
Accused arrested for stealing a total of 10 motorcycles over a period of one and a half years
ಒಂದೂವರೆ ವರ್ಷದಿಂದ ಒಟ್ಟು 10 ಮೋಟಾರ ಸೈಕಲಗಳನ್ನು ಕಳ್ಳತನ ಮಾಡಿದ ಆರೋಪಿಯ ಬಂಧನ


ಗಂಗಾವತಿ.ಮೇ11:ದೂರುದಾರರಾದ ಮಲ್ಲಪ್ಪ ತಂದೆ ಬಸಪ್ಪ ವಯಸ್ಸು 49 ವರ್ಷ ಜಾ:ಲಿಂಗಾಯತ ಉ:ವ್ಯವಸಾಯ ಸಾ: ನಂಜುಂಡೇಶ್ವರಿ ಗುಡಿ ಹಿಂಭಾಗ ಬಸಾಪಟ್ಟಣ ರವರು ಇವರು ದಿನಾಂಕ: 28-04-2026 ರಂದು ಠಾಣೆಗೆ ಹಾಜರಾಗಿ ತಮ್ಮ ಮನೆ ಕಳ್ಳತನ ಆಗಿರುವ ಬಗ್ಗೆ ದೂರು ಸಲ್ಲಿಸಿದ್ದು ಸದರಿ ದೂರು ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ ಠಾಣಾ ಗುನ್ನೆ ನಂ 105/2026 ಕಲಂ: 303(2) ಬಿ.ಎನ್.ಎಸ್. ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.
ಇತ್ತೀಚೆಗೆ ಗಂಗಾವತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನವಾದ ಮೋಟಾರ ಸೈಕಲಗಳನ್ನು ಪತ್ತೆ ಕುರಿತು ಮನ್ಯ ಡಾ: ರಾಮ್ ಎಲ್ ಅರಸಿದ್ದಿ ಐಪಿಎಸ್ ಜಿಲ್ಲಾ ಪೊಲೀಸ್ ಅಧೀಕ್ಷಕರು ಕೊಪ್ಪಳ, ಕೊಪ್ಪಳ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಹೇಮಂತ ಕುಮಾರ ಐಪಿಎಸ್ ಮಾನ್ಯ ಜೆ, ನ್ಯಾಮಗೌಡರ ರವರ ಮಾರ್ಗದರ್ಶನದಲ್ಲಿ, ಪ್ರಕಾಶ ಮಾಳಿ ಪೊಲೀಸ್ ಇನ್ಸಪೆಕ್ಟರ್ ಗಂಗಾವತಿ ನಗರ ಠಾಣೆ ರವರ ನೇತೃತ್ವದಲ್ಲಿ ಸಿಬ್ಬಂದಿಯವರಾದ ಶ್ರೀ ಮರಿಶಾಂತಗೌಡ ಸಿಹೆಚ್ಸಿ 21, ಶ್ರೀ ಫಕ್ಕಿರಪ್ಪ ಸಿಹೆಚ್ಸಿ 104, ಬೀಮಪ್ಪ ಹೆಚ್.ಸಿ 46 ಶ್ರೀ ಮೈಲಾರಪ್ಪ ಸಿಪಿಸಿ 171, ಗುಂಡಪ್ಪ ಸಿಪಿಸಿ 126,ರಾಘವೇಂದ್ರ ಹೆಚ್.ಸಿ 241, ಸುಭಾಷ ಹೆಚ್.ಸಿ 191, ವಿಶ್ವನಾಥ ಸಿಪಿಸಿ 06 ಗಂಗಾವತಿ ನಗರ ಪೊಲೀಸ್ ಠಾಣೆ ರವರನ್ನೊಳಗೊಂಡ ಒಂದು ತಂಡ ರಚನೆ ಮಾಡಿದ್ದು ಇರುತ್ತದೆ. ಹಾಗೂ ಗಂಗಾವತಿ ಪೊಲೀಸ್ ಉಪ-ವಿಭಾಗದ ಉಪ ವಿಭಾಗಾಧಿಕಾರಿಗಳಾದ
ಸದರಿ ತನಿಖಾ ತಂಡವು ಮೋಟಾರ ಸೈಕಲ್ ಕಳ್ಳತನ ಆರೋಪಿತನಾದ ಪ್ರಕಾಶ ತಂದೆ ಈರಣ್ಣ ತಳವಾರ ವಯಾ: 41 ವರ್ಷ ಜಾ: ವಾಲ್ಮೀಕಿ ಉ: ಡ್ರೈವರ ಸಾ: ಸಾಯಿ ನಗರ, ಗಂಗಾವತಿ ಈತನಿಗೆ ದಸ್ತಗಿರಿ ಮಾಡಿ ಸದರಿಯವನಿಗೆ ಮೋಟಾರ ಸೈಕಲ್ ಕಳ್ಳತನ ಮಾಡಿದ ಬಗ್ಗೆ ಕೂಲಂಕುಷವಾಗಿ ವಿಚಾರಣೆಗೆ ಒಳಪಡಿಸಿದಾಗ ಸದರಿ ಆರೋಪಿತನು ಈಗ್ಗೆ ಸುಮಾರು ಒಂದೂವರೆ ವರ್ಷದಿಂದ ಒಟ್ಟು 10 ಮೋಟಾರ ಸೈಕಲಗಳನ್ನು ಕಳ್ಳತನ ಮಾಡಿದ ಬಗ್ಗೆ ತನ್ನ ಸ್ವ-ಖುಷಿ ಹೇಳಿಕೆ ನೀಡಿದ್ದರಿಂದ ಸದರಿಯವನು ನೀಡಿದ ಸ್ವ-ಖುಷಿ ಹೇಳಿಕೆಯ ಮೇರೆಗೆ ಆರೋಫಿತನೊಂದಿಗೆ ಹೋಗಿ ಒಟ್ಟು ಸುಮಾರು ಅಂದಾಜು 4,50,000/- ರೂ ಬೆಲೆ ಬಾಳುವ ಒಟ್ಟು 10 ಮೋಟಾರ ಸೈಕಲಗಳನ್ನು ಜಪ್ತಿಪಡಿಸಿಕೊಂಡಿದ್ದು ಸದರಿ ಪ್ರಕರಣದ ತನಿಕೆ ಮುಂದುವರೆದಿರುತ್ತದೆ. ಆರೋಪಿತನನ್ನು ದಸ್ತಗಿರಿ ಮಾಡಿ ಕಳ್ಳತನವಾಗಿದ್ದ ಒಟ್ಟು 10 ಮೋಟಾರ ಸೈಕಲಗಳನ್ನು ಪತ್ತೆ ಮಾಡಿದ್ದು ಇರುತ್ತದೆ.
ಸದರಿ ಆರೋಫಿತನಿಗೆ ಪತ್ತೆ ಮಾಡಿ ಕಳ್ಳತನವಾಗಿದ್ದ 10 ಮೋಟಾರ ಸೈಕಲಗಳನ್ನು ಪತ್ತೆ ಮಾಡಿದ ತಂಡಕ್ಕೆ ಮಾನ್ಯ ಎಸ್.ಪಿ ಸಾಹೇಬರು ಕೊಪ್ಪಳ ರವರು ವಿಶೇಷ ಬಹುಮಾನ ಘೋಷಿಸಿದ್ದಾರೆ.
