
ಬಸವಣ್ಣನವರ ಅನುಭವ ಮಂಟಪದಲ್ಲಿ ಮಡಿವಾಳ ಮಾಚಿದೇವರವರಿಗೆ ವಿಶೇಷ ಸ್ಥಾನಮಾನವಿತ್ತು : ಶಾಸಕ ಎಮ್ ಆರ್ ಮಂಜುನಾಥ್

Madiwala Machideva had a special status in Basavanna's Anubhav Mantapa: MLA M.R. Manjunath
ವರದಿ: ಬಂಗಾರಪ್ಪ .ಸಿ .
ಹನೂರು : ಮಾಚಿದೆವರ ಆದರ್ಶ ತತ್ವಗಳನ್ನು ಪ್ರತಿಯೊಬ್ಬ ವ್ಯಕ್ತಿಯೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮ ಜೀವನ ಸಾರ್ಥಕತೆಯಾಗುತ್ತದೆ ಎಂದು ಶಾಸಕ ಎಂ.ಆರ್ ಮಂಜುನಾಥ್ ರವರು ತಿಳಿಸಿದರು..
ಹನೂರು ಪಟ್ಟಣದ ಲೋಕೋಪಯೋಗಿ ವಸತಿ ಗೃಹದಲ್ಲಿ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಮಡಿವಾಳ ಮಾಚಿದೇವರ ಜಯಂತಿಯನ್ನು ಆಚರಿಸುವ ಸಂದರ್ಭದಲ್ಲಿ ಮಡಿವಾಳ ಮಾಚಿದೇವರ ಭಾವಚಿತ್ರ ಪುಷ್ಪ ನಮನ ಸಲ್ಲಿಸುವ ಮೂಲಕ ಮಾತನಾಡಿದ ಅವರು
ಸರಳವಾಗಿ ಅರ್ಥಪೂರ್ಣವಾಗಿ ಆಚರಿಸಲಾಗಿದೆ , 12ನೇ ಶತಮಾನ ಕಾಲಘಟ್ಟದಲ್ಲಿ ಮೌಢ್ಯಗಳಿಂದ ಕೂಡಿದ ಶೋಷಿತರನ್ನು ವರದರವಲ್ಲಿ ಮಡಿವಾಳ ಮಾಚಿದೇವರ ಪಾತ್ರ ಪ್ರಮುಖವಾಗಿದ್ದು ಬಸವಣ್ಣನವರ ಅನುಭವ ಮಂಟಪದ
ಅಂದಿನ ಕಾಲಘಟ್ಟದಲ್ಲಿ ಸಮಾಜದಲ್ಲಿ ಶುದ್ದವಾದ ವಾತಾವರಣ ನಿರ್ಮಾಣ ಮಾಡಲು ಹೊರಟ್ಟಿದ್ದವರು.
ಅನುಭವ ಮಂಟಪದಲ್ಲಿ ಎಲ್ಲಾ ಸಮುದಾಯಕ್ಕೂ ಪ್ರಾತಿನಿಧ್ಯ ನೀಡಲಾಯಿತು. ಅಂತಹವರ ಹೇಳಿಕೆಯನ್ನು ನಾವು ಅರ್ಥೈಸಿಕೊಂಡರೆ ಮುಂದಿನ ಪೀಳಿಗೆಗೆ ಉತ್ತಮ ವಾತವರಣದಲ್ಲಿ ಬದುಕಲು ಸಹಕಾರಿಯಾಗುತ್ತದೆ , ಇಲ್ಲಿರುವ ಸಮುದಾಯ ಮುಖಂಡರುಗಳು ಮೂರು ವರ್ಷ ಅಥವಾ ಐದು ವರ್ಷಗಳ ಕಾಲಕ್ಕೆ ತಕ್ಕಂತೆ ಕಾರ್ಯಕ್ರಮವನ್ನು ಮಾಡಲು ಅವಕಾಶ ಮಾಡಿಕೊಡುತ್ತದೆ ಇದರಿಂದ ಮಕ್ಕಳ ಭವಿಷ್ಯ ಉಜ್ವಲವಾಗಲಿ ಎಂದರು.
ಜಿಲ್ಲಾ ಉಪಾದ್ಯಕ್ಷರಾದ ವಿಜಯಕುಮಾರ್ ಮಾತನಾಡಿ ಹನ್ನೇರಡೆ ಶತಮಾನದಲ್ಲಿ ಬಸವಣ್ಣನವರ ಅನುಯಾಯಿಗಳಾಗಿ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸವನ್ನು ಮಾಡಿದವರು ಇವರು, ವಚನ ಸಾಹಿತ್ಯದಲ್ಲಿ ಕುಲಗುರುಗಳ ಹೆಸರು ಅಜಾರಮರವಾಗಿರಲಿ . ಹಾಗೂ
ನಮ್ಮ ಭಾಗದ ಸಮುದಾಯದ ಜನಾಂಗದ ಪರವಾಗಿ ನಿಂತು ಕೆಲಸ ಮಾಡಿದ ನಮ್ಮ ಶಾಸಕರು ,ಇಂಥ ಮಹನಿಯರ ಜಯಂತಿಯನ್ನು ಆಚರಿಸುವುದೆ ನಮಗೆ ಹೆಮ್ಮೆಯ ವಿಷಯವಾಗಿದೆ ಎಂದರು.
ಇದೇ ಸಂದರ್ಭದಲ್ಲಿ
ತಾಲೂಕು ದಂಡಾಧಿಕಾರಿಗಳಾದ ಚೈತ್ರ,ಮಡಿವಾಳ ಸಮುದಾಯದ ಜಿಲ್ಲಾ ಉಪಾಧ್ಯಕ್ಷರಾದ ಹಾಗೂ ತಾಲೂಕು ಅಧ್ಯಕ್ಷರಾದ ವಿಜಯ್ ಕುಮಾರ್,ಸಮುದಾಯದ ಮುಖಂಡರುಗಳಾದ ಕೃಷ್ಣ, ಡಿ ಅರ್ ಮಾದೇಶ್ . ಅಜ್ಜೀಪುರ ಮಹಾದೇವಶೆಟ್ಟಿ, ರಮೇಶ್, ನಂದೀಶ್, ಮಹದೇವಕುಮಾರ್,ಶಾಂತು, ನಾಗಣ್ಣ, ಕುಮಾರ್, ಹಾಗೂ ಪೋಲಿಸ್ ಇಲಖೆಯ ಶಿವಮೂರ್ತಿ ,ಅಗ್ನಿಶಾಮಕ ಠಾಣೆ ಅಧಿಕಾರಿ ಮಹೇಶ್ ,ಶಿಕ್ಷಕರಾದ ವೆಂಕಟಚಲರವರು ಸೇರಿದಂತೆ ಇನ್ನಿತರರು ಹಾಜರಿದ್ದರು..




