ಅಭಿಮಾನಿ ಬಳಗದಿಂದ ಮಂಜುನಾಥ್ (ದಾವಿ) ಅವರ ಹುಟ್ಟುಹಬ್ಬ ಅದ್ದೂರಿ ಆಚರಣೆ.
Manjunath (Davi)'s birthday was celebrated with great fanfare by his fans.

ಗಂಗಾವತಿ:ಮಂಜುನಾಥ್ (ದಾವಿ)ಅಯೋಧ್ಯ ಯೂತ್ ಐಕಾನ್, ಯುವಕರ ಕಣ್ಮಣಿ, ಶೋಷಿತರ ಪರವಾಗಿ ಧ್ವನಿ ಎತ್ತುವ ಜನನಾಯಕ ಹಾಗೂ ಗಂಗಾವತಿಯ ಮುಂದಿನ ಭವಿಷ್ಯದ ರಾಜಕಾರಣಿಯಾಗಿ ಗುರುತಿಸಿಕೊಂಡಿರುವ ಮಂಜುನಾಥ್ (ದಾವಿ) ಅವರ ಹುಟ್ಟುಹಬ್ಬವನ್ನು ನಗರದಲ್ಲಿ ಯುವಕರು ಅದ್ದೂರಿಯಾಗಿ ಆಚರಿಸಿದರು.
ನಗರದ ಕೃಷ್ಣ ವೆಜ್ ಫಂಕ್ಷನ್ ಹಾಲ್ನಲ್ಲಿ ಆಯೋಜಿಸಿದ್ದ ಹುಟ್ಟುಹಬ್ಬದ ಸಮಾರಂಭದಲ್ಲಿ ಮಂಜುನಾಥ್ (ದಾವಿ) ಅಯೋಧ್ಯ ಅಭಿಮಾನಿ ಬಳಗದ ವತಿಯಿಂದ ಯುವಕರು ಪಟಾಕಿ ಸಿಡಿಸಿ, ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ್ದಾರೆ. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಯುವಕರು, ಸ್ನೇಹಿತರು ಹಾಗೂ ಅಭಿಮಾನಿಗಳು ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿ ಸಂಭ್ರಮಿಸಿದ್ದಾರೆ.
ಹಾಗೂ ಹುಟ್ಟು ಹಬ್ಬದ ಅಂಗವಾಗಿ ನವಜೀವನ ವೃದ್ಧಾಶ್ರಮಕ್ಕೆ ತೆರಳಿ ಯುವಕರು ಅನ್ನಸಂತರ್ಪಣೆ ಕಾರ್ಯಕ್ರಮ ನೆರೆವೇರಿಸಿದ್ದಾರೆ.
ಕಾರ್ಯಕ್ರಮದಲ್ಲಿ ವಿವಿಧ ಕನ್ನಡಪರ ಹಾಗೂ ದಲಿತ ಪರ ಸಂಘಟನೆಗಳ ಪದಾಧಿಕಾರಿಗಳು ಮಂಜುನಾಥ್ (ದಾವಿ) ಅವರಿಗೆ ಶಾಲು ಬೃಹತಾಕರದ ಹಾರ ಹಾಕಿ ಗೌರವಿಸಿ, ಸಮಾಜ ಸೇವೆ ಹಾಗೂ ಯುವಜನರ ಪರವಾಗಿ ಅವರ ಹೋರಾಟ ಮುಂದುವರಿಯಲಿ ಎಂದು ಶುಭ ಹಾರೈಸಿದರು.
ಯುವಕರ ನಂದಾದೀಪವಾಗಿರುವ ಮಂಜುನಾಥ್ (ದಾವಿ) ಅವರು ಸದಾ ಶೋಷಿತ, ದಮನಿತ ವರ್ಗಗಳ ಪರವಾಗಿ ನಿಂತು ನ್ಯಾಯಕ್ಕಾಗಿ ಹೋರಾಡುತ್ತಿರುವುದು ಈ ಭಾಗದ ಯುವಕರಿಗೆ ಪ್ರೇರಣೆಯಾಗಿದ್ದಾರೆ ಎಂದು ಯುವಕರು ಅಭಿಮಾನಿ ಬಳಗದವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹುಟ್ಟು ಹಬ್ಬದ ಸಮಾರಂಭದಲ್ಲಿ ಅಪಾರ ಸಂಖ್ಯೆಯ ಯುವಕರು ಪಾಲ್ಗೊಂಡು ಮಂಜುನಾಥ್ (ದಾವಿ) ಅವರ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ.













Leave a Reply