
ಬೆಂಗಳೂರಿನಲ್ಲಿ ಜ. 29 ರಿಂದ ಚರ್ಮರೋಗ, ಲೈಂಗಿಕ ರೋಗ ತಜ್ಞರ ಸಮ್ಮೇಳನ “ಡರ್ಮಕಾನ್ – 2026: ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್ ಉದ್ಘಾಟನೆ

Dermatology and Venereology Conference “Dermacon – 2026” to be held in Bengaluru from Jan. 29: Minister Dr. Sharan Prakash Patil to inaugurate

ಬೆಂಗಳೂರು: ಭಾರತೀಯ ಚರ್ಮರೋಗ, ಲೈಂಗಿಕ ರೋಗ ಮತ್ತು ಕುಷ್ಠರೋಗ ತಜ್ಞರ ಸಂಘದ 54ನೇ ರಾಷ್ಟ್ರೀಯ ಸಮ್ಮೇಳನ “ಡರ್ಮಕಾನ್ – 2026 ಜ. 29 ರಿಂದ ಫೆಬ್ರವರಿ 1 ರ ವರೆಗೆ ಬೆಂಗಳೂರಿನಲ್ಲಿ ನಡೆಯಲಿದ್ದು, ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಸಮ್ಮೇಳನ ಉದ್ಘಾಟಿಸಲಿದ್ದಾರೆ.
ಕ್ಲಾರ್ಕ್ಸ್ ಎಕ್ಸೋಟಿಕಾ ಕನ್ವೆನ್ಷನ್ ಅಂಡ್ ಸ್ಪಾ ನಲ್ಲಿ ನಡೆಯಲಿರುವ ರಾಷ್ಟ್ರೀಯ ಸಮ್ಮೇಳನದಲ್ಲಿ ಹಲವು ಮಹತ್ವದ ವಿಷಯಗಳ ಬಗ್ಗೆ ವಿಚಾರ, ವಿನಿಯಮ ನಡೆಯಲಿದೆ. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ಸಂಸ್ಥೆಯ ಕುಲಪತಿ ಡಾ. ಭಗವಾನ್ ಬಿ.ಸಿ, ಐಎಡಿವಿಎಲ್ ಅಧ್ಯಕ್ಷ ಡಾ. ರಾಜೀವ್ ಶರ್ಮಾ, ಉಪಾಧ್ಯಕ್ಷ ಡಾ. ವಿನಯ್ ಸಿಂಗ್, ಗೌರವ ಕಾರ್ಯದರ್ಶಿ ಡಾ. ಭೂಮೇಶ್ ಕುಮಾರ್, ಸಂಘಟನಾ ಅಧ್ಯಕ್ಷ ಡಾ. ಎಸ್. ಸಚ್ಚಿದಾನಂದ್, ಸಂಘಟನಾ ಕಾರ್ಯದರ್ಶಿ ಡಾ. ಆರ್. ರಘುನಾಥ್ ರೆಡ್ಡಿ, ವೈಜ್ಞಾನಿಕ ವಿಭಾಗದ ಅಧ್ಯಕ್ಷ ಡಾ. ಬಿ.ಎಸ್. ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿರಲಿದ್ದಾರೆ.
“ಡರ್ಮಕಾನ್ – 2026 ಒಂದು ಪ್ರತಿಷ್ಠಿತ ಶೈಕ್ಷಣಿಕ ಹಾಗೂ ವೈಜ್ಞಾನಿಕ ಸಮಾವೇಶವಾಗಿದ್ದು, ದೇಶ, ವಿದೇಶಗಳ ಪ್ರಮುಖ ಚರ್ಮರೋಗ ತಜ್ಞರು, ಸಂಶೋಧಕರು, ಶೈಕ್ಷಣಿಕ ತಜ್ಞರು ಮತ್ತು ಕೈಗಾರಿಕಾ ಪರಿಣಿತರನ್ನು ಒಟ್ಟುಗೂಡಿಸಲಿದೆ. ಈ ಸಮ್ಮೇಳನದಲ್ಲಿ 4,000ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದ್ದು, ಇದು ಈ ಪ್ರದೇಶದ ಅತಿದೊಡ್ಡ ಚರ್ಮರೋಗ ಸಮ್ಮೇಳನಗಳಲ್ಲಿ ಒಂದಾಗಿದೆ.
“ಚರ್ಮದ ಶಕ್ತೀಕರಣ: ವಿಜ್ಞಾನ, ಅನ್ವಯಿಕೆ, ಸೃಜನಶೀಲತೆ ಮತ್ತು ಒಳಗೊಳ್ಳುವಿಕೆ” ಎಂಬುದು ಸಮಾವೇಶದ ವಿಷಯವಾಗಿದ್ದು, ವೈಜ್ಞಾನಿಕ ಶ್ರೇಷ್ಠತೆ, ನಾವೀನ್ಯತೆ ಮತ್ತು ಸಮಸ್ಯೆ ಇರುವ ಚರ್ಮ ಆರೈಕೆಯನ್ನು ಮುಂದುವರಿಸುವಲ್ಲಿ ಚರ್ಮರೋಗ ಶಾಸ್ತ್ರದ ಬದಲಾಗುತ್ತಿರುವ ಪಾತ್ರವನ್ನು ಸಮಾವೇಶ ಪ್ರತಿಬಿಂಬಿಸುತ್ತದೆ.
ಈ ಕಾರ್ಯಕ್ರಮದಲ್ಲಿ ಚರ್ಮರೋಗ ಶಾಸ್ತ್ರ, ಲೈಂಗಿಕ ರೋಗ ಶಾಸ್ತ್ರ ಮತ್ತು ಕುಷ್ಠರೋಗ ಶಾಸ್ತ್ರಕ್ಕೆ ಸಂಬಂಧಿಸಿದ ಇತ್ತೀಚಿನ ಅಭಿವೃದ್ಧಿಗಳು ಹಾಗೂ ಉತ್ತಮ ಚಿಕಿತ್ಸಾ ಕ್ರಮಗಳನ್ನು ಪ್ರದರ್ಶಿಸುವ ಸಮಗ್ರ ವೈಜ್ಞಾನಿಕ ಅಧಿವೇಶನಗಳು, ಗುಂಪು ಚರ್ಚೆಗಳು, ಕಾರ್ಯಾಗಾರಗಳು ನಡೆಯಲಿವೆ.
“ಡರ್ಮಕಾನ್ – 2026 ಬೆಂಗಳೂರಿನ ಪರಿಣಿತ ಚರ್ಮರೋಗ ತಜ್ಞರ ತಂಡ ಆಯೋಜಿಸುತ್ತಿದೆ. ವೈದ್ಯಕೀಯ ಶಿಕ್ಷಣ ಮತ್ತು ವೈಜ್ಞಾನಿಕ ಅನ್ವೇಷಣೆಯಲ್ಲಿ ಪ್ರಮುಖ ಕೇಂದ್ರವಾಗಿ ಬೆಂಗಳೂರಿನ ಸ್ಥಾನವನ್ನು ಮತ್ತೊಮ್ಮೆ ದೃಢಪಡಿಸುತ್ತದೆ. ಈ ಸಮ್ಮೇಳನವು ಚರ್ಮ ಆರೈಕೆ, ಕೂದಲು ಆರೈಕೆ ಹಾಗೂ ಸೌಂದರ್ಯ ಆರೈಕೆಯನ್ನು ಒದಗಿಸುವಲ್ಲಿ ಚರ್ಮರೋಗ ತಜ್ಞರ ಪಾತ್ರದ ಮೇಲೆ ಗಮನಹರಿಸುತ್ತದೆ. ಚರ್ಮರೋಗ ತಜ್ಞರು, ನೈಜ ಕೂದಲು ತಜ್ಞರು ಹಾಗೂ ನೈಜ ಸೌಂದರ್ಯ ತಜ್ಞರ ಪಾತ್ರದ ಬಗ್ಗೆ ಸಮ್ಮೇಳನದಲ್ಲಿ ಚರ್ಚೆ ನಡೆಸಲಾಗುತ್ತದೆ.




