
Constitution Dedication Day' celebration and district convention by the Dalit Vimochana Sene in Gangavathi on November 30.

ನ.30ರಂದು ಗಂಗಾವತಿಯಲ್ಲಿ ದಲಿತ ವಿಮೋಚನಾ ಸೇನೆಯಿಂದ ಸಂವಿಧಾನಾರ್ಪಣಾ ದಿನಾಚರಣೆ ಹಾಗೂ ಜಿಲ್ಲಾ ಸಮಾವೇಶ

ಕಾರ್ಯಕ್ರಮದ ಪೋಸ್ಟರ್, ಕರಪತ್ರ ಬಿಡುಗಡೆ: ಎಸ್. ದುರುಗಪ್ಪ
ಗಂಗಾವತಿ: ದಲಿತ ವಿಮೋಚನಾ ಸೇನೆ ವತಿಯಿಂದ ನವೆಂಬರ್ 30ರಂದು ಗಂಗಾವತಿಯ ಶ್ರೀ ಕೃಷ್ಣದೇವರಾಯ ಕಲಾಭವನದಲ್ಲಿ ಎರಡನೇ ವರ್ಷದ ಸಂವಿಧಾನಾರ್ಪಣಾ ದಿನಾಚರಣೆ ಹಾಗೂ ಜಿಲ್ಲಾ ಸಮಾವೇಶವನ್ನು ಅದ್ಧೂರಿಯಾಗಿ ಆಯೋಜಿಸಲಾಗಿದೆ.
ಈ ಹಿನ್ನೆಲೆಯಲ್ಲಿ ನಗರದ ಸರ್ಕ್ಯೂಟ್ ಹೌಸ್ನಲ್ಲಿ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಎಸ್. ದುರುಗಪ್ಪ ಅವರ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಸಭೆಯಲ್ಲಿ ಮಾತನಾಡಿದ ಎಸ್. ದುರುಗಪ್ಪ ಅವರು, ನವೆಂಬರ್ 30ರಂದು ನಡೆಯಲಿರುವ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 11.30ಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಭವ್ಯ ಮೆರವಣಿಗೆ ಆರಂಭವಾಗಲಿದೆ. ನಂತರ ಕೃಷ್ಣದೇವರಾಯ ಕಲಾಭವನದಲ್ಲಿ ನಡೆಯುವ ಸಮಾವೇಶವನ್ನು ದಲಿತ ವಿಮೋಚನಾ ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಮಾ. ಮುನಿರಾಜ್ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಅಧಿಕೃತ ಪೋಸ್ಟರ್ ಹಾಗೂ ಕರಪತ್ರವನ್ನು ಬಿಡುಗಡೆ ಮಾಡಲಾಯಿತು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟೀ ಪುಡಿ ಹುಲಗಪ್ಪ ಮಾತನಾಡಿ, ನವೆಂಬರ್ 30ರಂದು ನಡೆಯುವ ಸಂವಿಧಾನಾರ್ಪಣಾ ದಿನ ಹಾಗೂ ಜಿಲ್ಲಾ ಸಮಾವೇಶದಲ್ಲಿ ಸಂಘಟನೆಯ ಎಲ್ಲ ಪದಾಧಿಕಾರಿಗಳು, ತಾಲೂಕು ಮತ್ತು ಗ್ರಾಮೀಣ ಘಟಕಗಳ ಅಧ್ಯಕ್ಷರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಜಿಲ್ಲಾಧ್ಯಕ್ಷ ಎಸ್. ರಮೇಶ ಮಾತನಾಡಿ, ಸಂವಿಧಾನದ ಮಹತ್ವ ಮತ್ತು ಆಶಯಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಆಯೋಜಿಸಿರುವ ಈ ಸಮಾವೇಶಕ್ಕೆ ಎಲ್ಲರೂ ಕೈಜೋಡಿಸಬೇಕೆಂದು ಕರೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಸಹ ಕಾರ್ಯದರ್ಶಿ ಜಿ. ಅಂಜನಪ್ಪ, ಜಿಲ್ಲಾ ಉಪಾಧ್ಯಕ್ಷ ಮಂಜು, ಮಾರುತಿ ಟೆಂಗುಂಟಿ, ಕಾರಟಗಿ ತಾಲೂಕು ಅಧ್ಯಕ್ಷ ಯಮನೂರಪ್ಪ ಬೂದಗುಂಪ, ಗಂಗಾವತಿ ತಾಲೂಕು ಅಧ್ಯಕ್ಷ ನಿಂಗಪ್ಪ ದೊಡ್ಡಮನಿ, ಯಲಬುರ್ಗಾ ತಾಲೂಕು ಅಧ್ಯಕ್ಷ ಶರಣಬಸಪ್ಪ ಕಡೆಮನಿ, ಕೊಪ್ಪಳ ತಾಲೂಕು ಯುವ ಘಟಕದ ಅಧ್ಯಕ್ಷ ಭೀಮೇಶ, ಮುಖಂಡರಾದ ಹನುಮನಾಯಕ, ಮಾರುತಿ ಗುಡುದೂರ, ಫಕೀರಪ್ಪ ಬೂದುಗುಂಪ, ಕರಿಯಪ್ಪ, ಯಮನೂರಪ್ಪ ಕಾರಟಗಿ, ಕುಮಾರ ಹೊಸಹಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.



