ಡಿ.ಕೆ. ಶಿವಕುಮಾರ್ ಸಂಪುಟ ವಿಸ್ತರಣೆ: ಇಂದು ಸಂಜೆ 20 ನೂತನ ಸಚಿವರ ಪ್ರಮಾಣವಚನ ಸ್ವೀಕಾರ

H.Mallikarjun
H.Mallikarjun - Kalyanasiri
1 Min Read





D.K. Shivakumar Cabinet Expansion: 20 New Ministers to Take Oath This Evening

ಡಿ.ಕೆ. ಶಿವಕುಮಾರ್ ಸಂಪುಟ ವಿಸ್ತರಣೆ: ಇಂದು ಸಂಜೆ 20 ನೂತನ ಸಚಿವರ ಪ್ರಮಾಣವಚನ ಸ್ವೀಕಾರ

ಜಾಹೀರಾತು

ಬೆಂಗಳೂರು: ಕರ್ನಾಟಕ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸಚಿವ ಸಂಪುಟಕ್ಕೆ 20 ನೂತನ ಸಚಿವರನ್ನು ಸೇರ್ಪಡೆಗೊಳಿಸಲು ಕಾಂಗ್ರೆಸ್ ಹೈಕಮಾಂಡ್ ಅಧಿಕೃತ ಪಟ್ಟಿಯನ್ನು ಅಂತಿಮಗೊಳಿಸಿದೆ.

ಇಂದು (ಆಗಸ್ಟ್ 3, 2026) ಸಂಜೆ ಸರಿಯಾಗಿ 4.05 ಗಂಟೆಗೆ ರಾಜಭವನದ ಗಾಜಿನ ಮನೆಯಲ್ಲಿ ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭ ಅದ್ಧೂರಿಯಾಗಿ ನಡೆಯಲಿದೆ. ರಾಜ್ಯಪಾಲರು ಹೊಸ ಸಚಿವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣವಚನ ಬೋಧಿಸಲಿದ್ದಾರೆ.

ಹೈಕಮಾಂಡ್ ಅಂತಿಮಗೊಳಿಸಿದ ನೂತನ ಸಚಿವರ ಅಧಿಕೃತ ಪಟ್ಟಿ:

ಸಂಪುಟ ಸೇರಲಿರುವ 20 ನಾಯಕರ ವಿವರ ಇಲ್ಲಿದೆ:

  1. ಪಿ. ಎಂ. ನರೇಂದ್ರಸ್ವಾಮಿ
  2. ಶಿವರಾಜ್ ತಂಗಡಗಿ
  3. ರುದ್ರಪ್ಪ ಲಮಾಣಿ
  4. ಕೆ. ಎಸ್. ಬಸವಂತಪ್ಪ
  5. ಬಿ. ನಾಗೇಂದ್ರ
  6. ಟಿ. ರಘುಮೂರ್ತಿ
  7. ಬಿ. ಝಡ್. ಝಮೀರ್ ಅಹಮದ್ ಖಾನ್
  8. ರಿಜ್ವಾನ್ ಅರ್ಷದ್
  9. ಸಂತೋಷ್ ಲಾಡ್
  10. ಮಧು ಬಂಗಾರಪ್ಪ
  11. ಪುಟ್ಟರಂಗಶೆಟ್ಟಿ
  12. ಮಂಕಾಳ ವೈದ್ಯ
  13. ಡಾ. ಅಜಯ್ ಸಿಂಗ್
  14. ಎನ್. ಚಲುವರಾಯ ಸ್ವಾಮಿ
  15. ಕೆ. ಎಂ. ಶಿವಲಿಂಗೇ ಗೌಡ
  16. ಎಚ್. ಸಿ. ಬಾಲಕೃಷ್ಣ
  17. ಗಾಯತ್ರಿ ಶಾಂತೇಗೌಡ
  18. ಬಸವರಾಜ ರಾಯರೆಡ್ಡಿ
  19. ವಿಜಯಾನಂದ ಕಾಶಪ್ಪನವರ್
  20. ಲಕ್ಷ್ಮಣ ಸವದಿ

ಹಿರಿಯ ಮತ್ತು ಯುವ ನಾಯಕರಿಗೆ ಸಮಾನ ಅವಕಾಶ ನೀಡುವ ಮೂಲಕ ಪ್ರಾದೇಶಿಕ ಹಾಗೂ ಜಾತೀವಾರು ಸಮತೋಲನ ಕಾಯ್ದುಕೊಳ್ಳಲು ಹೈಕಮಾಂಡ್ ಈ ಪಟ್ಟಿಯಲ್ಲಿ ಕಸರತ್ತು ನಡೆಸಿದೆ ಎನ್ನಲಾಗಿದೆ. ಸಂಜೆ ನಡೆಯಲಿರುವ ಈ ಸಮಾರಂಭಕ್ಕೆ ರಾಜಭವನದಲ್ಲಿ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ.

Total Views: 1
Share This Article