
ಕಾಯಕದಿಂದಲೇ ಕೈಲಾಸವೆಂದ ಶ್ರೇಷ್ಠ ಶರಣರೇ ದಲಿತ ವಚನಕಾರರು : ಪ್ರೊ. ಕರಿಗೂಳಿ

Dalit poets are the greatest devotees of Kailash, who are said to have taken refuge in Kayaka: Prof. Kariguli

ಗಂಗಾವತಿ ತಾಲೂಕಿನ ಚಿಲುಕೂರಿ ನಾಗೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಶ್ರೀರಾಮನಗರದಲ್ಲಿ ದಿನಾಂಕ 10-02-2026 ರಂದು ದಲಿತ ವಚನಕಾರರಾದ ಮಾದಾರ ಚನ್ನಯ್ಯ, ಡೋಹಾರ ಕಕ್ಕಯ್ಯ, ಸಮಗಾರ ಹರಳಯ್ಯ, ಮಾದಾರ ಧೂಳಯ್ಯ, ಉರಿಲಿಂಗ ಪೆದ್ದಿ ಎಂಬ ಕಾಯಕಶರಣರ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾಯಕ ಶರಣರಿಗೆ ಗುರುನಮನ ಸಲ್ಲಿಸಿ ಮಾತನಾಡಿದ ಪ್ರಾಚಾರ್ಯರಾದ
ಪ್ರೊ.ಕರಿಗೂಳಿ ಯವರು ಕಾಯಕ ದಲಿತ ಶರಣರ ಮತ್ತು ಅವರ ವಚನ ಸಾಹಿತ್ಯದ ಹಿರಿಮೆಯನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು,
ವಚನಗಳು ಭಾರತದ ಸಂವಿಧಾನಕ್ಕಿಂತ ಶತಮಾನಗಳಷ್ಟು ಮೊದಲೇ ಸಮಾನತೆಗಾಗಿ ಸಮಾಜೊ- ಸಾಂಸ್ಕೃತಿಕ ನೆಲೆ ಕಂದುಕೊಂಡಿದ್ದವು ಎಂದರು.
ಶರಣರು ತಮ್ಮ ಸರಳವಾದ ಜೀವನ ಮತ್ತು ನೇರವಾದ ಮಾತುಗಳಿಂದ ಹಾಗೂ ಅನುಭವಗಳಿಂದ ವಚನಗಳನ್ನ ರಚಿಸಿ ಸಮಾಜವನ್ನು ಉನ್ನತೀಕರಿಸಿ ಮೌಲ್ಯಯುತಗೊಳಿಸಿದರು, ಎಲ್ಲಾ ಕಾಲಕ್ಕೂ ಮನುಷ್ಯನು ಕಲಿಯಬೇಕಾದದ್ದು ಕಾಯಕವನ್ನೇ, ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿಗೆ ಪ್ರಪಂಚದಲ್ಲಿ ಕಾಯಕವೇ ಶ್ರೇಷ್ಠ ಎಂದು ಹೇಳಿದರು. ಕುಲಾಧಾರಿತವಾಗಿ ಕಸುಬುಗಳು ಇದ್ದ ಕಾಲದಲ್ಲಿ ಜನಿಸಿದ ಅನಕ್ಷರಸ್ಥ ಸಾಮಾನ್ಯರು ಕೂಡ ಕಾಯಕದಲ್ಲಿ ನಿಷ್ಠೆ ತೋರಿ ಜ್ಞಾನಲೋಕದಲ್ಲಿ ಅಜರಾಮರವಾಗಿ ಉಳಿದಿದ್ದಲ್ಲದೆ, ಭಕ್ತಿಪೂರ್ವಕ ಕಾಯಕದಿಂದ ವೃತ್ತಿಶ್ರೇಷ್ಠತೆ ಸಾಧ್ಯವೆಂದು ಜಗತ್ತಿಗೆ ತೋರಿಸಿ, ಜಗಜ್ಯೋತಿ ಬಸವೇಶ್ವರರಿಗೆ ಪ್ರಿಯವಾಗಿದ್ದವರು ಕಾಯಕ ಶರಣರು ಎಂದು ಶರಣರನ್ನು ಕೊಂಡಾಡಿದರು. ಕನ್ನಡ ವಿಭಾಗದ ಉಪನ್ಯಾಸಕರಾದ ವೀರೇಶ್ ರವರು ಮಾತನಾಡಿ, ವಚನ ಸಾಹಿತ್ಯವು ರಾಜರ ಸಾಹಿತ್ಯವಲ್ಲದೆ ಜನಸಾಮಾನ್ಯರ ಸಾಹಿತ್ಯವಾಗಿದ್ದು ಜನಸಾಮಾನ್ಯರೇ ರಚಿಸಿದ ಸಾಹಿತ್ಯ,ಕಾಯಕದಲ್ಲಿ ದೇವರನ್ನು ಕಾಣುವ ಶರಣರಾಗಿದ್ದರು ಎಂದರು, ಇತಿಹಾಸ ಅಧ್ಯಾಪಕ ಶಂಕ್ರಪ್ಪ ಎಂ. ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಅಧ್ಯಪಕರಾದ ವಿರೂಪಾಕ್ಷ ಕೆ, ರವಿಕುಮಾರ
ಡಾ.ಶಶಿಕುಮಾರ, ಉಪನ್ಯಾಸಕರಾದ ವೆಂಕಟರಾಜು ಮಲ್ಲಯ್ಯ, ಚನ್ನಮಲ್ಲ, ಈಶಪ್ಪ ಸಾಯಿಕುಮಾರ, ಪ್ರವೀಣ್ ಕುಮಾರ್, ಪೆನಾಜ, ಆಡಳಿತ ಸಿಬ್ಬಂದಿ ಜಬೀನ ಬೇಗಂ, ಶಾಂತಿ ಚಿನ್ನವರಪ್ರಸಾದ ಶರಣಬಸವ, ಕಾರ್ಯಕ್ರಮದಲ್ಲಿ ಹಾಜರಿದ್ದರು.




