ಸೂಳೆಕಲ್‌ನಲ್ಲಿ ಶ್ರೀ ಮಣ್ಣಮ್ಮದೇವಿ ನೂತನ ಶಿಲಾಮೂರ್ತಿ ಪ್ರತಿಷ್ಠಾಪನೆ

H.Mallikarjun
H.Mallikarjun - Kalyanasiri
1 Min Read
ಜಾಹೀರಾತು

Installation of a new stone idol of Sri Mannammadevi at Sulekal




ಸೂಳೆಕಲ್‌ನಲ್ಲಿ ಶ್ರೀ ಮಣ್ಣಮ್ಮದೇವಿ ನೂತನ ಶಿಲಾಮೂರ್ತಿ ಪ್ರತಿಷ್ಠಾಪನೆ

ಜಾಹೀರಾತು
ಜಾಹೀರಾತು

ಭಕ್ತಿ-ಭಾವದಿಂದ ನಡೆದ ಧಾರ್ಮಿಕ ಕಾರ್ಯಕ್ರಮ; ದೇವಿಯ ದರ್ಶನ ಪಡೆದ ನೂರಾರು ಭಕ್ತರ

ಕಲ್ಯಾಣ ಸಿರಿ:
ಕನಕಗಿರಿ: ತಾಲೂಕಿನ ಸೂಳೆಕಲ್ ಗ್ರಾಮದಲ್ಲಿ ಶ್ರೀ ಮಣ್ಣಮ್ಮದೇವಿಯ ನೂತನ ಶಿಲಾಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮವು ನವೆಂಬರ್ 15ರ ಭಾನುವಾರ ಭಕ್ತಿ ಮತ್ತು ಸಂಭ್ರಮದಿಂದ ನೆರವೇರಿತು.
ಅರಗುರು ಚರಮೂರ್ತಿ ಪೂಜ್ಯರ ದಿವ್ಯ ಸಾನ್ನಿಧ್ಯದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ದೇವಿಯ ನೂತನ ಶಿಲಾಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು.
ಶ್ರೀ ಮಣ್ಣಮ್ಮದೇವಿ ದೇವಸ್ಥಾನ ಸೇವಾ ಸಮಿತಿಯ ಪದಾಧಿಕಾರಿಗಳು, ಗ್ರಾಮದ ಗುರುಹಿರಿಯರು ಹಾಗೂ ಸರ್ವ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವಿಯ ದರ್ಶನ ಪಡೆದು, ವಿಶೇಷ ಪೂಜೆಯಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.
ಗ್ರಾಮದಲ್ಲಿ ಧಾರ್ಮಿಕ ಭಕ್ತಿಭಾವದ ವಾತಾವರಣ ಮನೆಮಾಡಿದ್ದು, ಕಾರ್ಯಕ್ರಮವು ಶ್ರದ್ಧಾಭಕ್ತಿಯಿಂದ ಸಂಪನ್ನಗೊಂಡಿತು.
ವರದಿ: ಶರಣಯ್ಯ ಹಿರೇಮಠ

Total Views: 0
ಜಾಹೀರಾತು
Share This Article
Leave a Comment