
Dr. Devaraj Chandrappa assumes office as the 57th President of Gangavathi Lions Club

ಗಂಗಾವತಿ ಲಯನ್ಸ್ ಕ್ಲಬ್ನ 57ನೇ ವರ್ಷದ ಅಧ್ಯಕ್ಷರಾಗಿ ಡಾ. ದೇವರಾಜ್ ಚಂದ್ರಪ್ಪ ಅಧಿಕಾರ ಸ್ವೀಕಾರ

ನೂತನ ಪದಾಧಿಕಾರಿಗಳಿಗೆ ಜ್ಯೋತಿ ಪಿ. ಕುಲಕರ್ಣಿ, ಪ್ರದೀಪ ಕುಲಕರ್ಣಿ ರಿಂದ ಅನುಮೋದನೆ.
ಗಂಗಾವತಿ,: ಗಂಗಾವತಿ ಲಯನ್ಸ್ ಕ್ಲಬ್ನ 57ನೇ ವರ್ಷದ (2026-27) ಅಧಿಕಾರ ಸ್ವೀಕಾರ ಸಮಾರಂಭವು ಭಾನುವಾರ ನೆರವೇರಿತು. ನೂತನ ಅಧ್ಯಕ್ಷರಾಗಿ ಡಾ. ದೇವರಾಜ್ ಚಂದ್ರಪ್ಪ, ಕಾರ್ಯದರ್ಶಿಯಾಗಿ ಹೊಸಳ್ಳಿ ಶಂಕರ ಪಾಟೀಲ್, ಖಜಾಂಚಿಯಾಗಿ ಹರೀಶ್ ಎನ್. ಆಯ್ಕೆಯಾಗಿದ್ದು, ಈ ತಂಡಕ್ಕೆ ಜ್ಯೋತಿ ಪಿ. ಕುಲಕರ್ಣಿ ಮತ್ತು ಪ್ರದೀಪ ಕುಲಕರ್ಣಿ ಅಧಿಕಾರ ಹಸ್ತಾಂತರಿಸಿದರು.
ಸಮಾರಂಭದ ಮುಖ್ಯ ಅತಿಥಿಗಳಾಗಿ ಜಿಲ್ಲಾ ಗವರ್ನರ್ ಗವಿಸಿದ್ದಪ್ಪ ಮುದಗಲ್, ಡಾ. ಮಾಧವ ಶೆಟ್ಟಿ, ಹಿಂದಿನ ಅಧ್ಯಕ್ಷ ಡಾ. ಶಿವಕುಮಾರ್ ಮಾ. ಲಿಪಾಟೀಲ್, ಕಾರ್ಯದರ್ಶಿ ಜಂಬಣ್ಣ ಐಲಿ, ಖಜಾಂಚಿ ಶಿವಪ್ಪ ಗಾಳಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ನ ಹಿರಿಯ ಸದಸ್ಯರಾದ ಡಾ. ಚಂದ್ರಪ್ಪ, ಡಾ. ಸೋಮರಾಜು ಅಲ್ಲೂರಿ, ಡಾ. ವಿ.ವಿ. ಚಿನಿವಾಲರ್, ಟಿ. ರಾಮಕೃಷ್ಣ, ಡಾ. ಗೋಗಿ, ಮೋಹನ್ ಕೋಟಿ, ರವಿ ಚೇತನ್ ರೆಡ್ಡಿ, ಅಭಿಷೇಕ್ ಡಿ.ಎಂ., ಹರಿಬಾಬು, ಡಾ. ಚೇತನ್ ಚೀನಿವಾಲರ್, ಜಗದೀಶ್, ಡಾ. ಕಾರ್ತಿಕ್, ಡಾ. ಬಸವರಾಜ್ ಸಿಂಗನಾಳ, ಸರ್ವೇಶ್ ಮಾಂತಗೊಂಡ, ಸುರೇಶ ಸಿಂಗನಾಳ, ಎಸ್.ಎಸ್. ಪಟ್ಟಣಶೆಟ್ಟಿ, ಡಾ. ಮಲ್ಲನಗೌಡ, ಡಾ. ಎ.ಎಸ್.ಎನ್. ರಾಜು, ಶ್ರೀಕಾಂತ್ ಮಾಕಿನೇನಿ, ಡಾ. ಮಧುಸೂಧನ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದು, ನೂತನ ತಂಡಕ್ಕೆ ಶುಭ ಕೋರಿದರು.
ಕಾರ್ಯಕ್ರಮವು ಸಾಮಾಜಿಕ ಸೇವೆಯ ಮುಂದಿನ ವರ್ಷದ ಚಟುವಟಿಕೆಗಳಿಗೆ ಡಿಕ್ಸೂಚಿಯಾಗಿತ್ತು
