ಧಾರ್ಮಿಕ ಆಚರಣೆಯ ಜೊತೆಗೆ ಸಾಂಸ್ಕೃತಿಕ ಪ್ರತಿಭೆಗಳ ಅನಾವರಣ: ನಾಗರಾಜ್ ದರೂಜಿ

H.Mallikarjun
H.Mallikarjun - Kalyanasiri
1 Min Read
ಜಾಹೀರಾತು
Unveiling of cultural talents alongside religious observances: Nagaraj Daruji

ಧಾರ್ಮಿಕ ಆಚರಣೆಯ ಜೊತೆಗೆ ಸಾಂಸ್ಕೃತಿಕ ಪ್ರತಿಭೆಗಳ ಅನಾವರಣ: ನಾಗರಾಜ್ ದರೂಜಿ

ಗಂಗಾವತಿ: ಧಾರ್ಮಿಕ ಆಚರಣೆಗಳ ಜೊತೆಗೆ ನಾಡಿನ ಸಾಂಸ್ಕೃತಿಕ ಪ್ರತಿಭೆಗಳನ್ನು ಅನಾವರಣಗೊಳಿಸುವ ಉದ್ದೇಶದಿಂದ ಈ ಬಾರಿ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಶರಣ್ ನವರಾತ್ರಿ ಮಹೋತ್ಸವದ ಅಂಗವಾಗಿ ‘ಕವಿ ಕಾವ್ಯ ಕುಂಚ’ ಎಂಬ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಆರ್ಯವೈಶ್ಯ ಸಮಾಜ ಹಿರೇಜಂತಕಲ್-ವಿರುಪಾಪುರ ಅಧ್ಯಕ್ಷ ಸರೋಜಿ ನಾಗರಾಜ ಶೆಟ್ಟಿ ಹೇಳಿದರು.

ಜಾಹೀರಾತು

ಶನಿವಾರ ದೇವಸ್ಥಾನದ ಶ್ರೀನಿವಾಸ ವೇದಿಕೆಯಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಧರ್ಮಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಹಬ್ಬ-ಹರಿದಿನ ಹಾಗೂ ಹುಣ್ಣಿಮೆ ಸೇರಿದಂತೆ ಧಾರ್ಮಿಕ ಆಚರಣೆಗಳು ನಮ್ಮಲ್ಲಿ ಸಂಸ್ಕಾರ ಮತ್ತು ಸಂಸ್ಕೃತಿಯ ಅರಿವು ಮೂಡಿಸುವುದರ ಜೊತೆಗೆ ಸಮಾಜದ ಸಂಘಟನೆಗೆ ಪ್ರೇರಕ ಶಕ್ತಿಯಾಗಿವೆ. ಇಂತಹ ಆಚರಣೆಗಳ ಮೂಲಕ ಸನ್ಮಾರ್ಗದಲ್ಲಿ ನಡೆಯಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ಇದಕ್ಕೂ ಪೂರ್ವದಲ್ಲಿ ದಸರಾ ವೈಭವದ ಅಂಗವಾಗಿ ಶ್ರೀ ವೆಂಕಟೇಶ್ವರ ಮಹಾತ್ಮೆ ಕುರಿತು ಅಲವಂಡಿ ವಿಶ್ವನಾಥ್ ಆಚಾರ್ಯ ಬರೇಬಾಳ್-ಗೋರೇಬಾಳ್ ಅವರಿಂದ ಪ್ರವಚನ ನಡೆಯಿತು.

ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರಾದ ಡಿ. ರಾಜಕುಮಾರ್, ದರೂಜಿ ವೆಂಕಟೇಶ್, ಎನ್.ವಿ. ಮಂಜು, ಎನ್. ವಿಜಯ, ದಮ್ಮೂರು ಸುರೇಶ್, ಗೋಪಾಲ ಶೆಟ್ಟಿ, ರುಕ್ಮಿಣಿಬಾಯಿ ದಮ್ಮೂರು, ಪದ್ಮಾವತಿ ದರೂಜಿ, ದಮ್ಮೂರು ಮಂಜುಳಾ ಸೇರಿದಂತೆ ವಾಸವಿ ಯುವಜನ ಸಂಘದ ಅಧ್ಯಕ್ಷರು, ವಾಸವಿ ಮಹಿಳಾ ಪದಾಧಿಕಾರಿಗಳು ಹಾಗೂ ಆರ್ಯವೈಶ್ಯ ಸಮಾಜದ ಬಂಧುಗಳು ಉಪಸ್ಥಿತರಿದ್ದರು.

Total Views: 0
ಜಾಹೀರಾತು
Share This Article