
ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ?
What is the benefit of drinking lukewarm water as soon as you wake up in the morning?

ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಉಗರು ಬೆಚ್ಚಗೆ ನಾ ನೀರನ್ನು ಕುಡಿಯುವುದರಿಂದ ದೇಹದ ತಾಪಮಾನ ಹೆಚ್ಚಾಗುತ್ತದೆ ಮತ್ತು ದೇಹದಲ್ಲಿ ಬೆವರು ಬರಲು ಪ್ರಾರಂಭವಾಗುತ್ತದೆ. ದೇಹದಿಂದ ವಿಷಕಾರಿ ಅಂಶಗಳು ಮತ್ತು ಕಲುಷಿತ ಬೇಡದ ತ್ಯಾಜ್ಯಗಳು ಹೊರಹೋಗುತ್ತವೆ ಇದರಿಂದ ಚರ್ಮದ ಮೇಲೆ ಮೊಡವೆಗಳು ಉಂಟಾಗುವ ಸಾಧ್ಯತೆ ಇರುವುದಿಲ್ಲ. ದೇಹದ ಜೀರ್ಣಶಕ್ತಿ ಹೆಚ್ಚುತ್ತದೆ ಜೀರ್ಣಾಂಗ ವ್ಯವಸ್ಥೆಯನ್ನು ಅತ್ಯುತ್ತಮವಾಗಿ ಕಾಪಾಡುವುದು ಮಾತ್ರವಲ್ಲದೆ ಒಡಪಿನಿಂದ ಹಾಗೂ ಕಾಂತಿಯಿಂದ ಕೂಡಿದ ಚರ್ಮ ನಿಮ್ಮದಾಗುತ್ತದೆ. ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರಿನ ಜೊತೆಗೆ ಸ್ವಲ್ಪ ನಿಂಬೆಹಣ್ಣಿನ ರಸ ಕೆಲವು ಹನಿಯಷ್ಟು ಜೇನುತುಪ್ಪ ಹಾಕಿ ಕುಡಿದರೆ ತುಂಬಾ ಒಳ್ಳೆಯದು. ಉಗುರು ಬೆಚ್ಚಗಿನ ನೀರನ್ನು ಕುಡಿಯುವುದರಿಂದ ದೇಹಕ್ಕೆ ನೀರಿನ ಅಂಶವನ್ನು ಒದಗಿಸುವ ಜೊತೆಗೆ ಚರ್ಮದ ಆರೋಗ್ಯವನ್ನು ರಕ್ಷಣೆ ಮಾಡಿ, ಚರ್ಮದ ಭಾಗದಲ್ಲಿ ಕಂಡುಬರುವ ರಕ್ತನಾಳಗಳಲ್ಲಿ ಅತ್ಯಧಿಕ ರಕ್ತ ಸಂಚಾರ ಉಂಟಾಗಿ ಚರ್ಮದ ಜೀವಕೋಶಗಳಿಗೆ ಪೌಷ್ಠಿಕ ಸತ್ವಗಳು ಸಿಗುತ್ತವೆ. ಬೆಚ್ಚಗಿನ ನೀರು ಚರ್ಮದ ಭಾಗಗಳಲ್ಲಿ ಕಂಡುಬರುವ ಫ್ರೀ ರಾಡಿಕಲ್ ಅಂಶಗಳನ್ನು ಹೋಗಲಾಡಿಸುತ್ತದೆ ವಯಸ್ಸಾಗುವಿಕೆ ಪ್ರಕ್ರಿಯೆಯನ್ನು ದೂರ ಮಾಡಲು ಇದು ಸಹಾಯ ಮಾಡುತ್ತದೆ ಚರ್ಮದ ಸೊಕ್ಕನ್ನು ಹೋಗಲಾಡಿಸಲು ನೆರವಾಗುತ್ತದೆ. ಉಗುರು ಬೆಚ್ಚಗಿನ ನೀರು ದೇಹದ ತೂಕವನ್ನು ಕಡಿಮೆ ಮಾಡುವಲ್ಲಿ ಕೂಡ ಪ್ರಮುಖ ಪಾತ್ರ ವಹಿಸುತ್ತದೆ.



