ಅಬಕಾರಿ ಇಲಾಖೆಯಲ್ಲಿ ಬಾಕಿ ಉಳಿದಿರುವ ಸನ್ನದುಗಳ ಇ-ಹರಾಜು ಜು. 29ಕ್ಕೆ

H.Mallikarjun
H.Mallikarjun - Kalyanasiri
1 Min Read

E-auction of pending Excise Department licenses on July 29

ಅಬಕಾರಿ ಇಲಾಖೆಯಲ್ಲಿ ಬಾಕಿ ಉಳಿದಿರುವ ಸನ್ನದುಗಳ ಇ-ಹರಾಜು ಜು. 29ಕ್ಕೆ

ಜಾಹೀರಾತು


ಕೊಪ್ಪಳ ಜುಲೈ 04 (ಕರ್ನಾಟಕ ವಾರ್ತೆ): ಅಬಕಾರಿ ಇಲಾಖೆಯಲ್ಲಿ ಸ್ಥಗಿತಗೊಂಡಿರುವ, ಮಂಜೂರಾಗದೇ ಬಾಕಿ ಉಳಿದಿರುವ ಸನ್ನದುಗಳನ್ನು ಭಾರತ ಸರ್ಕಾರದ ಸ್ವಾಮ್ಯದ ಸಂಸ್ಥೆಯಾದ ಎಂ.ಎಸ್.ಟಿ.ಸಿ ಲಿಮಿಟೆಡ್‌ನ ಇ ಪೋರ್ಟಲ್‌ನಲ್ಲಿ ಇ-ಹರಾಜು ಇದೇ ಜುಲೈ 29 ರಂದು ಬೆಳಿಗ್ಗೆ 10 ಗಂಟೆಯಿAದ ಮಧ್ಯಾಹ್ನ 12 ಗಂಟೆಯವರೆಗೆ ನೇರ ಹರಾಜು (ಲೈವ್ ಬಿಡ್ಡಿಂಗ್) ನಡೆಯಲಿದೆ.
 ಜುಲೈ 27ರ ಬೆಳಿಗ್ಗೆ 10 ಗಂಟೆಯೊಳಗಾಗಿ ನೋಂದಾಯಿಸಿಕೊಳ್ಳಬಹುದಾಗಿದ್ದು, ತದ ನಂತರ ನೋಂದಾಯಿಸಿಕೊಳ್ಳಲು ಅವಕಾಶವಿರುವುದಿಲ್ಲ. ನೋಂದಣಿ ಪ್ರಕ್ರಿಯೆ ಪೂರ್ಣಗೊಂಡ ನಂತರ ಮತ್ತು ಆನ್‌ಲೈನ್ ಮೂಲಕ ವ್ಯಾಲೆಟ್ಗೆ ಹಣ ಪಾವತಿಯು ಖಚಿತವಾದ ನಂತರವೇ ಬಿಡ್ಡರ್ಗಳು ಆನ್‌ಲೈನ್ ಹರಾಜಿನಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ. ಆದ್ದರಿಂದ, ಬಿಡ್ಡರ್ಗಳು ತಾವು ಭಾಗವಹಿಸಲು ಇಚ್ಚಿಸುವ ನಿರ್ದಿಷ್ಟ ಸ್ಲಾಟ್‌ನ ಹರಾಜು ಪ್ರಾರಂಭವಾಗುವ 48 ಗಂಟೆಗಳ ಮುಂಚಿತವಾಗಿ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದಲ್ಲಿ ಪ್ರಕ್ರಿಯೇ ಸುಗಮವಾಗುತ್ತದೆ.
 ಹೆಚ್ಚಿನ ಮಾಹಿತಿಗಾಗಿ MSTC https://www.mstcecommerce.com ನ್ನು ಅಥವಾ ಕೊಪ್ಪಳ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರಾದ ಆಂಜನೇಯ ಬಿ. ಮೊ.ಸಂ: 8050823609, ಕೊಪ್ಪಳ ವಲಯದ ಅಬಕಾರಿ ನಿರೀಕ್ಷಕರಾದ ಮಂಜುನಾಥ ಗಲಗಲಿ ಮೊ.ಸಂ: 9742506442, ಗಂಗಾವತಿ ವಲಯದ ಅಬಕಾರಿ ನಿರೀಕ್ಷಕರಾದ ವಿಠ್ಠಲ ಪಿರಂಗಣ್ಣನವರ ಮೊ.ಸಂ: 7795316872, ಕುಷ್ಟಗಿ ವಲಯದ ಅಬಕಾರಿ ನಿರೀಕ್ಷಕರಾದ ರವಿ ಕುಮಾರ ಮೊ.ಸಂ: 9483434722, ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಕೊಪ್ಪಳ ಜಿಲ್ಲೆಯ ಅಬಕಾರಿ ಉಪ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Total Views: 0
Share This Article