
ಹಿಂದು ಸಮಾಜತೋತ್ಸವದ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲು ತಿರ್ಮಾನ .

Tirmana to celebrate Hindu Samajwadi Festival grandly.

ವರದಿ: ಬಂಗಾರಪ್ಪ .ಸಿ .
ಹನೂರು : ಕ್ಷೇತ್ರ ವ್ಯಾಪ್ತಿಯಲ್ಲಿನ ಮಾರ್ಟಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಬಿದರಹಳ್ಳಿ ಗ್ರಾಮದಲ್ಲಿ ಮುಂದಿನ ತಿಂಗಳು ಫೆಬ್ರವರಿ 1ನೇ ತಾರೀಖಿನಂದು ಹಿಂದೂ ಸಮಾಜೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಇದೇ ವಿಷಯವಾಗಿ ಇಂದು ಬಿದರಳ್ಳಿ ಗ್ರಾಮದ ಶ್ರೀ ಶನೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಹಿಂದೂ ಸಮಾಜೋತ್ಸವ ಕಾರ್ಯಕ್ರಮದ ಬಿತ್ತಿಪತ್ರವನ್ನು ಗೌಡ್ರು ಮಾದಯ್ಯನವರು ಬಿಡುಗಡೆಗೊಳಿಸಿದರು.
ಹನೂರು ತಾಲ್ಲೂಕಿನ ಬಿದರಳ್ಳಿಯಲ್ಲಿ ಮಾತನಾಡಿದ ಮಾದಯ್ಯನವರು ಈ ಕಾರ್ಯಕ್ರಮದಲ್ಲಿ ಸಾಲೂರು ಮಠದ ಶ್ರೀ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿಗಳ ಸಾನಿಧ್ಯ ವಹಿಸಲಿದ್ದು, ಕಡಬೂರಿನ ಪುಟ್ಟರಾಜರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆಂದು ತಿಳಿಸಿದರು. ಅಲ್ಲದೆ ಈ ಕಾರ್ಯಕ್ರಮಕ್ಕೆ ಮಾರ್ಟಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸುತ್ತಮುತ್ತಿನ ಗ್ರಾಮಗಳಿಂದ ಗ್ರಾಮಸ್ಥರು ಮತ್ತು ಮುಖಂಡರು ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸಮಿತಿಯ ಪರವಾಗಿ ವಿನಂತಿಸಿದರು ಎಂದು ಹೇಳಲಾಗಿದೆ.
ಇದೇ ಸಂದರ್ಭದಲ್ಲಿ ತಾಲೂಕು ಸಮಿತಿಯ ಸಂಯೋಜಕ ವಡಿಕೆಹಳ್ಳ ಶಿವಮೂರ್ತಿ , ಕಡಬೂರು ಮಾದೇಶ್, ಸಿದ್ದೇಶ್, ಜಿಲ್ಲಾ ಸಹಪ್ರಚಾರಕ್ ವೇಣು ಇನ್ನು ಅನೇಕ ಮುಖಂಡರು ಈ ಸಂದರ್ಭದಲ್ಲಿ ಉಪಸಿತರಿದ್ದರು



