಮಿತಿಯು ವಿವಿಧ ಹೋಮಗಳು ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಇಲ್ಲಿನ ಪಾನಘಂಟಿ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆಸಿತು.
ಆರನೇ ವರ್ಷದ ಕಾರ್ಯಕ್ರಮ ಇದಾಗಿದ್ದು ಶುಕ್ರವಾರ ರಾತ್ರಿ ಗೋ ಪೂಜೆಯ ಮೂಲಕ ಉದ್ಘಾಟನೆ ನೆರವೇರಿತು. ಶನಿವಾರ ಹಲವು ಜನರಿಂದ ಗಾಯತ್ರಿ ಹೋಮ, ಲಲಿತಾ ಸಹಸ್ರನಾಮ ಹೋಮ ಹಾಗೂ ದತ್ತಾತ್ರೇಯ ಹೋಮ ಜರುಗಿದವು. ಪುಣ್ಯಾಹವಾಚನ, ದೇವತಾ ಸ್ಥಾಪನೆ, ಹೋಮಗಳು, ಪೂರ್ಣಾಹುತಿ, ಮಹಾಮಂಗಳಾರತಿ, ತೀರ್ಥ, ಪ್ರಸಾದ, ಸಾಮೂಹಿಕ ಲಲಿತಾ ಸಹಸ್ರನಾಮ ಪಾರಾಯಣ ನಡೆದವು.
ಉದ್ಘಾಟನೆ: ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಭಾಗ್ಯನಗರದ ಶಂಕರಚಾರ್ಯ ಮಠದ ಶಿವಪ್ರಕಾಶನಾಂದ ಸ್ವಾಮೀಜಿ ಹೋಮ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಸುವುದು ಪವಿತ್ರ ಕಾರ್ಯವಾಗಿದ್ದು, ಇದಕ್ಕೆ ಪ್ರತಿ ಮನುಷ್ಯನಿಗೆ ನಿರ್ಮಲವಾದ ಮನಸ್ಸು ಇರಬೇಕು. ಇಂಥ ಮನಸ್ಸು ಹೊಂದಲು ಯಜ್ಞ, ದಾನ, ತಪಸ್ಸಿನಿಂದ ಮಾತ್ರ ಸಾಧ್ಯ ಎಂದರು.
ಲೋಕ ಕಲ್ಯಾಣದ ಸಲುವಾಗಿ ಹೋಮದಂಥ ಪವಿತ್ರ ಕಾರ್ಯದಲ್ಲಿ ಆರು ವರ್ಷಗಳಿಂದ ತೊಡಗಿರುವುದು ಶ್ಲಾಘನೀಯ. ಹೋಮದ ಹಾಗೂ ಮಂತ್ರಗಳ ಅರ್ಥ ತಿಳಿದುಕೊಂಡು ಹೋಮ ಮಾಡುವುದು ಶ್ರೇಷ್ಠ. ಇದರಿಂದ ಮನಸ್ಸು ಪರಿಪಕ್ವವಾಗುತ್ತದೆ’ ಎಂದರು.
ಹಿರಿಯ ವಕೀಲ ರಾಘವೇಂದ್ರ ಪಾನಘಂಟಿ ಮಾತನಾಡಿ ವೇದಮಾತಾ ಸಮಿತಿಯ ಸಮಾನ ಮನಸ್ಕರು ಸೇರಿಕೊಂಡು ಆರು ವರ್ಷಗಳಿಂದ ಹೋಮದ ಕಾರ್ಯಕ್ರಮ ಮಾಡುತ್ತಿದ್ದಾರೆ. ಹೋಮ ಹವನದ ವೇಳೆ ಮಂತ್ರಗಳ ಪಠಣದಿಂದ ಮನಸ್ಸು ನಿರ್ಮಲವಾಗುತ್ತದೆ. ಇದರಿಂದ ಮನಸ್ಸು ಶುದ್ದವಾಗುತ್ತದೆ’ ಎಂದು ಹೇಳಿದರು.
ಬೆಂಗಳೂರಿನ ಹರೀಶ್ ಭಟ್ ಬೆಳವಾಡಿ ಅವರು ಲಲಿತಾ ಉಪನ್ಯಾಸದ ಮಹತ್ವ ಕುರಿತು ಪ್ರವಚನ ಹೇಳಿದರು. ಸಮಿತಿ ಗೌರವಾಧ್ಯಕ್ಷ ಜಯಂತ್ ದೇಸಾಯಿ ಸೇರಿದಂತೆ ಅನೇಕರು ಇದ್ದರು. ಅಮಿತ್ ಕಂಪ್ಲಿಕರ್ ನಿರೂಪಿಸಿದರು.
ಇಂದು ಕೊನೆಯ ದಿನ: ಭಾನುವಾರ ಶತಚಂಡಿ ಯಾಗ ಜರುಗಲಿದ್ದು, ಸಿಂದಗಿಯ ಭೀಮಾಶಂಕರ ಮಠದ ದತ್ತಪ್ಪಯ್ಯ ಸ್ವಾಮೀಜಿ, ಕೊಪ್ಪಳ ರಾಮಕೃಷ್ಣ ಆಶ್ರಮದ ಚೈತನ್ಯಾನಂದ ಸ್ವಾಮೀಜಿ, ಹರೀಶ ಭಟ್ ಬೆಳವಾಡಿ ದಿವ್ಯ ಸಾನ್ನಿಧ್ಯ ವಹಿಸುವರು. ಕೊನೆಯ ದಿನ ದೇವತಾ ಪೂಜೆ, ಶತಚಂಡಿಯಾಗ, ಪೂರ್ಣಾಹುತಿ, ಆಶೀರ್ವಚನ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಲಿವೆ ಎಂದು ಸಂಘಟಕರು ತಿಳಿಸಿದ್ದಾರೆ.

Total Views: 0
ಜಾಹೀರಾತು
Share This Article
Leave a Comment