
ಮಾದಪ್ಪನ ಸನ್ನಿದಿಯಲ್ಲಿ ವಾಸವಿ ಪ್ರಥಮ ದರ್ಜೆ ಕಾಲೇಜಿನ ಎನ್ ಎಸ್ ಎಸ್ ಶಿಬಿರ

NSS camp at Vasavi First Grade College in the presence of Madappa
ವರದಿ: ಬಂಗಾರಪ್ಪ .ಸಿ.
ಹನೂರು: ಪ್ರಸಿದ್ದ ಯಾತ್ರ ಸ್ಥಳವಾದ
ಶ್ರೀ ಮಲೈ ಮಹದೇಶ್ವರನ ಸನ್ನಿಧಿಯಲ್ಲಿ ಶ್ರೀ ವಾಸವಿ ಪ್ರಥಮ ದರ್ಜೆ ಕಾಲೇಜಿನ 2025-26ನೇ ಸಾಲಿನ NSS (ರಾಷ್ಟ್ರೀಯ ಸೇವಾ ಯೋಜನೆ) ವಾರ್ಷಿಕ ವಿಶೇಷ ಶಿಬಿರ
ಕರ್ನಾಟಕದ ಪ್ರಸಿದ್ಧ ಶೈವ ಕ್ಷೇತ್ರಗಳಲ್ಲಿ ಒಂದಾದ ಚಾಮರಾಜನಗರದ ಹೆಮ್ಮೆಯ ಮಲೈ ಮಹದೇಶ್ವರನ ಸನ್ನಿಧಿಯಲ್ಲಿ 2025-26ನೇ ಸಾಲಿನ NSS ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆಗೊಂಡಿತು.
ಈ ಉದ್ಘಾಟನಾ ಸಮಾರಂಭದಲ್ಲಿ ಶ್ರೀ ವಾಸವಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿಗಳಾದ ಡಾ॥ ಪಿ.ಜಿ. ಶ್ರೀಧರ್‌ರವರು, ಉಪಕಾರ್ಯದರ್ಶಿಗಳಾದ ನಾಗರಾಜಬಾಬು ಕೆ.ಎಸ್.ರವರು, ಚಾಮರಾಜನಗರ ವಿವಿಯ NSS ಸಂಯೋಜಕರಾದ তেত. ಆರ್.ಮಹೇಶ್ ರವರು, ಮುಖ್ಯ ಅತಿಥಿಗಳಾಗಿ ಅಭಿವೃದ್ಧಿ ಪ್ರಾಧಿಕಾರದ ಉಪಕಾರ್ಯದರ್ಶಿಗಳಾದ ಚಂದ್ರಶೇಖರ್‌ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ|| ಪಿ.ಜಿ. ಶ್ರೀಧರ್‌ರವರು ಮಾತನಾಡಿ ಗಾಂಧೀಜಿಯವರ ಆದರ್ಶಗಳಿಂದ ಪ್ರೇರಿತವಾಗಿ NSS ಸ್ಥಾಪಿತಗೊಂಡಿತು. ಇದರ ಧೈಯ ವಾಕ್ಯ “ನನಗಲ್ಲ ನಿನಗೆ (Not me. But you)” ಇದು ನಿಸ್ವಾರ್ಥ ಸೇವೆ ಮತ್ತು ಸಮುದಾಯದ ಕಲ್ಯಾಣವನ್ನು ಬೆಳೆಸುವುದು ಎಂದು ತಿಳಿಸಿದರು. ಕಾರ್ಯಕ್ರಮದ ಉಪನ್ಯಾಸಕರಾಗಿ ಆಗಮಿಸಿದ್ದ COO. ಮಹೇಶ್.ಆರ್‌ರವರು ವಿದ್ಯಾರ್ಥಿಗಳ ವ್ಯಕ್ತತ್ವವನ್ನು ಸಮುದಾಯ ಸೇವೆ ಮೂಲಕ ಅಭಿವೃದ್ಧಿಪಡಿಸುವುದು ಸಾಮಾಜಿಕ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ನಾಯಕತ್ವದ ಗುಣಗಳನ್ನು ಬೆಳೆಸುವುದು ಎಂಬ NSSನ ಧೈಯೋದ್ದೇಶಗಳನ್ನು ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು.
ಈ ಸಂಧರ್ಭದಲ್ಲಿ 77ನೇ ರಾಜ್ಯ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಭಾಗಿಯಾಗಿದ್ದ ಶ್ರೀ ವಾಸವಿ ಪ್ರಥಮ ದರ್ಜೆ ಕಾಲೇಜಿನ ಬಿ.ಕಾಂ ವಿದ್ಯಾರ್ಥಿನಿ ಎಂ.ಪಿ.ತ್ರಿಶಾ ಅವರನ್ನು ಅಭಿನಂದಿಸಲಾಯಿತು.
ಇದೇ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ರವಿಕುಮಾರ್.ಜೆ, NSSಸಂಯೋಜಕರಾದ ಶ್ರೀ ಆನಂದ್.ಆರ್, ಲತಾಶ್ರೀ.ಎಂ ಹಾಗೂ ಕಾಲೇಜಿನ ಉಪನ್ಯಾಸಕರಾದ ನಿವೇದ್.ಎನ್ ಸೇರಿದಂತೆ ಹಲವಾರು ಹಾಜರಿದ್ದರು.




