
Service of 100 free water cans in memory of Kittur Rani Chennamma and Belavadi Mallamma.ಕಿತ್ತೂರು ರಾಣಿ ಚೆನ್ನಮ್ಮ, ಬೆಳವಡಿ ಮಲ್ಲಮ್ಮ ಸ್ಮರಣಾರ್ಥ 100 ಉಚಿತ ನೀರಿನ ಕ್ಯಾನ್ಗಳ ಸೇವೆ
ಭಾರತಿದರ್ಶ್ ಫೌಂಡೇಶನ್ನಿಂದ ಬೆಂಗಳೂರಿನ 100 ಸ್ಥಳಗಳಲ್ಲಿ ಸಾರ್ವಜನಿಕರಿಗೆ ಉಚಿತ ಕುಡಿಯುವ ನೀರಿನ ವ್ಯವಸ್ಥೆ

ಬೆಂಗಳೂರು: ನಾಡಿನ ವೀರವನಿತೆಯರಾದ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಬೆಳವಡಿ ಮಲ್ಲಮ್ಮ ಅವರ ಸ್ಮರಣಾರ್ಥವಾಗಿ ಭಾರತಿದರ್ಶ್ ಫೌಂಡೇಶನ್ ವತಿಯಿಂದ ಬೆಂಗಳೂರಿನ ವಿವಿಧ 100 ಸ್ಥಳಗಳಲ್ಲಿ ಸಾರ್ವಜನಿಕರಿಗೆ ಹಾಗೂ ಅಗತ್ಯವಿರುವವರಿಗೆ ಉಚಿತ ಕುಡಿಯುವ ನೀರಿನ ಸೇವೆ ಒದಗಿಸುವ ಉದ್ದೇಶದಿಂದ 100 ನೀರಿನ ಕ್ಯಾನ್ಗಳನ್ನು ದೇಣಿಗೆಯಾಗಿ ನೀಡಲಾಯಿತು.
ಸಮಾಜಸೇವೆ, ಮಾನವೀಯತೆ ಹಾಗೂ ಸಾರ್ವಜನಿಕರ ಕಲ್ಯಾಣವನ್ನು ಗುರಿಯಾಗಿಸಿಕೊಂಡಿರುವ ಭಾರತಿದರ್ಶ್ ಫೌಂಡೇಶನ್, ನೀರಿನ ಅಗತ್ಯವಿರುವ ಜನರಿಗೆ ನೆರವಾಗುವ ಉದ್ದೇಶದಿಂದ ಈ ಸಮಾಜಮುಖಿ ಸೇವಾ ಕಾರ್ಯವನ್ನು ಹಮ್ಮಿಕೊಂಡಿದೆ. ಸಾರ್ವಜನಿಕ ಸ್ಥಳಗಳಲ್ಲಿ ಕುಡಿಯುವ ನೀರಿನ ಲಭ್ಯತೆಯನ್ನು ಹೆಚ್ಚಿಸುವುದರ ಜೊತೆಗೆ, ಜನರಲ್ಲಿ ಸೇವಾ ಮನೋಭಾವ ಮತ್ತು ಪರಸ್ಪರ ಸಹಕಾರದ ಭಾವನೆ ಬೆಳೆಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ.
ನಾಡಿನ ವೀರ ಮಹಿಳೆಯರಾದ ರಾಣಿ ಬೆಳವಡಿ ಮಲ್ಲಮ್ಮ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಅವರು ಧೈರ್ಯ, ಸ್ವಾಭಿಮಾನ, ಶೌರ್ಯ ಮತ್ತು ತ್ಯಾಗದ ಪ್ರತೀಕವಾಗಿದ್ದಾರೆ. ಅವರ ಆದರ್ಶಗಳನ್ನು ಸ್ಮರಿಸುತ್ತಾ ಸಮಾಜಕ್ಕೆ ಉಪಯುಕ್ತವಾದ ಸೇವಾ ಕಾರ್ಯಗಳ ಮೂಲಕ ಅವರ ಸ್ಮರಣೆಯನ್ನು ಅರ್ಥಪೂರ್ಣಗೊಳಿಸುವುದು ಫೌಂಡೇಶನ್ನ ಆಶಯವಾಗಿದೆ.
“ಮಾನವೀಯತೆಯೇ ನಮ್ಮ ಧರ್ಮ, ಸಮಾಜಸೇವೆಯೇ ನಮ್ಮ ಗುರಿ” ಎಂಬ ಧ್ಯೇಯದೊಂದಿಗೆ ಭಾರತಿದರ್ಶ್ ಫೌಂಡೇಶನ್ ಶಿಕ್ಷಣ, ಪರಿಸರ ಸಂರಕ್ಷಣೆ, ಗಿಡ ನೆಡುವಿಕೆ, ಆರೋಗ್ಯ ಶಿಬಿರ, ಪ್ರಾಣಿ ಸಂರಕ್ಷಣೆ ಹಾಗೂ ಅಗತ್ಯವಿರುವವರಿಗೆ ನೆರವು ಸೇರಿದಂತೆ ಹಲವು ಸಮಾಜಮುಖಿ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದೆ.
ಬೇಸಿಗೆ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ದೊರೆಯುವಂತೆ ಮಾಡುವ ಈ ಸೇವಾ ಕಾರ್ಯವು ಜನರಿಗೆ ನೇರವಾಗಿ ಅನುಕೂಲವಾಗಲಿದೆ. ಈ ಮೂಲಕ ಸಮಾಜದಲ್ಲಿ ಸೇವೆ, ಸಹಕಾರ ಮತ್ತು ಮಾನವೀಯತೆಯ ಮನೋಭಾವ ಮತ್ತಷ್ಟು ಬಲಪಡಿಸಲಿ ಎಂಬುದು ಫೌಂಡೇಶನ್ನ ಆಶಯವಾಗಿದೆ.
ಮುಖ್ಯ ಅತಿಥಿಗಳು ಭಾಗಿ
ಕಾರ್ಯಕ್ರಮದಲ್ಲಿ ಪೀಣ್ಯ ಕೈಗಾರಿಕಾ ಸಂಘದ ಮಲ್ಲಿಕಾರ್ಜುನ ಸ್ವಾಮಿ, ಭಾರತಿದರ್ಶ್ ಫೌಂಡೇಶನ್ನ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಎನ್.ಕೆ., ದಿವ್ಯಾಂಗರ ರಾಷ್ಟ್ರೀಯ ವೃತ್ತಿ ಸೇವಾ ಕೇಂದ್ರದ ಉಪನಿರ್ದೇಶಕ ದಿವಾಕರ ಎಸ್.ಕೆ., ಪೀಣ್ಯ ಕೈಗಾರಿಕಾ ಸಂಘದ ಮಾಜಿ ಅಧ್ಯಕ್ಷ ದಾನಪ್ಪ, ಮಲ್ಲೇಶ್ ಗೌಡ ಎಚ್.ಕೆ., ಶ್ರೀಧರ್ ಅಂದಾನಪ್ಪ, ಭೂಷಣ್, ಶ್ರೀಮತಿ ಲೀಲಾವತಿ ಸೇರಿದಂತೆ ಹಲವರು ಭಾಗವಹಿಸಿದ್ದರು.
ಭಾರತಿದರ್ಶ್ ಫೌಂಡೇಶನ್ ಸಂಸ್ಥಾಪಕ ಶೈಲೇಂದ್ರ ಕುಮಾರ್ ಪಾಟೀಲ್ ಅವರ ನೇತೃತ್ವದಲ್ಲಿ ನಡೆದ ಈ ಸಮಾಜಮುಖಿ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಯಿತು.




