
Senior CPI(M) leader Sri Nithyananda Swami passes away

ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಸಿಪಿಐಎಂ ಪಕ್ಷದ ಹಿರಿಯ ನಾಯಕರಾದ ಶ್ರೀ ನಿತ್ಯಾನಂದ ಸ್ವಾಮಿ ಅವರು ವಯೋ ಸಹಜ ಕಾಯಿಲೆಯಿಂದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಶ್ರೀಯುತರು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸಿಪಿಐಎಂ ಪಕ್ಷವು ಹಮ್ಮಿಕೊಳ್ಳುವ ಎಲ್ಲಾ ಹೋರಾಟಗಳಲ್ಲಿ ಭಾಗವಹಿಸಿ ದಲಿತರು ಹಿಂದುಳಿದವರು ಅಲ್ಪಸಂಖ್ಯಾತರು ಮತ್ತು ಕೃಷಿ ಕೂಲಿ ಕಾರ್ಮಿಕರಿಗೆ ನ್ಯಾಯವನ್ನು ಒದಗಿಸಿಕೊಡುವಲ್ಲಿ ಯಶಸ್ವಿಯಾಗಿದ್ದರು ಶ್ರೀ ನಿತ್ಯಾನಂದ ಸ್ವಾಮಿಯವರು ನಿಧನ ರಾಗಿದ್ದರ ಹಿನ್ನೆಲೆಯಲ್ಲಿ ಗಂಗಾವತಿಯ ಸಿಪಿಐಎಂ ಪ್ರಧಾನ ಕಾರ್ಯಾಲಯದಲ್ಲಿ ಮತ್ತು ಎಪಿಎಂಸಿ ಗಂಜ್ ಕಾರ್ಯಲಯದಲ್ಲಿ ಪಕ್ಷದ ಧ್ವಜವನ್ನು ಅರ್ಧಕ್ಕೆ ಇಳಿಸುವುದರ ಮೂಲಕ ಗೌರವ ಸಲ್ಲಿಸಿ ಸಂತಾಪವನ್ನು ಸೂಚಿಸಲಾಯಿತು ಸಿಪಿಐಎಂ ನಾಯಕರುಗಳಾದ ನಿರುಪಾದಿ ಬೆಣಕಲ್ ಬಸವರಾಜ್ ಮರಕುಂಬಿ ಹುಸೇನಪ್ಪ ಗಂಜ್ ಹಮಾಲರ ಸಂಘದ ಕಾರ್ಯದರ್ಶಿ ಕೃಷ್ಣನಾಯಕ ಲಿಂಗರಾಜ್ ಕ್ಯಾಂಪ್ ಹಾಗೂ ಮಂಜುನಾಥ್ ಅವರುಗಳು ಮಾತನಾಡಿ ನಾಯಕರಾಗಿದ್ದ ಶ್ರೀ ನಿತ್ಯಾನಂದ ಸ್ವಾಮಿಯವರು ಹಾಕಿಕೊಟ್ಟಿರುವ ಹೋರಾಟದಲ್ಲಿ ಸಿಪಿಐ ಎಂ ಪಕ್ಷವು ಮತ್ತು ಎಲ್ಲ ಪದಾಧಿಕಾರಿಗಳು ಮುನ್ನಡೆಯಲ್ಲಿದ್ದಾರೆ ಎಂದು ತಿಳಿಸಿದರು




