ಅರಣ್ಯ ಇಲಾಕೆಯ ಯಡವಟ್ಟು ಬಾಲಕನ ಮೇಲೆ ಚಿರತೆ ದಾಳಿ ಮಾದಪ್ಪನ ಭಕ್ತರ ಆಕ್ರೋಶ .

Mallikarjun
1 Min Read

ಅರಣ್ಯ ಇಲಾಕೆಯ ಯಡವಟ್ಟು ಬಾಲಕನ ಮೇಲೆ ಚಿರತೆ ದಾಳಿ ಮಾದಪ್ಪನ ಭಕ್ತರ ಆಕ್ರೋಶ .





Madappa devotees outraged after leopard attacks forest department boy


ವರದಿ: ಬಂಗಾರಪ್ಪ .ಸಿ .‌
ಹನೂರು :ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ವಿವಿಧಕಡೆ ವಾರಕ್ಕೊಂದರಂತೆ ರಸ್ತೆಗಳಲ್ಲೆ ಕುಳಿತು ಸಾರ್ವಜನಿಕರ ಹಾಗೂ ಮಾದಪ್ಪನ ಭಕ್ತರ ಮೇಲೆ ಚಿರತೆ ದಾಳಿ ಮಾಡುತ್ತಿರುವುದು ವಿಪರ್ಯಾಸವೆಂದರೆ ತಪ್ಪಾಗಲಾರದು .

ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಭಕ್ತಾದಿಗಳ ಮೆಲೆ ಕಳೆದ ತಿಂಗಳು ದಾಳಿ ನಡೆಸಿ ಮಾಸುವ ಮುನ್ನವೆ ಮತ್ತೊಬ್ಬ ಪಾದಯಾತ್ರಿಕ ಬಾಲಕನ ಮೇಲೆ ಚಿರತೆ ದಾಳಿ ಮಾಡಿರುವ ಘಟನೆ ,ಮಂಗಳವಾರ ಬೆಳಿಗ್ಗೆ 11 ಗಂಟೆಯ . ವೇಳೆಯಲ್ಲಿ ನಡೆದಿದೆ ಎಂದು ಭಕ್ತಾದಿಗಳು ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ದ ಆಕ್ರೋಶ ಹೊರಹಾಕಿದ್ದರೆ.‌
ಗಾಯಗೊಂಡ ಬಾಲಕನ ವಿವರ :
ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಭುವಳ್ಳಿ ಗ್ರಾಮದ ಶ್ರೇಯಸ್(8) ಚಿರತೆ ದಾಳಿಯಿಂದ ಗಾಯಗೊಂಡವರಾಗಿದ್ದು . ಶಿವರಾತ್ರಿ ಹಬ್ಬದ ಜಾತ್ರಾ ಮಹೋತ್ಸವದ ಪ್ರಯುಕ್ತ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಲಕ್ಷಾಂತರ ಭಕ್ತಾದಿಗಳು ಪ್ರತಿವರ್ಷದಂತೆ ಈ ವರ್ಷವು ಪಾದಯಾತ್ರೆಯ ಮೂಲಕ ಭಕ್ತಾದಿಗಳು ತೆರಳುವುದು ಸಂಪ್ರದಾಯವಾಗಿದೆ. ಗಾಯಗೊಂಡ ಬಾಲಕನು ಪಾದಯಾತ್ರೆಯ ಮೂಲಕ ತಾಳುಬೆಟ್ಟದ ಎರಡನೆ ತಿರುವಿನ ಪೊನ್ನಾಚಿ ಗ್ರಾಮಕ್ಕೆ ತೆರಳುವ ಕ್ರಾಸ್‌ನಿಂದ ತಲುಪಿ ನಂತರ ಮುಂದೆ ಸಾಗುತ್ತಿದ್ದಾಗ ಅವನ ಮೇಲೆ ಚಿರತೆ ದಾಳಿ ಮಾಡಿದೆ ಎಂದು ,
ಗಾಯಗೊಂಡಿದ್ದ ಬಾಲಕನನ್ನು ಜೊತೆಯಲ್ಲಿದ್ದ ಭಕ್ತಾದಿಗಳು ಬಸ್ಸಿನ ಮೂಲಕ ಶ್ರೀ ಮಲೆ ಮಾದೇಶ್ವರ ಬೆಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಶ್ರೀ ಮಲೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟ‌ರ್ ಜಗದಿಶ್ ರವರ ತಂಡ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ಪರಿಶೀಲಿಸುತ್ತಿದ್ದಾರೆ.
.

Share This Article
Leave a Comment